Advertisement
ಕ್ಲೀನ್ ಕುಂದಾಪುರ ಪ್ರಾಜೆಕ್ಟ್‌ನವರು ಸಮುದ್ರ ತೀರ ಸ್ವಚ್ಛಗೊಳಿಸುವ ಜತೆಗೆ ಪ್ಲಾಸ್ಟಿಕ್ ಸ್ವಚ್ಛತಾ ಜಾಗೃತಿ ಮೂಡಿಸಲು ಅಣಿಯಾಗಿದ್ದಾರೆ.
ಕಥೆಯ ಹಂದರದಲ್ಲಿ ಒಂದಷ್ಟು ಹೊಸತನದ ಗಾಳಿ ಸುಳಿದಾಡುತ್ತದೆ. ಭೂಮಿ (ಕಥೆಯಲ್ಲಿನ ನಾಯಕಿ) ಖಳನಾಯಕ ಪ್ಲಾಸ್ಟಿಕ್ ಎಂಬ ಹೊಸ ಜೀವಿಯ ಕೃತ್ಯಗಳಿಗೆ ಬಲಿಯಾಗಿ, ತನ್ನತನವನ್ನು ಕಳೆದುಕೊಳ್ಳುತ್ತಾ, ರೋಗಿಯಾಗಿ ಬಿಡಿಸಿಕೊಳ್ಳಲು ಒದ್ದಾಡುತ್ತಿರುತ್ತಾಳೆ. ಭೂಮಿ ಕಾಯುವ ದೈವ (ನಮ್ಮ ತಳುನಾಡ ದೈವದಂತೆ) ವಂದೇ ಮಾತರಂ ಹಾಡಿನಲ್ಲಿ ಬರುವ ಸುಂದರ ಭೂಮಿಯ ಜತೆಗಿನ ತನ್ನ ಉತ್ತಮ ಸಮಯವನ್ನು ನೆನಪಿಸಿಕೊಳ್ಳುತಾ , ಈಗ ಕಾಣೆಯಾಗಿ ಹೋದ ತನ್ನ ಸುಂದರಿಯನ್ನು ಊರೆಲ್ಲಾ ಹುಡುಕಾಡುತ್ತದೆ. ಪ್ಲಾಸ್ಟಿಕ್ ಅನ್ನುವ ರಕ್ಕಸ ಮನೆಗಳಿಂದ ಹೊರಬಂದು ಮನುಷ್ಯನ ಕೈ ಮತ್ತು ಕಣ್ಣುಗಳೆದುರೇ ಕಡಲ ಪಾಲಾಗುತ್ತದೆ.
Related Articles
ಕಡಲಿಂದ ಪ್ಲಾಸ್ಟಿಕ್ ಉಕ್ಕಿ ಹರಿಯುತ್ತಾ, ನಾಯಕಿ ಭೂಮಿಯನ್ನೇ ಪೂರ್ತಿಯಾಗಿ ಕಬಳಿಸಿ ಬಿಡುತ್ತದೆ. ಪ್ರತಿ ಕೈಕಣ್ಣುಗಳು ಪ್ಲಾಸ್ಟಿಕ್ ಎಂಬ ರಕ್ಕಸ ಭಾಗವಾಗಿ ಭೂಮಿಯನ್ನೇ ಮುಳುಗಿಸುವಲ್ಲಿ ಕಾರಣೀಭೂತವಾಗುತ್ತದೆ. ತನ್ನ ಭೂಮಿ ಸಿಗದೆ ಅಳುವ ಭೂಮಿ ಕಾಯುವ ದೆ„ವ ಕೊನೆಯಲ್ಲಿ ಕಾಣುವುದು ಪ್ಲಾಸ್ಟಿಕ್ ಆವೃತ ಭೂಮಿಯನ್ನು. ಅದರ ವಿರುದ್ಧ ಯುದ್ಧ ಸಾರುತ್ತದೆ ಭೂಮಿ ಕಾಯುವ ದೆ„ವ. ದೆ„ವದೊಂದಿಗೆ ಕೈ ಜೋಡಿಸಲು ಪ್ರಾರ್ಥಿಸುವಲ್ಲಿ ಸಂಗೀತ ಸಿನೆಮಾ ಮುಗಿಯುತ್ತದೆ.
