Advertisement

ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸಿ

02:06 PM May 20, 2018 | |

ಪಿರಿಯಾಪಟ್ಟಣ: ಬಾಲ್ಯದಿಂದಲೇ ಮಕ್ಕಳಲ್ಲಿ ಪ್ರತಿಭೆ ಹೊರತರಲು ಪೋಷಕರು ವೇದಿಕೆ ಕಲ್ಪಿಸಬೇಕು ಎಂದು ನಟ ಪ್ರೇಮ್‌ ತಿಳಿಸಿದರು.
ಪಟ್ಟಣದ ಸಾಯಿ ಸಮುದಾಯ ಭವನದಲ್ಲಿ ಸಂಕಲ್ಪ ನೃತ್ಯ ಕಲಾ ಶಾಲೆ ಹಮ್ಮಿಕೊಂಡಿದ್ದ ಚಿಲಿಪಿಲಿ ಕಲರವ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಪ್ರತಿ ಮಗುವಿನಲ್ಲೂ ಬಾಲ್ಯದಲ್ಲೇ ಪ್ರತಿಭೆ ಅಡಗಿರುತ್ತದೆ. ಸೂಕ್ತ ವೇದಿಕೆ ಕಲ್ಪಿಸುವ ಮೂಲಕ ಹೊರಹಾಕಲು ಪ್ರಯತ್ನಿಸಬೇಕು. ಇಂತಹ ಕೆಲಸವನ್ನು ನೃತ್ಯ ಕಲಾ ಶಾಲೆಗಳು ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಕೇವಲ ಪಾಠ ಪ್ರವಚನದಿಂದಷ್ಟೇ ಜಾnನ ಪಡೆಯಲು ಸಾಧ್ಯವಿಲ್ಲ.

ಅದರ ಜೊತೆಗೆ ಪಠ್ಯೇತರ ಚಟುವಟಿಕೆಗಳು ಅವಶ್ಯಕವಾಗಿದೆ. ಕಲಾ ಶಾಲೆಗಳಿಂದಾಗಿ ಕಲಾ ಸಂಸ್ಕೃತಿಯು ಉಳಿಯುತ್ತದೆ. ಪ್ರತಿಯೊಬ್ಬರಿಗೂ ಕನ್ನಡ ನಾಡು ನುಡಿಯ ಬಗ್ಗೆ ಜಾಗೃತಿ, ಅಭಿಮಾನ ಹೆಚ್ಚಾಗುತ್ತದೆ. ಪ್ರತಿಪಾತ್ರಗಳಲ್ಲಿಯೂ ತನ್ನದೇ ಆದಂತಹ ಸ್ಥಾನಮಾನ ಗೌರವ ಹೆಚ್ಚಾಗುತ್ತದೆ. ಈ ಕಾರಣಕ್ಕಾಗಿ ಪೋಷಕರು ಮಕ್ಕಳಲ್ಲಿರುವ ಪ್ರತಿಭೆಗಳಿಗೆ ಸೂಕ್ತ ಅವಕಾಶ ಕಲ್ಪಿಸಬೇಕು ಎಂದರು.

ಈ ಸಂದರ್ಭದಲ್ಲಿ ಲವಿ ಸ್ಟಾರ್‌ ಪ್ರೇಮ್‌ ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕಗಳಿಸಿದ ಪಟ್ಟಣದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯತು. ತಾಪಂ ಅಧ್ಯಕ್ಷೆ ನಿರೂಪಾ ರಾಜೇಶ್‌, ಪುರಸಭೆ ಅಧ್ಯಕ್ಷ ವೇಣುಗೋಪಾಲ್‌, ಸದಸ್ಯ ನಂಜುಂಡಸ್ವಾಮಿ, ಬಿಗ್‌ಬಾಸ್‌ ಖ್ಯಾತಿಯ ಜಾದೂಗಾರ್ತಿ ಸುಮಾರಾಜ್‌ಕುಮಾರ್‌,

ಸಂಕಲ್ಪ ನೃತ್ಯ ಕಲಾ ಶಾಲೆಯ ಸ್ಥಾಪಕರಾದ ಮಂಜುನಾಥ್‌, ಭವ್ಯ, ನೃತ್ಯ ಸಂಯೋಜಕರಾದ ಭರತ್‌, ನಿಸರ್ಗ, ಮಾಲಿನಿ, ಪ್ರಸನ್ನ, ಸ್ಫೂರ್ತಿ ಸ್ವಾವಲಂಬಿ ಟ್ರಸ್ಟ್‌ ನ ಆಶಾ ಮಹದೇವ್‌, ಆದಿಚುಂಚನಗಿರಿ ಶಾಲೆಯ ವ್ಯವಸ್ಥಾಪಕ ಸುಧಾಕರ್‌, ಆರ್‌ಎಸ್‌ಎಸ್‌ ಹಿರಿಯ ಮುಖಂಡ ನಾರಾಯಣ ಅಡಪಂಗ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next