Advertisement
ಪ್ರೇಮಿಗಳ ಪಾಲಿನ ನೆಚ್ಚಿನ ತಾಣ, ಪರಿಸರ ಪ್ರಿಯರ ಅಚ್ಚುಮೆಚ್ಚಿನ ತಾಣವಾದ ನಂದಿ ಗಿರಿಧಾಮಕ್ಕೆ ಕಾನೂನಾತ್ಮಕವಾಗಿ ವಿಶೇಷ ಸ್ಥಾನಮಾನ ಕಲ್ಪಿಸುವ ಮೂಲಕ ಗಿರಿಧಾಮದ ಪ್ರಾಕೃತಿಕ ಸೊಬಗನ್ನು ಭವಿಷ್ಯದ ಪೀಳಿಗೆಗೆ ಉಳಿಸಬೇಕೆಂಬ ನಿಟ್ಟಿನಲ್ಲಿ ಪಣತೊಟ್ಟು ಖ್ಯಾತ ಪರಿಸರವಾದಿ ಡಾ. ಯಲ್ಲಪ್ಪರೆಡ್ಡಿ ನೇತೃತ್ವದಲ್ಲಿ ಪರಿಸರ ಚಿಂತಕರ ತಂಡ ಕಾನೂನು ಸಮರಕ್ಕೆ ಸಜ್ಜಾಗುತ್ತಿದೆ. ಇದರ ಬೆನ್ನಲ್ಲೇ ಜಿಲ್ಲಾಡಳಿತ ಕೂಡ ಇಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಮುಂದಾಗಿದೆ. ಸರಿ ಸುಮಾರು 90 ಎಕರೆ ವಿಸ್ತೀಣದಲ್ಲಿರುವ ನಂದಿಗಿರಿಧಾಮ, ಐತಿಹಾಸಿಕವಾಗಿ ಅನೇಕ ವೈಶಿಷ್ಟéತೆಯ ಕುರುಹಗಳಿಗೆ ಸಾಕ್ಷಿಯಾಗಿ ನಿಂತಿದ್ದು, ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಪೂರಕವಾಗುವ ನಿಟ್ಟಿನಲ್ಲಿ ಈಗ ಜಿಲ್ಲಾಡಳಿತ ಇಕೋ ಟೂರಿಸಂನ್ನು ಬಲವರ್ಧನೆಗೊಳಿಸುವ ದಿಸೆಯಲ್ಲಿ ದಿಟ್ಟ ಹೆಜ್ಜೆ ಇಡುತ್ತಿದೆ.
ಗಣಿಗಾರಿಕೆ, ಖಾಸಗಿ ರೆಸಾರ್ಟ್‌ಗಳ ಹಾವಳಿಯಿಂದ ಹಾಗೂ ಪ್ರವಾಸಿಗರು ಯಾವುದೇ ಅಡೆತಡೆ ಇಲ್ಲದೆ ಬಳಸುತ್ತಿರುವ ಪ್ಲಾಸ್ಟಿಕ್ ಕೈ ಚೀಲಗಳು, ತಿಂದು ಬಿಸಾಡಿದ ಆಹಾರದ ಪ್ಯಾಕೇಟ್‌ಗಳು, ನೀರಿನ ಬಾಟಲುಗಳಿಂದ ಗಿರಿಧಾಮದಲ್ಲಿ ಎತ್ತ ನೋಡಿದರೂ ಕಸದ ರಾಶಿಗಳು ಬಿದ್ದಿವೆ. ಇದರಿಂದಾಗಿ ಕಸದ ಸಮಸ್ಯೆ ಬೆಟ್ಟದ ಮೇಲೆ ಬೃಹದಾಕಾರವಾಗಿ ಬೆಳೆದು, ಗಿರಿಧಾಮದ ಸೌಂದರ್ಯಕ್ಕೆ ಕಂಟಕವಾಗಿದೆ.
Related Articles
Advertisement
ಈಗಾಗಲೇ ಇದಕ್ಕೆ ಪೂರ್ವ ಸಿದ್ದತೆಗಳನ್ನು ಮಾಡಿ ಕೊಂಡಿರುವ ಜಿಲ್ಲಾಡಳಿತ, ತೋಟಗಾರಿಕಾ ಇಲಾಖೆಯನ್ನು ಸಂಪರ್ಕಿಸಿ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಪ್ರವಾಸಿಗರಲ್ಲಿ ಈಗನಿಂದಲೇ ಅರಿವು ಮೂಡಿಸುವ ಕೆಲಸ ಆರಂಭಿಸಿದೆ.
ಪ್ಲಾಸ್ಟಿಕ್ ವಸ್ತುಗಳ ಬಳಕೆ ಮೇಲೆ ಸಂಪೂರ್ಣ ನಿಷೇಧ ಹೇರಲಾಗುತ್ತಿದೆ. ಪ್ರವಾಸಿಗರು ಪ್ಲಾಸ್ಟಿಕ್ ಬಳಕೆ ಮಾಡುವುದುಕಂಡು ಬಂದರೆ ದಂಡ ವಿಧಿಸುವುದು ಮಾತ್ರವಲ್ಲ, ಕಾನೂನುಬದ್ಧವಾಗಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.
– ದೀಪ್ತಿ ಕಾನಡೆ, ಜಿಲ್ಲಾಧಿಕಾರಿ – ಕಾಗತಿ ನಾಗರಾಜಪ್ಪ