ಪ್ಲಾಸ್ಟಿಕ್ ವಸ್ತುಗಳು ನಮ್ಮ ಅವಿಭಾಜ್ಯ ಅಂಗವಾಗಿ ಹೋಗಿವೆೆ. ಪರಿಸರಕ್ಕೆ ಹಾಗೂ ಮಾನವನ ದೇಹಕ್ಕೆ ಪ್ಲಾಸ್ಟಿಕ್‌ನಿಂದ ಅಪಾರ ಹಾನಿಯಿದೆ ಎಂದು ಹಲವು ಸಂಶೋಧನೆಗಳಿಂದ ದೃಢಪಟ್ಟಿದ್ದರೂ ಅವುಗಳ ಬಳಕೆ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ. ನೀರಿನ ಶೇಖರಣೆಗೆ ಹೆಚ್ಚಾಗಿ ಪ್ಲಾಸ್ಟಿಕ್ ಬಾಟಲಿಗಳನ್ನು ಉಪಯೋಗಿಸುತ್ತೇವೆ. ಆದರೆ ಆ ಪ್ಲಾಸ್ಟಿಕ್ ಬಾಟಲಿಗಳು ನಮ್ಮ ದೇಹದಾರೋಗ್ಯಕ್ಕೆ ಮಾರಕವಾಗಿದೆ.
ಇಂದು ನಮ್ಮ ಬಳಕೆಯ ಸುಲಭಕ್ಕಾಗಿ ಎಲ್ಲ ಕಡೆಗಳಲ್ಲಿ ಪ್ಲಾಸ್ಟಿಕ್‌ಗೆ ಒಗ್ಗಿ ಹೋಗಿದ್ದೇವೆ. ನೀರು, ಆಹಾರ ಯಾವುದೇ ಇರಬಹುದು ಎಲ್ಲವನ್ನು ಪಾಸ್ಟಿಕ್ ಡಬ್ಬಗಳಲ್ಲಿ ಶೇಖರಿಸುವ ಹವ್ಯಾಸವನ್ನು ನಾವು ಬೆಳೆಸಿಕೊಂಡಿದ್ದೇವೆ. ಸಣ್ಣ ಮಕ್ಕಳಿಗಂತೂ ಬಣ್ಣ ಬಣ್ಣಗಳಲ್ಲಿ ಬರುವ ಪ್ಲಾಸ್ಟಿಕ್ ಟಿಫನ್ ಬಾಕ್ಸ್, ಬಾಟಲ್ಗಳು ಇರಲೇಬೇಕು.
·ಪ್ಲಾಸ್ಟಿಕ್ ಬಾಟಲಿಗಳಲ್ಲಿ ಬಿಸ್ಫೆನಾಲ್ ಎಂಬ ರಾಸಾಯನಿಕ ಪದಾರ್ಥವನ್ನು ಬಳಸುತ್ತಾರೆ. ಇದರ ನಿರಂತರ ಉಪಯೋಗದಿಂದ ಬಿ.ಪಿ, ಶುಗರ್, ಕ್ಯಾನ್ಸರ್‌ನಂತಹ ಹಲವಾರು ರೋಗಗಳು ಉಂಟಾಗುತ್ತವೆ.
·ಮಕ್ಕಳಿಗೆ ಪ್ಲಾಸ್ಟಿಕ್ ಬಾಕ್ಸ್‌ಗಳಲ್ಲಿ ಸಂಗ್ರಹಿಸಲ್ಪಟ್ಟ ಆಹಾರ ಕ್ರಮೇಣ ಅವರಲ್ಲಿ ಚರ್ಮಕ್ಕೆ ಸಂಬಂಧಿಸಿದ ಹಲವಾರು ರೋಗಗಳು ಕಾಣಿಸಿಕೊಳ್ಳ ತೊಡಗುತ್ತವೆ.
·ಪೋಲಿಸ್ಟಿರಿನ್ ಎಂಬ ರಾಸಾಯನಿಕ ಪದಾರ್ಥವನ್ನು ಪ್ಯಾಕೆಟ್ ಆಹಾರಗಳ ಪೊಟ್ಟಣದಲ್ಲಿ ಬಳಸುತ್ತಿದ್ದು ಇದರಿಂದ ಕಣ್ಣು, ಕಿವಿ ಹಾಗೂ ಗಂಟಲಿಗೆ ತೀವ್ರವಾದ ತೊಂದರೆಗಳುಂಟಾಗುತ್ತವೆ. ·ನೀರಿನ ಬಾಟಲಿಗಳಲ್ಲಿ ಪೋಲಿ ಕಾರ್ಬೋನೇಟ್ ಎಂಬ ರಾಸಾಯನಿಕ ಪದಾರ್ಥ ಉಪಯೋಗಿಸಲಾಗುತ್ತದೆ. ಇದರ ನಿರಂತರ ಬಳಕೆಯು ಕ್ಯಾನ್ಸರ್ ರೋಗಕ್ಕೆ ಕಾರಣವಾಗುತ್ತದೆ.
••ಸುಶ್ಮಿತಾ ಶೆಟ್ಟಿ ಸಿರಿಬಾಗಿಲು