Advertisement

ಪ್ಲಾಸ್ಟಿಕ್‌ ಬಳಕೆ ಅಪಾಯ: ಕೈಪಿಡಿ ಬಿಡುಗಡೆ

02:14 PM Jan 04, 2018 | Team Udayavani |

ಬಂಟ್ವಾಳ: ಪ್ಲಾಸ್ಟಿಕ್‌ನಿಂದಾಗುವ ದುಷ್ಪರಿಣಾಮಗಳ ಕುರಿತು ಜನರು ಎಚ್ಚೆತ್ತುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್‌ ಬಳಕೆ ಮಿತಗೊಳಿಸಿ ಸ್ವಚ್ಚ ಭಾರತದ ಕಲ್ಪನೆ ಸಾಕಾರಗೊಳಿಸಬೇಕಾಗಿದೆ ಎಂದು ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರ ಹೇಳಿದರು. ಅವರು ಬಂಟ್ವಾಳ ಎಸ್‌ವಿಎಸ್‌ ಕಾಲೇಜು ವಿಶ್ರಾಂತ ಉಪನ್ಯಾಸಕ ಪ್ರೊ| ರಾಜಮಣಿ ರಾಮಕುಂಜ ಮನೆಯಲ್ಲಿ ಪ್ಲಾಸ್ಟಿಕ್‌ ಬಳಕೆಯ ದುಷ್ಪರಿಣಾಮಗಳ ಕುರಿತು ಎಚ್ಚರಿಕೆ ಫಲಕ ಅನಾವರಣಗೊಳಿಸಿ ಮಾತನಾಡಿದರು.

Advertisement

ಪ್ಲಾಸ್ಟಿಕ್‌ ಒಂದು ಅಳಿಸಲಾಗದ ವಸ್ತು. ಉರಿಸಿದರೆ ವಾತಾವರಣದ ಮೂಲಕ ಜೀವ ಸಂಕುಲಕ್ಕೆ ಇನ್ನಷ್ಟು ಹಾನಿ ಉಂಟು ಮಾಡುತ್ತದೆ. ಇದು ಮಣ್ಣಲ್ಲಿ ಕರಗಲು ನೂರಾರು ವರ್ಷ ಬೇಕು. ಅದರ ಬಳಕೆ ಕಡಿಮೆ ಮಾಡುವಲ್ಲಿ ನಾವೇ ಸ್ವತಃ ಮುತುವರ್ಜಿ ವಹಿಸಬೇಕು ಎಂದರು.

ಬಂಟ್ವಾಳ ಕನ್ನಡ ಭವನ ನಿರ್ಮಾಣ ಸಮಿತಿ ಸಂಚಾಲಕ ಗಂಗಾಧರ್‌ ಭಟ್‌ ಕೊಳಕೆ ರಾಮಕುಂಜರ ಕೈಪಿಡಿ ಪುಸ್ತಕ
‘ಪ್ಲಾಸ್ಟಿಕ್‌’ ಬಿಡುಗಡೆಗೊಳಿಸಿ ಮಾತನಾಡಿ, ಸಂಘಟನೆಯೊಂದು ಮಾಡಬೇಕಾದ ಕಾರ್ಯವನ್ನು ವ್ಯಕ್ತಿಯೊಬ್ಬರು ಮಾಡುತ್ತಿರುವುದು ಪ್ರಶಂಸನೀಯ. ಇದರಲ್ಲಿ ನಾವೆಲ್ಲರೂ ರಾಜಮಣಿ ಅವರ ಶ್ರಮಕ್ಕೆ ಬೆಂಬಲವಾಗಿ ಕೆಲಸ ಮಾಡಬೇಕು ಎಂದರು. ಹಿರಿಯರಾದ ರಾಮಕೃಷ್ಣ ಪುತ್ತೂರಾಯ ಹಾಗೂ ಶಾಂತಾ ದಂಪತಿಯನ್ನು ಸಮ್ಮಾನಿಸಲಾಯಿತು. ರಾಜಮಣಿ ರಾಮಕುಂಜ ಸ್ವಾಗತಿಸಿದರು. ಮೇಧಾ ರಾಮಕುಂಜ ವಂದಿಸಿದರು. ಧಾತ್ರಿ ರಾಮಕುಂಜ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next