Advertisement
ಅದರಲ್ಲಿ ಭಾರತದಂತಹ ದೇಶಗಳಲ್ಲಿ ಸ್ವತ್ಛತೆಯ ಅರಿವಿನ ಕೊರತೆಯಿಂದಾಗಿ ಎಲ್ಲೆಂದರಲ್ಲಿ ಕಸದ ರಾಶಿ ಹಾಕಿ ಅದು ಮಣ್ಣಿನಡಿಯಲ್ಲಿ ಸೇರಿ ಮಣ್ಣು ತನ್ನ ಫಲವತ್ತೆತೆ ಕಳೆದುಕೊಂಡು ವಿಷಕಾರಿಯಾಗುತ್ತಿದೆ. ಮಳೆಗಾಲದಲ್ಲಿ ತೊರೆ, ಹಳ್ಳ, ನದಿ ಸಾಗರಗಳೊಡಲೊಳಗೆ ಸೇರಿ ಅಲ್ಲಿರುವ ಜಲಚರ ಜೀವರಾಶಿಗಳ ಬದುಕಿಗೂ ಕಂಟಕವಾಗಿದೆ. ಇದರಿಂದಾಗುತ್ತಿರುವ ಈ ಎಲ್ಲ ಹಾನಿಯನ್ನು ತಡೆಯಲು ಪ್ಲಾಸ್ಟಿಕ್ ರಸ್ತೆಗಳ ನಿರ್ಮಾಣ ಅತ್ಯಂತ ಪರಿಣಾಮಕಾರಿಯಾದ ಪರಿಹಾರವಾಗಿದೆ ಎನ್ನಬಹುದು. ಈ ಪ್ಲಾಸ್ಟಿಕ್ ರಸ್ತೆ ನಿರ್ಮಾಣ ಮಾಡುವ ಬಗ್ಗೆ ಮೊದಲಬಾರಿಗೆ ಸಂಶೋಧನೆಯಲ್ಲಿ ತೊಡಗಿಕೊಂಡವರು ಮಧುರೈನ ತಿಯಾಗರಾಜರ್ ಎಂಜಿನಿಯರಿಂಗ್ ಕಾಲೇಜಿನ ರಾಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರದಾ ರಾಜಗೋಪಾಲನ್ ವಾಸುದೇವನ್. ಇವರನ್ನು “ಪ್ಲಾಸ್ಟಿಕ್ ಮ್ಯಾನ್ ಆಫ್ ಇಂಡಿಯಾ’ ಎಂದು ಕರೆಯಲಾಗುತ್ತದೆ.
ದಿನನಿತ್ಯ ಸೃಷ್ಟಿಯಾಗುತ್ತಿರುವ ಪ್ಲಾಸ್ಟಿಕ್ ತಾಜ್ಯ ಬಳಸಿಕೊಂಡು ರಸ್ತೆಗಳನ್ನು ನಿರ್ಮಾಣ ಮಾಡುವುದನ್ನು ಇತ್ತೀಚೆಗೆ ಸಂಶೋಧಿಸಲಾಗಿದ್ದು ಪ್ಲಾಸ್ಟಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಈ ಸಂಶೋಧನೆ ಒಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ. ಪ್ಲಾಸ್ಟಿಕ್ ತಾಜ್ಯವನ್ನು ಸಂಗ್ರಹಿಸಿ ಅದನ್ನು ಒಣಗಿಸಿ, ಚೂರು ಚೂರು ಮಾಡಿ ಅನಂತರ 170ಡಿಗ್ರಿ ಸೆಲ್ಸಿಯಸ್ ನಷ್ಟು ಶಾಖದಲ್ಲಿ ಕಾಯಿಸಿದ ಡಾಮರಿನೊಂದಿಗೆ ಮಿಶ್ರಣ ಮಾಡಲಾಗುತ್ತದೆ. ಅನಂತರ ಇದನ್ನು ರಸ್ತೆ ನಿರ್ಮಾಣದಲ್ಲಿ ಬಳಸಲಾಗುತ್ತದೆ. ಎಲ್ಲಲ್ಲಿ ರಸ್ತೆಗಳ ನಿರ್ಮಾಣ
