Advertisement
ಕೋವಿಡ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ಬ್ರಹ್ಮಾವರ ಮೂಲದ ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ಪೂರ್ಣಾನಂದ ಅವರ ರಕ್ತದಲ್ಲಿ ಪ್ಲಾಸ್ಮಾ ಸಂಖ್ಯೆ ಕಡಿಮೆಯಾಗಿದ್ದರಿಂದ ಜೀವನ್ಮರಣ ಹೋರಾಟದಲ್ಲಿದ್ದರು. ಈ ಮಾಹಿತಿ ಪಡೆದ ರಂಜಿತ್ 0+ ಪ್ಲಾಸ್ಮಾ ದಾನ ಮಾಡಿದ್ದಾರೆ. ಅದಾದ ಬಳಿಕ ಪೂರ್ಣಾನಂದ ಅವರ ಆರೋಗ್ಯದಲ್ಲಿ ಪೂರ್ಣ ಚೇತರಿಕೆ ಕಂಡು ಬಂದಿದೆ.
ದೇಹದಲ್ಲಿರುವ ಪಾಸ್ಮಾ ಕಣ ಇಳಿಮುಖವಾದರೆ ಅನಾರೋಗ್ಯ ಸ್ಥಿತಿ ಉಂಟಾಗುತ್ತದೆ. ಜೀವ ಹಾನಿಗೂ ಕಾರಣವಾಗುತ್ತದೆ. ಇಂತಹ ಸಂದರ್ಭದಲ್ಲಿ ಇನ್ನೊಬ್ಬನ ದೇಹದಿಂದ ಪ್ಲಾಸ್ಮಾ ದಾನ ಮಾಡುವೊಂದೇ ದಾರಿ. ಆ ಕಾರ್ಯವನ್ನು ರಂಜಿತ್ ಮಾಡಿದ್ದು, ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಪ್ಲಾಸ್ಮಾ ದಾನ ಮಾಡಿದವರಲ್ಲಿ ರಂಜಿತ್ ಜಿಲ್ಲೆಗೆ ಪ್ರಥಮ ವ್ಯಕ್ತಿ ಆಗಿದ್ದಾರೆ. ಆದರೆ ಈ ಹಿಂದೆ ತೀವ್ರ ಅನಾರೋಗ್ಯಕ್ಕೊಳಕಾಗಿದ್ದ ಕೊಣಾಜೆಯ ರಾಜ್ಯ ಮೀಸಲು ಪೊಲೀಸ್‌ನ ಹೆಡ್‌ಕಾನ್‌ಸ್ಟೆಬಲ್ ರವಿ ರೈ ಅವರಿಗೆ ಬೆಂಗಳೂರಿನಿಂದ ಪ್ಲಾಸ್ಮಾ ತರಿಸಿ ಚಿಕಿತ್ಸೆ ನೀಡಿದ ಹಿನ್ನಲೆಯಲ್ಲಿ ಅವರು ಚೇತರಿಸಿಕೊಂಡಿದ್ದ ಘಟನೆ ನಡೆದಿತ್ತು. ಸ್ವ ಇಚ್ಛೆಯಿಂದ ದಾನ
ಬ್ರಹ್ಮಾವರ ಮೂಲದ ಪೂರ್ಣಾನಂದ ಅವರಿಗೆ 0+ ಪ್ಲಾಸ್ಮಾದ ಅಗತ್ಯತೆ ಇದೆ ಎನ್ನುವ ಮಾಹಿತಿ ಸಿಕ್ಕಿತ್ತು. ಹಾಗಾಗಿ ಸ್ವ ಇಚ್ಛೆಯಿಂದ ದಾನ ಮಾಡಿದ್ದೇನೆ. ಕಷ್ಟದಲ್ಲಿರುವ ವ್ಯಕ್ತಿಯ ಜೀವ ಉಳಿಸುವ ಕಾರ್ಯಕ್ಕಿಂತ ಶ್ರೇಷ್ಠ ಕಾರ್ಯ ಬೇರೊಂದಿಲ್ಲ. ಆ ಕೆಲಸ ಮಾಡಿದ ತೃಪ್ತಿ ಇದೆ ಎನ್ನುತ್ತಾರೆ ಹೆಡ್ ಕಾನ್ಸ್‌ಟೇಬಲ್
ರಂಜಿತ್ ಕುಮಾರ್ ರೈ.