ಒಂದು ಪಾಲಿಮರ್ ಪ್ಲಾಸ್ಟಿಕ್ ಕವರ್, ನೀರು ಮತ್ತು ಶಾರ್ಪ್ ಮಾಡಿರುವ ಉದ್ದನೆಯ ಪೆನ್ಸಿಲ್, ಬೆಂಕಿಪೊಟ್ಟಣ, ಮೊಂಬತ್ತಿ.
Advertisement
ಮಾಡುವ ವಿಧಾನ1. ಪ್ಲಾಸ್ಟಿಕ್ ಕವರ್ ಅನ್ನು ತೆಗೆದುಕೊಂಡು, ಅದರ ಅರ್ಧಕ್ಕೆ ನೀರು ತುಂಬಿಸಿ.
2. ಆ ಕವರ್‌ನ ಮೇಲ್ಭಾಗವನ್ನು ಮಡಚಿ, ಉರಿಯುತ್ತಿರುವ ಮೊಂಬತ್ತಿಯಿಂದ ಮಡಚಿದ ಜಾಗ ಅಂಚನ್ನು ಸುಟ್ಟು, ಸೀಲ್ ಮಾಡಿ.
3. ಈಗ 3 ಬೇರೆ ಬೇರೆ ಬಣ್ಣದ, ಶಾರ್ಪ್ ಮಾಡಿರುವ ಪೆನ್ಸಿಲ್ ಅನ್ನು ತೆಗೆದುಕೊಳ್ಳಿ. ನೀರಿರುವ ಜಾಗದಲ್ಲಿ (ತುಸು ಮೇಲ್ಭಾಗ) ಒಂದು ಪೆನ್ಸಿಲ್ ಅನ್ನು ಚುಚ್ಚಿ, ಮುಂದಕ್ಕೆ ತೂರಿಸಿ.
4. ಬಳಿಕ ಮಿಕ್ಕೆರಡು ಪೆನ್ಸಿಲ್‌ಗಳನ್ನೂ ಹಾಗೆಯೇ ಒಂದಾದ ಮೇಲೆ ಒಂದರಂತೆ ಹಾಗೆ ತೂರಿಸಿ.
5. ನೀರು ಎಲ್ಲೂ ಸೋರಿಕೆ ಆಗದೇ ಇರುವುದನ್ನು ಗಮನಿಸಿ. ಅಲ್ಲದೆ, ಆ ಪ್ಲಾಸ್ಟಿಕ್ ಕವರ್‌ನಲ್ಲಿ ಪೆನ್ಸಿಲ್‌ನ ಬಣ್ಣದ ಛಾಯೆಗಳು ಮೂಡಿರುವುದನ್ನು ಗಮನಿಸಿ.
ಪ್ಲಾಸ್ಟಿಕ್ ಬ್ಯಾಗ್ ಪಾಲಿಮರ್‌ನಿಂದ ಮಾಡಲ್ಪಟ್ಟಿದ್ದು, ಅದರಲ್ಲಿನ ಅಣುಗಳ ಸರಪಳಿ ಹೊಂದಿಕೆ (ಫ್ಲೆಕ್ಸಿಬಲ್) ಸ್ವಭಾವವನ್ನು ಹೊಂದಿರುತ್ತವೆ. ಇಂಥ ಬ್ಯಾಗ್‌ಗಳನ್ನು ತುಸು ಎಳೆದರೂ ವಿಸ್ತರಿಸಿಕೊಳ್ಳುತ್ತವೆ. ಚೂಪಾದ ಪೆನ್ಸಿಲ್‌ಗಳನ್ನು ಒಳಗೆ ತೂರಿಸಿದಾಗ, ಪೆನ್ಸಿಲ್‌ನ ಸುತ್ತಲೂ ಪ್ಲಾಸ್ಟಿಕ್ ಯಾವುದೇ ರಂಧ್ರ ಮೂಡದ ಹಾಗೆ ಆವರಿಸಿಕೊಳ್ಳುತ್ತದೆ. ನೀರೇ ಆ ಭಾಗವನ್ನು ಸೀಲ್ ಮಾಡುತ್ತದೆ. ಹಾಗಾಗಿ, ಒಂದು ಹನಿಯೂ ಸೋರಿಕೆ ಆಗುವುದಿಲ್ಲ.