Advertisement

500 ವಿದ್ಯಾರ್ಥಿಗಳಿಂದ ಸಸಿ ನೆಡುವಿಕೆ

11:49 PM Jun 24, 2019 | Team Udayavani |

ಮಡಿಕೇರಿ: ಮಡಿಕೇರಿಯ ವಿದ್ಯಾಭವನ ಕೊಡಗು ವಿದ್ಯಾಲಯ ಹಾಗೂ ಕೊಡಗು ವಿದ್ಯಾಲಯ ಆಪಚ್ಯುಓನಿಟಿ ಶಾಲೆ, ಅರಣ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಶಾಲಾ ಆವರಣದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

Advertisement

ಈ ಕಾರ್ಯಕ್ರಮದಲ್ಲಿ ಕಡಗದಾಳು ಸರಕಾರಿ ಪ್ರಾಥಮಿಕ ಶಾಲೆ, ಮಡಿಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಡಿಕೇರಿಯ ರಾಜರಾಜೇಶ್ವರಿ ಶಾಲೆ ಮತ್ತು ಗಾಳಿಬೀಡಿನ ಸರಕಾರಿ ಪ್ರಾಥಮಿಕ ಶಾಲೆಯ ವಿದ್ಯಾಥಿ9ಗಳೂ ಸೇರಿದಂತೆ ಸುಮಾರು 500 ವಿದ್ಯಾಥಿ9ಗಳು ಪಾಲ್ಗೊಂಡಿದ್ದರು.

ಅರಣ್ಯ ಇಲಾಖೆಯ ವತಿಯಿಂದ ವಿತರಿಸಲಾದ ಹೊಂಗೆ , ತಾರಿ , ಹಲಸು , ಹೆಬ್ಬಲಸು , ಹೆಬ್ಬೇವು ಮುಂತಾದ 2000 ಬೀಜಗಳಿಂದ ಕೂಡಿರುವ ಮಣ್ಣಿನ ಉಂಡೆಗಳನ್ನು ವಿದ್ಯಾಥಿ9ಗಳು ತಯಾರಿಸಿದರು. ಹಲವು ಜಾತಿಯ ಗಿಡಗಳನ್ನು ಈ ಸಂದರ್ಭದಲ್ಲಿ ನೆಡಲಾಯಿತು. ಆಪಚ್ರ್ಯುನಿಟಿ ಶಾಲೆಯ ನಿರ್ದೇಶಕಿ ಮೀನಾ ಕಾರ್ಯಪ್ಪ , ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿದ್ಯಾ ಹರೀಶ್‌ , ಉಪ ಪ್ರಾಂಶುಪಾಲೆ ಕೆ.ವನಿತಾ ಚಂಗಪ್ಪ, ವ್ಯವಸ್ಥಾಪಕ ರವಿ, ವಲಯ ಅರಣ್ಯಾಧಿಕಾರಿಗಳಾದ ಆನಂದ್‌, ಮಲ್ಲಯ್ಯ , ಬಾಬುರಾಢೋಡ್‌ ಮತ್ತು ಅಪರ ವಲಯ ಅರಣ್ಯಾಧಿಕಾರಿ ಜಗದೀಶ್‌, ಶಾಲಾ ಶಿಕ್ಷಕರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next