Advertisement

ಸೃಜನಾತ್ಮಕ ಕಲೆ ಕಲಿಕೆಗೂ ಇದೆ ವೇದಿಕೆ 

12:58 PM Sep 19, 2018 | |

ಶಾಲೆ, ಕಾಲೇಜುಗಳಲ್ಲಿ ಪಠ್ಯದ ಜತೆಗೆ ಇತರ ಹವ್ಯಾಸವನ್ನು ಬೆಳೆಸಿಕೊಳ್ಳಲಿ ಎನ್ನುವ ಉದ್ದೇಶದಿಂದ ಪಠ್ಯತರ ಚಟುವಟಿಕೆಗಳಿಗೆ ಒತ್ತು ನೀಡುವುದು ಸಾಮಾನ್ಯ. ಇದರಿಂದ ವಿದ್ಯಾರ್ಥಿಗಳು ತಮಗೆ ಇಷ್ಟ ಬಂದಂತಹ ವಿಷಯಗಳಲ್ಲಿ ತರಬೇತಿಗಳನ್ನು ಪಡೆದು ಹವ್ಯಾಸವನ್ನು ಬೆಳೆಸಿಕೊಳ್ಳಲು ಅವಕಾಶ ಸಿಕ್ಕಂತಾಗುತ್ತದೆ.

Advertisement

ಮುಖ್ಯವಾಗಿ ಚಿತ್ರಕಲೆ, ಮಣ್ಣಿನ ಕಲಾಕೃತಿ ರಚನೆ, ಕರಕುಶಲ ವಸ್ತುಗಳ ತಯಾರಿ, ರಂಗೋಲಿ, ಹೊಲಿಗೆ, ಕಸದಿಂದ ರಸ ಮಾಡುವಂತಹ ಹವ್ಯಾಸ ಬೆಳೆಸಿಕೊಂಡರೆ ಮುಂದೆ ಇದರಿಂದಲೂ ಒಳ್ಳೆಯ ಭವಿಷ್ಯವನ್ನು ರೂಪಿಸಿಕೊಳ್ಳಲು ನೂರಾರು ಅವಕಾಶಗಳು ಸಿಗುತ್ತವೆ.

ಪಠ್ಯದ ಜತೆಗಿನ ಕಲಿಕೆ
ಇಂತಹ ವಿದ್ಯೆಗೆ ಪ್ರತ್ಯೇಕ ತರಬೇತಿ ಅಗತ್ಯ ಇರುವುದಿಲ್ಲ. ಶ್ರದ್ಧೆ, ಆಸಕ್ತಿ ಹಾಗೂ ಸೃಜನಶೀಲತೆ ಇದ್ದರೆ ಸಾಕು ಯಾರೂ ಬೇಕಾದರೂ ಈ ಕಲೆಯನ್ನು ತಮ್ಮ ಹವ್ಯಾಸವಾಗಿ, ವೃತ್ತಿಯಾಗಿ, ಪ್ರವೃತ್ತಿಯಾಗಿ ಬೆಳೆಸಿಕೊಳ್ಳಬಹುದು.

ಕಾಲೇಜು ತರಬೇತಿ
ಕಾಲೇಜುಗಳಲ್ಲಿ ಇಂತಹ ಶಿಕ್ಷಣಗಳು ವಿದ್ಯಾರ್ಥಿಗಳನ್ನು ಹೆಚ್ಚಾಗಿ ಆಕರ್ಷಿಸುತ್ತವೆ. ಈ ಸಂದರ್ಭದಲ್ಲಿ ಕಲಿಕೆಗೆ ಅವಕಾಶಗಳು ಹೆಚ್ಚಿರುವುದರಿಂದ ಸಮಯ ಸಿಕ್ಕಾಗ ಡ್ರಾಯಿಂಗ್‌ ತರಬೇತಿಗಳು, ಮಣ್ಣಿನ ಕಲಾಕೃತಿ ರಚನೆ, ಕರಕುಶಲ ವಸ್ತುಗಳ ತಯಾರಿ, ರಂಗೋಲಿ ಹಾಕುವುದು, ಹೊಲಿಗೆ, ಅಥವಾ ಕೆಲವು ತ್ಯಾಜ್ಯ ವಸ್ತುಗಳಿಂದ ಮನೆ ಅಲಂಕಾರಿಕ ವಸ್ತುಗಳನ್ನು ತಯಾರಿಸುವಂತಹ ಹಲವು ತರಬೇತಿಗಳು ತೊಡಗಿಕೊಳ್ಳಬಹುದು. ಈ ಹವ್ಯಾಸಗಳ ಕಲಿ ಕೆಗೆ ವಯಸ್ಸಿನ ಮಿತಿ ಇಲ್ಲ. ಹೀಗಾಗಿ ಉದ್ಯೋಗಕ್ಕೆ ಸೇರಿದ ಮೇಲೂ ಇವುಗಳನ್ನು ಕಲಿಯುವ ಅವಕಾಶ ಸಾಕಷ್ಟಿರುತ್ತವೆ.

ಒಂದು ವೇಳೆ ವಿದ್ಯೆ ತಲೆಹತ್ತದಿದ್ದರೂ, ಈ ಹವ್ಯಾಸವೇ ಭವಿಷ್ಯಕ್ಕೆ ದಾರಿ ತೋರಿಸುತ್ತದೆ. ಇಂತಹ ತರಬೇತಿಗಳಿಗೆ ಸ್ಫೂರ್ತಿಯಾಗುವುದು ಕಾಲೇಜು, ಅಂತರ್‌ಕಾಲೇಜು ಸ್ಪರ್ಧೆಗಳು ಜತೆಗೆ ಪಠ್ಯೇತರ ಚಟುವಟಿಕೆಗಳು. ಕಾಲೇಜುಗಳಲ್ಲಿ ಸ್ಪರ್ಧೆಗಳಿಗೆ ತರಬೇತಿ ಹಾಗೂ ತಯಾರಿಯನ್ನು ನಡೆಸುವುದರಿಂದ ಬಹುಮಾನ ಗಳಿಸುವ ತವಕದಲ್ಲಿ ಅವುಗಳು ಉತ್ತಮ ಪ್ರತಿಭೆಗಳನ್ನು ಬೆಳಕಿಗೆ ತರುತ್ತವೆ. ಕೆಲವೊಂದು ಖಾಸಗಿ ಸಂಸ್ಥೆಗಳು, ಸರಕಾರದ ಮೂಲಕ ನಡೆಸಲ್ಪಡುವ ಕೈಗಾರಿಕೆಗಳು, ಎನ್‌ಜಿಒಗಳು ಉಚಿತವಾಗಿ ಇಂಥ ತರಬೇತಿಗಳನ್ನು ನೀಡುತ್ತವೆ. ಈ ಮೂಲಕ ಮಾತ್ರವಲ್ಲದೇ ಅಂತರ್ಜಾಲದ ಮೂಲಕವೂ ಸುಲಭವಾಗಿ ಇವುಗಳನ್ನು ಕಲಿಯಬಹುದು. 

Advertisement

ಭರತ್‌ ರಾಜ್‌ ಕರ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next