Advertisement
ನಗರದ ವ್ಯಾಪ್ತಿ ಜು. 1ರಿಂದ ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನಗಳಿಗೆ ನಿಷೇಧ ಹೇರಿ ಮಹಾನಗರ ಪಾಲಿಕೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಕಾರ್ಯಾಚರಣೆ ನಡೆ ಸಲು ಪ್ರತೀ ಆರು ವಾರ್ಡ್‌ಗೆ 5 ಮಂದಿಯ ಹತ್ತು ತಂಡ ರಚನೆ ಮಾಡಲಾಗಿದೆ. ಪಾಲಿಕೆಯ ಆರೋಗ್ಯ ನಿರೀಕ್ಷಕರು, ಪರಿಸರ ಅಭಿಯಂತ, ಮಲೇರಿಯಾ ಮೇಲ್ವಿಚಾರಕರು, ಕಂದಾಯ ಅಧಿಕಾರಿ ಸಹಿತ ಒಂದು ತಂಡದಲ್ಲಿ ಐದು ಮಂದಿ ಅಧಿಕಾರಿಗಳು ಇರಲಿದ್ದಾರೆ.
Related Articles
Advertisement
ದಂಡ ವಿಧಿಸಿ ಎಚ್ಚರಿಕೆ
ಸರಕಾರದ ಆದೇಶವನ್ನು ಜಾರಿಗೆ ತರುವ ಉದ್ದೇಶದಿಂದ ಪಾಲಿಕೆವತಿಯಿಂದ ಎಲ್ಲ ಅಂಗಡಿ ವ್ಯಾಪಾರಸ್ಥರಿಗೆ ಮಾಹಿತಿ ನೀಡಿದ್ದೇವೆ. ವಿವಿಧ ಪ್ರದೇಶದಲ್ಲಿ ಮಳಿಗೆಗಳಿಗೆ ತೆರಳಿ ಪರಿಶೀಲಿಸಿದ್ದೇವೆ. ಪ್ರಥಮ ಬಾರಿ ಉಲ್ಲಂಘನೆ ನಡೆಸಿದವರಿಗೆ 200 ರೂ.ದಂಡ ವಿಧಿಸಿ ಎಚ್ಚರಿಕೆ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ತಪ್ಪು ಪುನರಾವರ್ತನೆ ಆದಲ್ಲಿ ಗರಿಷ್ಠ 20 ಸಾ.ರೂ ದಂಡ, ಅಂಗಡಿ ಪರವಾನಿಗೆ ರದ್ದಾಗುವ ಸಾಧ್ಯತೆಯೂ ಇದೆ. ವ್ಯಾಪಾರಸ್ಥರು ಇದೀಗ ಲಭ್ಯ ಇರುವ ಪರ್ಯಾಯ ವ್ಯವಸ್ಥೆ ಕೈಗೊಳ್ಳಬೇಕೆಂದು ಪಾಲಿಕೆ ಪರಿಸರ ಅಭಿಯಂತ ಸುಶಾಂತ್ ತಿಳಿಸಿದ್ದಾರೆ.
ಕಾರ್ಯಾಚರಣೆ ಆರಂಭ: ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ಮಾರಾಟ ಮಾಡುತ್ತಿರುವುದನ್ನು ತಡೆಯುಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಅದರಂತೆ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತೀ ಆರು ವಾರ್ಡ್‌ಗೆ 5 ಮಂದಿಯ ಹತ್ತು ತಂಡ ರಚನೆ ಮಾಡಲಾಗಿದೆ. ಅವರು ನಗರದ ಅಂಗಡಿ ಸಹಿತ ಸಾರ್ವಜನಿಕ ಪ್ರದೇಶಗಳಲ್ಲಿ ಅನಧಿಕೃತ ಪ್ಲಾಸ್ಟಿಕ್ ಬಳಕೆ ಮಾಡದಂತೆ ಜಾಗೃತಿ ಮೂಡಿಸುತ್ತಾರೆ. ನಿಯ ಉಲ್ಲಂಘಿಸಿದವರ ಮೇಲೆ ದಂಡ ಪ್ರಯೋಗಕ್ಕೂ ಮುಂದಾಗಿದ್ದೇವೆ. –ಶಬರೀನಾಥ್ ರೈ, ಪಾಲಿಕೆ ವಲಯ ಆಯುಕ್ತ
ಕಟ್ಟು ನಿಟ್ಟು ಪಾಲನೆ: ಪರಿಸರ ಮಾಲಿನ್ಯ ಅದರಲ್ಲೂ ಜಲ, ಭೂ ಮಾಲಿನ್ಯ ವುಂಟು ಮಾಡುತ್ತಿರುವ ಪ್ಲಾಸ್ಟಿಕ್ ಉತ್ಪಾದನೆ ಸ್ಥಗಿತ, ಮಾರಾಟವನ್ನೂ ನಿಷೇಧಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಇದನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜನರು ಮನೆಯಿಂದಲೇ ಕೈ ಚೀಲ ಬಳಸುವುದನ್ನು ರೂಢಿಸಿಕೊಂಡು ಮಾಲಿನ್ಯ ನಿಯಂತ್ರಣಕ್ಕೆ ಸಹಕರಿಸಬೇಕು. –ಕೀರ್ತಿ ಕುಮಾರ್, ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