ಪಣಜಿ : ರಾಜ್ಯದಲ್ಲಿ ಪೂರೈಕೆಯಾಗುವ ಕುಡಿಯುವ ನೀರಿನಲ್ಲಿ ಪ್ಲ್ಯಾಸ್ಟಿಕ್ ಕಣ ರುವುದು ಪತ್ತೆಯಾಗಿದೆ ಎಂದು ಟ್ಯಾಕ್ಸಿಕ್ಸ್ ಲಿಂಕ್ ಎಂಬ ಸಂಸ್ಥೆ ಹೇಳಿದೆ.
ಈ ಬಗ್ಗೆ ಟ್ಯಾಕ್ಸಿಕ್ಸ್ ಲಿಂಕ್ ಸಂಸ್ಥೆಯ ಸಂಚಾಲಕ ಡಾ. ಸತೀಶ್ ಸಿನ್ಹಾ ಮಾತನಾಡಿ, ಮಾಪ್ಸಾದಲ್ಲಿ ಕುಡಿಯುವ ನೀರಿನಲ್ಲಿ ಅತ್ಯಧಿಕ ಪ್ಲ್ಯಾಸ್ಟಿಕ್ ಕಣ ಪತ್ತೆಯಾಗಿದೆ ಎಂದು ಹೇಳಿದ್ದಾರೆ.
ಗೋವಾ ರಾಜ್ಯದಲ್ಲಿ ಪೂರೈಕೆಯಾಗುವ ಕುಡಿಯುವ ನೀರನ್ನು ವಿವಿಧೆಡೆ ತಪಾಸಣೆ ನಡೆಸಲಾಗಿ ಈ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ ಹೇಳಿದ್ಧಾರೆ.
ಇದನ್ನೂ ಓದಿ : ಕೋವಿಡ್:ಆಗಸ್ಟ್ 30ರವರೆಗೆ ಪಶ್ಚಿಮಬಂಗಾಳದಲ್ಲಿ ಲಾಕ್ ಡೌನ್ ವಿಸ್ತರಣೆ, ಕರ್ಫ್ಯೂ ಸಮಯ ಸಡಿಲಿಕೆ
ಪಣಜಿ ಸಮೀಪದ ಇಂಟರ್ ನ್ಯಾಶನಲ್ ಸೆಂಟರ್ ನ ಸಭಾಗೃಹದಲ್ಲಿ ಟ್ಯಾಕ್ಸಿಕ್ಸ್ ಲಿಂಕ್ ಸಂಸ್ಥೆ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸತೀಶ್ ಸಿನ್ಹಾ ಮಾತನಾಡಿದರು. ರಾಜ್ಯದಲ್ಲಿ ಫಿಲ್ಟರ್ ಮಾಡದಿರುವ ನೀರಿನಲ್ಲಿ ಭಾರಿ ಪ್ರಮಾಣದಲ್ಲಿ ಅಂದರೆ 26 ಪ್ರಕಾರದ ಪ್ಲಾಸ್ಟಿಕ್ ಕಣ ಪತ್ತೆಯಾಗಿದೆ. ಮಾನವನ ಶರೀರಕ್ಕೆ ಇದು ಅತ್ಯಂತ ಹಾನಿಕಾರಕವಾಗಿದೆ. ಇಷ್ಟೇ ಅಲ್ಲದೆಯೇ ಸಮುದ್ರದಲ್ಲಿರುವ ಜಲಚರಗಳಿಗೂ ಅಷ್ಟೇ ಹಾನಿಕಾರಕವಾಗಿದೆ. ಸಂಸ್ಥೆಯು ಮಾಪ್ಸಾ, ಪಣಜಿ, ಮಾರ್ಶೆಲ್, ಮಡಗಾಂವ ಹಾಗೂ ಕಾಣಕೋಣದಲ್ಲಿ ಕುಡಿಯುವ ನೀರನ್ನು ಸಂಗ್ರಹಿಸಿ ತಪಾಸಣೆ ನಡೆಸಿದೆ. ಇದರಲ್ಲಿ “5 ಎಂಎಂ” ಆಕಾರದ ಪ್ಲಾಸ್ಟಿಕ್ ಕಣ ಇರುವುದು ಕಂಡುಬಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದಕ್ಕೂ ಮುನ್ನ ರಾಜ್ಯದ ಹಲವು ಭಾಗಗಳಲ್ಲಿ ಕುಡಿಯುವ ನೀರಿನ ತಪಾಸಣೆ ನಡೆಸಲಾಗಿತ್ತು. ಆಗ ನೀರಿನಲ್ಲಿ ಖನಿಜದ ಅಂಶವಿರುವುದು ಕಂಡುಬಂದಿತ್ತು. ಆದರೆ ಇದೀಗ ಗೋವಾದಲ್ಲಿ ಕುಡಿಯುವ ನೀರಿನಲ್ಲಿ ಪ್ಲಾಸ್ಟಿಕ್ ಕಣ ಇರುವುದು ಕಂಡುಬಂದಿದ್ದು, ರಾಜ್ಯದ ಜನತೆಯ ಆರೋಗ್ಯದ ಮೇಲೆ ಯಾವ ರೀತಿಯ ದುಷ್ಪರಿಣಾಮವುಂಟಾಗಲಿದೆ ಎಂಬ ಆತಂಕ ಎದುರಾಗಿದೆ.
ಇದನ್ನೂ ಓದಿ : 2ಎ ಮೀಸಲಾತಿ ನೀಡದಿದ್ದರೆ ಅ. 1ರಿಂದ ವಿವಿಧ ಹಂತದ ಹೋರಾಟ: ಬಸವಜಯ ಮೃತ್ಯುಂಜಯ ಸ್ವಾಮೀಜಿ