Advertisement

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

12:41 AM Mar 29, 2024 | Team Udayavani |

ಹೊಸದಿಲ್ಲಿ: ಕೋಲ್ಕತಾ ನೈಟ್‌ರೈಡರ್ಸ್‌ ತಂಡದ ಕೋಚ್‌ ಚಂದ್ರಕಾಂತ್‌ ಪಂಡಿತ್‌ ಅವರ ಅತಿಶಿಸ್ತಿನಿಂದ; ಐಪಿಎಲ್‌ನ ಕಳೆದ ಋತುವಿನಲ್ಲಿ ಹಲವು ವಿದೇಶಿ ಆಟಗಾರರು ಹತಾಶೆಗೊಳಗಾಗಿದ್ದರು ಎಂದು ಮಾಜಿ ಆಟಗಾರ ಡೇವಿಡ್‌ ವೀಸ್‌ ಆರೋಪಿಸಿದ್ದಾರೆ. ಕಳೆದ ಬಾರಿ ತನಗೆ ತಂಡದಲ್ಲಿ ಬಹಳ ಅವಕಾಶ ಸಿಕ್ಕಿರಲಿಲ್ಲ ಎಂದು ದಕ್ಷಿಣ ಆಫ್ರಿಕಾ ಮತ್ತು ನಮೀಬಿಯ ತಂಡದ ಆಲ್‌ರೌಂಡರ್‌ ಆಗಿರುವ ವೀಸ್‌ ಹೇಳಿಕೊಂಡಿದ್ದಾರೆ.

Advertisement

ಹೇಗೆ ವರ್ತಿಸಬೇಕು? ಏನನ್ನು ಧರಿಸಬೇಕು? ಹೇಗೆ ಮಾತನಾಡಬೇಕು? ಎಂಬ ಕುರಿತು ಚಂದ್ರಕಾಂತ್‌ ಪದೇಪದೆ ಹೇಳುತ್ತಲೇ ಇದ್ದರು. ಸಾಮಾನ್ಯವಾಗಿ ವಿಶ್ವಾದ್ಯಂತ ಕ್ರಿಕೆಟ್‌ ಆಡಿರುವ ಕ್ರಿಕೆಟಿಗರಿಗೆ ಇಂತಹ ಮಾತುಗಳೆಲ್ಲ ಹಿಡಿಸು ವುದಿಲ್ಲ. ಅವರಿಗೆ ತಾವು ಹೇಗಿರಬೇಕೆಂದು ಸಹಜ ವಾಗಿಯೇ ಗೊತ್ತಿರುತ್ತದೆ. ಹಾಗಾಗಿ ಕೆಲವರು ಸಿಟ್ಟಾಗಿದ್ದರು. ಆದರೆ ನಾನು ಮಾತ್ರ, ಹೇಳಿದ್ದಕ್ಕೆಲ್ಲ ಮರುಮಾತಿಲ್ಲದೇ ಒಪ್ಪಿಕೊಂಡಿದ್ದೆ ಎಂದು 38ರ ಹರೆಯದ ವೀಸ್‌ ಹೇಳಿದ್ದಾರೆ. ಅವರು 2023ರ ಋತುವಿನಲ್ಲಿ ಕೆಕೆಆರ್‌ ಪರ 3 ಪಂದ್ಯಗಳಲ್ಲಿ ಆಡಿದ್ದರು.

ಪಂಡಿತ್‌ ಅವರು ಅತಿಶಿಸ್ತಿನ ತರಬೇತುದಾರ ಎಂದೇ ಹೆಸರುವಾಸಿ. ಅವರ ತರಬೇತಿಯಲ್ಲಿ ದೇಶೀಯ ತಂಡಗಳು ಅತ್ಯುತ್ತಮ ಯಶಸ್ಸು ಸಾಧಿಸಿವೆ. 2018 ಮತ್ತು 2019ರಲ್ಲಿ ವಿದರ್ಭ, 2022ರಲ್ಲಿ ಮಧ್ಯಪ್ರದೇಶ ಚೊಚ್ಚಲ ಬಾರಿ ರಣಜಿ ಗೆಲ್ಲಲು ಚಂದ್ರಕಾಂತ್‌ ಮಾರ್ಗದರ್ಶನ ನೀಡಿದ್ದರು. ನ್ಯೂಜಿಲ್ಯಾಂಡಿನ ಬ್ರೆಂಡನ್‌ ಮೆಕಲಮ್‌ ಅವರು 2022ರಲ್ಲಿ ಕೆಕೆಆರ್‌ ಕೋಚ್‌ ಹುದ್ದೆ ತ್ಯಜಿಸಿದ ಬಳಿಕ, ಪಂಡಿತ್‌ ಮುಖ್ಯ ಕೋಚ್‌ ಆಗಿ ಅಧಿಕಾರ ಸ್ವೀಕರಿಸಿದ್ದರು.

ಚಂದ್ರಕಾಂತ್‌ಗೆ ರಸೆಲ್‌ ಬೆಂಬಲ
ಬೆಂಗಳೂರು: ಕೆಕೆಆರ್‌ ತಂಡದ ಮುಖ್ಯ ಕೋಚ್‌ ಚಂದ್ರಕಾಂತ್‌ ಪಂಡಿತ್‌ ಅವರ ಕೋಚಿಂಗ್‌ ಶೈಲಿಯನ್ನು ವಿಂಡೀಸ್‌ ಆಲ್‌ರೌಂಡರ್‌, ಕೆಕೆಆರ್‌ ಆಟಗಾರ ಆ್ಯಂಡ್ರೆ ರಸೆಲ್‌ ಬೆಂಬಲಿಸಿದ್ದಾರೆ. ಕಳೆದ ವರ್ಷದಿಂದ ನಾವು ಅವರೊಂದಿಗೆ ಕೆಲಸ ಮಾಡುತ್ತಿದ್ದೇವೆ. ನೀವು ಮೊದಲ ಬಾರಿಗೆ ತರಬೇತುದಾರರೊಂದಿಗೆ ಕೆಲಸ ಮಾಡುತ್ತಿರುವಾಗ, ನೀವು ಅವರ ಕ್ರಮಕ್ಕೆ ಹೊಂದಿಕೊಳ್ಳಬೇಕು. ಪ್ರತಿಯೊಂದು ಕಡೆಯೂ ಅವರದ್ದೇ ಆದ ನಿಯಮಗಳಿರುತ್ತವೆ. ಅವರು ಅದ್ಭುತ ಕೆಲಸ ಮಾಡುತ್ತಿದ್ದಾರೆ ಮತ್ತು ನಾವು ಅವರ ಪ್ರಯತ್ನವನ್ನು ಬೆಂಬಲಿಸುತ್ತೇವೆ ಎಂದು ರಸೆಲ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next