ನೆದರ್‌ಲ್ಯಾಂಡ್ ಸಹಿತ ಇಂದು ವಿಶ್ವದ ಅನೇಕ ರಾಷ್ಟ್ರಗಳು ಪ್ಲಾಸ್ಟಿಕ್ ರಸ್ತೆ ನಿರ್ಮಾಣ ಮಾಡಲು ಉತ್ಸುಕತೆ ತೊರಿಸುತ್ತಿವೆ. ಇದಕ್ಕೆ ಭಾರತವೂ ಹೊರತಾಗಿಲ್ಲ . ಜಗತ್ತಿನಲ್ಲೆ ಭಾರತ ಎರಡನೇ ಅತಿ ಅತಿದೊಡ್ಡ ರಸ್ತೆ ಸಂಪರ್ಕಜಾಲವನ್ನು ಹೊಂದಿದೆ. ಇದು ನಮ್ಮ ದೇಶಕ್ಕೆ ಇನ್ನಷ್ಟು ಸಹಕಾರಿಯಾಗಬಲ್ಲದು. ದಿನನಿತ್ಯ ಭಾರತದಲ್ಲಿ 15,000 ಟನ್ ಪ್ಲಾಸ್ಟಿಕ್ ತಾಜ್ಯ ಉತ್ಪತ್ತಿಯಾಗುತ್ತದೆ. ಇದರಲ್ಲಿ 9,000 ಟನ್‌ಗಳಷÒನ್ನು ಮಾತ್ರ ಮರುಬಳಕೆಗೆ ಬಳಸಲಾಗುತ್ತಿದ್ದು ಉಳಿದ ತ್ಯಾಜ್ಯ ಸುಡುವುದು, ಜಲಮೂಲ, ಮಣ್ಣಿನ ಪದರದಲ್ಲಿ ಸೇರುತ್ತಿದೆ. ಭಾರತದಲ್ಲಿ ರಸ್ತೆ ನಿರ್ಮಾಣದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವಲ್ಲಿ ಮುಂಚೂಣಿಯಲ್ಲಿದೆ 2011 ರಿಂದ ಇದುವರೆಗೆ 1,600 ಟನ್ ಪ್ಲಾಸ್ಟಿಕೆ ಬಳಸಿಕೊಂಡು 1,0345.23 ಕಿ.ಮೀ ರಸ್ತೆ ನಿರ್ಮಾಣ ಮಾಡಿದೆ. ಮಹಾರಾಷ್ಟ್ರ 3,343 ಕಿಲೊ ಪ್ಲಾಸ್ಟಿಕ್ ಬಳಸಿ 1,430 ಕಿ. ಮೀ ರಸ್ತೆ ನಿರ್ಮಿಸಿದೆ. ಇಂದೋರ್ ಕಳೆದೆರಡು ವರ್ಷಗಳಲ್ಲಿ 5,000 ಕಿಲೋ ಪ್ಲಾಸ್ಟಿಕ್ ಬಳಸಿ 45 ಕಿ.ಮೀ ರಸ್ತೆ ನಿರ್ಮಿಸಿದೆ. ಭಾರತ ಸರಕಾರ ಒಂದು ಲಕ್ಷ ಕಿಮೀ ರಸ್ತೆಯನ್ನು ನಿರ್ಮಿಸುವ ಗುರಿ ಹೊಂದಿದೆ.
Related Articles
Advertisement
ಪ್ಲಾಸ್ಟಿಕ್ ರಸ್ತೆಯಿಂದಾಗುವ ಲಾಭಗಳು· ಪ್ಲಾಸ್ಟಿಕ್ ಸಮಸ್ಯೆಯನ್ನು ಹೊಗಲಾಡಿಸಬಹುದು.
· ಪರಿಸರ ಮಾಲಿನ್ಯ ತಡೆಗೆ ಸಹಕಾರಿ.
· ಧಾರಾಕಾರ ಮಳೆ, ಪ್ರವಾಹಗಳಂತ ಸಮಯದಲ್ಲಿ ಬೇಗನೆ ಹಾಳಗುವದಿಲ್ಲ.
· ಕಡಿಮೆ ವೆಚ್ಚ ತಗುಲುತ್ತದೆ.
· ಕಾಂಕ್ರಿಟ್ ರಸ್ತೆಗಿಂತ ಸುರಕ್ಷತೆ ಹೆಚ್ಚು, ಗುಂಡಿಗಳು ಉಂಟಾಗುವುದು ವಿರಳ ಮತ್ತು ನಿರ್ವಹಣಾ ವೆಚ್ಚವು ಕಡಿಮೆ.
· ಸುಧೀರ್ಘ ಬಾಳಿಕೆ ಬರುತ್ತದೆ.
· ಆರ್ಥಿಕ ಸ್ನೇಹಿ ಯೋಜನೆಯಾಗಿದೆ. - ಶಿವಾನಂದ ಎಚ್.