Advertisement

ಇ-ಕಾಮರ್ಸ್‌ಗಳ ಪ್ಲಾಸ್ಟಿಕ್‌ ಬಳಕೆಗೆ ತಡೆ

07:28 AM Oct 23, 2019 | Team Udayavani |

ನವದೆಹಲಿ: ಪ್ಯಾಕೇಜಿಂಗ್‌ ಅತಿಯಾದ ಪ್ಲಾಸ್ಟಿಕ್‌ ಬಳಕೆಯನ್ನು ನಿಲ್ಲಿಸುವಂತೆ ಇ-ಕಾಮರ್ಸ್‌ ದೈತ್ಯ ಕಂಪನಿಗಳಾದ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ಗೆ ನಿರ್ದೇಶನ ನೀಡುವಂತೆ 16 ವರ್ಷದ ಬಾಲಕ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ಮನವಿ ಮಾಡಿಕೊಂಡಿದ್ದಾನೆ. ಈ ಸಂಬಂಧ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಮಂಗಳವಾರ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ವರದಿಯನ್ನು ಕೋರಿದೆ.

Advertisement

ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಆದರ್ಶ್‌ ಕುಮಾರ್‌ ಗೋಯೆಲ್‌ ನೇತೃತ್ವದ ನ್ಯಾಯಪೀಠವು ಒಂದು ತಿಂಗಳೊಳಗೆ ವರದಿಯನ್ನು ಸಲ್ಲಿಸುವಂತೆ ಸುಪ್ರೀಂ ಮಾಲಿನ್ಯ ಮೇಲ್ವಿಚಾರಣ ಸಂಸ್ಥೆಗೆ ನಿರ್ದೇಶನ ನೀಡಿದೆ. ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ವಿತರಿಸುವ ಸರಕುಗಳನ್ನು ಪ್ಯಾಕಿಂಗ್‌ ಮಾಡುವ ವೇಳೆ ಅತಿಯಾದ ಪ್ಲಾಸ್ಟಿಕ್‌ ಬಳಸಲಾಗುತ್ತದೆ. ಇದನ್ನು ನಿಲ್ಲಿಸಲು ನಿರ್ದೇಶಿಸುವಂತೆ 16 ರ್ಷದ ಆದಿತ್ಯ ದುಬೆ ಎಂಬವರು ಎನ್‌ಜಿಟಿಗೆ ಮನವಿ ಮಾಡಿದ್ದರು.

ಇ-ಕಾಮರ್ಸ್‌ ಕಂಪೆನಿಗಳು ಪ್ಲಾಸ್ಟಿಕ್‌ ತ್ಯಾಜ್ಯ ನಿರ್ವಹಣಾ ನಿಯಮಗಳು, 2016ರ ವ್ಯಾಪ್ತಿಗೆ ಒಳಪಡುತ್ತದೆ. ಈ ಹಿನ್ನೆಲೆಯಲ್ಲಿ ಸ್ಪಷ್ಟ ನಿರ್ಧಾರ ಹೊರ ಬೀಳುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next