Advertisement
ಇಲ್ಲಿ ದೇಶಭಕ್ತಿ ಅನ್ನುವುದು ಭೂಮಿ ಭಕ್ತಿ, ಪ್ರೀತಿ ಆಗಿ ಹೊರಹೊಮ್ಮುತ್ತದೆ. ಅದರ ಸಾಂಕೇತಿಕವಾಗಿ ವಂದೇ ಮಾತರಂ ಹಾಡಿನ ಇನ್ನೊಂದು ರೂಪ ನಿಮ್ಮ ಮುಂದೆ ಬರುತ್ತದೆ. ಇದರಲ್ಲಿ ಡೇನಿಯಲ್ ಮತ್ತು ಸುಹಿತ್ ಸಂಗೀತ ಸಂಕಲನ ಮಾಡಿದ್ದು, ಅಕ್ಷತಾ ಹಾಡಿಗೆ ಧ್ವನಿಯಾಗಿದ್ದಾರೆ. ನಿರ್ದೇಶನ ಯತೀಶ್ ರೈ ಅವರದ್ದಾಗಿದ್ದು ಕಲಾವಿದರಾಗಿ ಶ್ರುತಿ ಜೈನ್ ರೆಂಜಾಳ, ಸತ್ಯನಾರಾಯಣ ಮಂಜ ಅವರು ಭಾಗವಹಿಸಿದ್ದಾರೆ.
ವಿನೂತನ ಪ್ರಯತ್ನಭರತ್ ಕುಂದರ್ ನೇತೃತ್ವದಲ್ಲಿ ಹತ್ತಾರು ವೃತ್ತಿಯಲ್ಲಿರುವ ಸ್ವಯಂಸೇವಕರು ಒಟ್ಟಾಗಿ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಎಂಬ ಜನಾಂದೋಲನ ಆರಮಭಿಸಿದರು. ಇದು ಸಮುದ್ರ ತಟವನ್ನ ಚೊಕ್ಕಗೊಳಿಸುವಲ್ಲಿ ಹಾಗೂ ಪ್ಲಾಸ್ಟಿಕ್ ವಿರೋಧಿಯಾಗಿ ಕೆಲಸ ಮಾಡುತ್ತಿರುವ ಆಂದೋಲನ. ಇವರು ಲೈಫ್ ಲೈಕ್ ಪ್ರೊಡಕ್ಷನ್ಸ್ ಜತೆ ಸೇರಿ ಈ ವಿಡಿಯೊವನ್ನು ಹೊರತರುತ್ತಿದ್ದಾರೆ. ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಪ್ರತಿ ರವಿವಾರ ಸಮುದ್ರ ತೀರದಲ್ಲಿ ತ್ಯಾಜ್ಯ ವಿಲೇವಾರಿ ಮಾಡಿ ಸ್ವಚ್ಛತಾ ಆಂದೋಲನ ನಡೆಸುತ್ತಿದೆ. ಪ್ಲಾಸ್ಟಿಕ್ ವಿರೋಧಿ
ಕುಂದಾಪುರದ ನಾಗರಿಕರ ಸಹಕಾರದಿಂದ ಇಂತಹದೊಂದು ಪ್ರಪಂಚದಾದ್ಯಂತ ಸಾಮಾಜಿಕ ಕಳಕಳಿಯ ಸಣ್ಣ ಪ್ರಯತ್ನ ಮಾಡುತ್ತಿದೆ. ಯುವಕರ ಪ್ರಯತ್ನ ಕಳಕಳಿಗೆ ಹಾಗೂ ಪ್ರಯೋಗದ ಹಿಂದಿನ ಉದ್ದೇಶ ನಿಜಕ್ಕೂ ಅನುಕರಣೀಯ.
-ಡಾ| ರಶ್ಮಿ ಕುಂದಾಪುರ,
ಕ್ಲೀನ್ ಕುಂದಾಪುರ ಪ್ರಾಜೆಕ್ಟ್‌ನ ಸ್ವಯಂಸೇವಕರು