Advertisement

ಅಡುಗೆ ಉಪ್ಪಿನಲ್ಲಿದೆ ಸೂಕ್ಷ್ಮ ಪ್ಲಾಸ್ಟಿಕ್‌: ಮೂರು ಸಂಸ್ಥೆಗಳ ಅಧ್ಯಯನದಿಂದ ದೃಢ

07:56 PM Aug 04, 2021 | Team Udayavani |

ಅಹ್ಮದಾಬಾದ್‌: ಬೇಳೆ-ತರಕಾರಿಗಳನ್ನು ಬೇಯಿಸುವ ಸಂದರ್ಭದಲ್ಲಿ ಅಡುಗೆ ಮನೆಯಲ್ಲಿ ಉಪ್ಪು ಬಳಕೆ ಮಾಡುತ್ತಾರೆ. ಈ ಸಂದರ್ಭದಲ್ಲಿ ನಮಗೆ ಅರಿವಾಗದಂತೆ ಅತ್ಯಂತ ಸಣ್ಣ ಸೂಕ್ಷ್ಮ ಪ್ರಮಾಣದ ಪ್ಲಾಸ್ಟಿಕ್‌ ಅಂಶಗಳೂ ದೇಹದೊಳಕ್ಕೆ ಸೇರುತ್ತವೆ ಎಂಬ ವಿಚಾರ ಬಹಿರಂಗವಾಗಿದೆ. ಗೋವಾದ ನ್ಯಾಷನಲ್‌ ಸೆಂಟರ್‌ ಫಾರ್‌ ಪೋಲಾರ್‌ ಆ್ಯಂಡ್‌ ಓಶನ್‌ ರಿಸರ್ಚ್‌, ತಮಿಳುನಾಡಿನ ಮೂರು ವಿವಿಗಳು ಗುಜರಾತ್‌ ಮತ್ತು ತಮಿಳುನಾಡು ಮತ್ತು ಗುಜರಾತ್‌ಗಳಲ್ಲಿ ಮನೆಗಳಲ್ಲಿ ಅಡುಗೆಗಾಗಿ ಬಳಕೆ ಮಾಡುವ ಉಪ್ಪಿನ ಮೇಲೆ ನಡೆಸಲಾಗಿರುವ ಅಧ್ಯಯನದಲ್ಲಿ ಈ ಅಂಶ ದೃಢಪಟ್ಟಿದೆ.

Advertisement

ಅಲ್ಲಿ ಕಂಡುಬಂದಿರುವ ಉಪ್ಪಿನಲ್ಲಿ ಪಾಲಿಥೈಲೀನ್‌, ಪಾಲಿಯೆಸ್ಟರ್‌ ಮತ್ತು ಪಾಲಿವಿನಿ ಕ್ಲೋರೈಡ್‌ ಅಂಶಗಳಿವೆ. ಶೇ.74.3ರಷ್ಟು  ಮೈಕ್ರೋಪ್ಲಾಸ್ಟಿಕ್‌ ಇರುವ ಬಗ್ಗೆ ತಿಳಿದು ಬಂದಿದೆ ಎಂದು ತಮಿಳುನಾಡಿನ ಪೆರಿಯಾರ್‌ ವಿವಿಯ ಸಹಾಯಕ ಪ್ರಾಧ್ಯಾಪಕ ಎ.ವಿದ್ಯಾಶಂಕರ್‌ ತಿಳಿಸಿದ್ದಾರೆ.

ಗುಜರಾತ್‌ನಲ್ಲಿ ಬಳಕೆಯಾಗುವ ಉಪ್ಪಿನ ಪ್ರತಿ 200 ಗ್ರಾಮ್‌ನ 1 ಮಾದರಿಯಲ್ಲಿ  46-115 ಪಾರ್ಟಿಕಲ್ಸ್‌ ಇರುತ್ತವೆ. ತಮಿಳುನಾಡಿನ ಉಪ್ಪಿನ ಮಾದರಿಯಲ್ಲಿ ಕೂಡ 23-101 ಪಾರ್ಟಿಕಲ್‌ಗ‌ಳಷ್ಟು ಪ್ಲಾಸ್ಟಿಕ್‌ ಇರುತ್ತದೆ ಎಂದು ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ.

ಉಪ್ಪಿನಲ್ಲಿರುವ ಅತ್ಯಂತ ಸೂಕ್ಷ್ಮಪ್ರಮಾಣದ ಪ್ಲಾಸ್ಲಿಕ್‌ 100-200 ಮೈಕ್ರೋಮೀಟರ್‌ ಅಳತೆ ಹೊಂದಿರುತ್ತದೆ. ಅವುಗಳು ಒಂದು ಬಾರಿ, ಸಾಮಾನ್ಯವಾಗಿ ಬಳಕೆ ಮಾಡುವ ಪ್ಲಾಸ್ಟಿಕ್‌ಗಿಂತ ಭಿನ್ನವಾಗಿರುತ್ತದೆ. ಜತೆಗೆ ಅವುಗಳನ್ನು ವಸ್ತುಗಳನ್ನು ಪ್ಯಾಕ್‌ ಮಾಡುವ, ಕಟ್ಲೆàರಿ, ರಸ್ತೆಗೆ ಬಳಕೆ ಮಾಡುವ ಪೈಂಟ್‌, ಮೀನುಗಾರಿಕೆಗೆ ಬಳಕೆ ಮಾಡುವ ಬಲೆ, ಸೌಂದರ್ಯವರ್ಧಕಗಳಲ್ಲಿ ಬಳಕೆ ಮಾಡುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next