Advertisement

ಕಾಲೇಜು ಕಟ್ಟಡ ನಿರ್ಮಾಣಕ್ಕೆ ಗಿಡಗಳು ಬಲಿ!

02:51 PM Sep 02, 2017 | Team Udayavani |

ಮೊಳಕಾಲ್ಮೂರು: ಮಳೆ ಕಡಿಮೆಯಾಗಿ ಬರ ಆವರಿಸಿರುವ ಈ ಸಂದರ್ಭದಲ್ಲಿ ಪರಿಸರ ರಕ್ಷಣೆ ಮಾಡಬೇಕಾಗಿದೆ. ಹೆಚ್ಚು ಗಿಡ ನೆಟ್ಟು ಪೋಷಿಸಬೇಕು ಎಂದು ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಮಾತ್ರ ಇದಕ್ಕೆ ಅಪವಾದ. ಕಾಲೇಜು ಆವರಣದಲ್ಲಿ ಬೆಳೆದಿದ್ದ ಗಿಡಗಳನ್ನು ಕಡೊದು ಹಾಕಿ ಅವೈಜ್ಞಾನಿಕವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದೆ. ಇದರಿಂದ ಕಾಲೇಜಿನ ಆವರಣದ ಅಂದವೇ ಹಾಳಾಗುವಂತಾಗಿದೆ ಎಂಬ ಆರೋಪ ಕೇಳಿಬಂದಿದೆ.

Advertisement

ಪಟ್ಟಣದಲ್ಲಿ ವಿಶಾಲ ಶಾಲಾ ಆವರಣ ಇರುವುದು ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಮಾತ್ರ. ಇಲ್ಲಿ ನಾಮಕಾವಸ್ತೆಗೆ ನೆಟ್ಟಿದ್ದ ವಿವಿಧ ತಳಿಯ ಸಸಿಗಳು ಒಣಗಲಾರಂಭಿಸಿದ್ದವು. ಇದನ್ನು ಗಮನಿಸಿದ ಸಾರ್ವಜನಿಕರು ಅಂತಹ ಗಿಡಗಳಿಗೆ ಕಳೆದ 5 ವರ್ಷಗಳಿಂದ ಟ್ಯಾಂಕರ್‌ ನೀರುಣಿಸಿ ಪರಿಸರ ಸಂರಕ್ಷಣೆ ಮಾಡಿದ್ದರು. ಈ ಗಿಡಗಳು ಸಮೃದ್ಧವಾಗಿ ಬೆಳೆಯುತ್ತಿದ್ದಂತೆ ಅವುಗಳನ್ನು ಕಡಿದು ಹಾಕುತ್ತಿರುವ ಕಾಲೇಜಿನ ಆಡಳಿತ ಮಂಡಳಿ ಕಟ್ಟಡ ನಿರ್ಮಾಣ ಮಾಡುತ್ತಿದೆ. ಈ ಸ್ಥಳದಲ್ಲಿ 5 ವರ್ಷಗಳಿಂದ ಬೆಳೆದಿದ್ದ ಗಿಡಗಳ ಮಾರಣಹೋಮದಿಂದ ಪರಿಸರ ಹಾನಿ ಉಂಟಾಗುತ್ತಿದೆ. ಯಾವುದೇ ಗಿಡಗಳನ್ನು ಕಡಿಯಬೇಕಾದರೆ ಅರಣ್ಯ ಇಲಾಖೆಯ ಅನುಮತಿ ಅಗತ್ಯ. ಆದರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಗಿಡಗಳನ್ನು ಕಡಿಯಲು ಅನುಮತಿ ನೀಡದ್ದಾರೆ. ಹಾಗಾಗಿ ಪರಿಸರ ನಾಶದಲ್ಲಿ ಅವರ ಪಾತ್ರವೂ ಇದೆ ಎನ್ನಲಾಗುತ್ತಿದೆ. ಪರಿಸರವನ್ನು ಉಳಿಸಿ ಬೆಳೆಸಿ ಸಂರಕ್ಷಿಸಬೇಕೆಂದು ಪ್ರಚಾರ ಮಾಡುವ ಶಿಕ್ಷಣ ಇಲಾಖೆ, ಇಲ್ಲಿ ಮಾತ್ರ ಅದನ್ನು ಮರೆತಂತಿದೆ. ಸಾರ್ವಜನಿಕರು ಜತನದಿಂದ ಕಾಪಾಡಿಕೊಂಡು ಬಂದಿದ್ದ ಗಿಡಗಳನ್ನು ಕಡಿದು ಹಾಕಲು ಅನುಮತಿ ನೀಡಿ ಜನರ ಹಾಗೂ ಶಾಲಾ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣರಾಗಿದ್ದಾರೆ. 

ಕಾಲೇಜು ಆವರಣದಲ್ಲಿ ಬೆಳೆದಿರುವ ಗಿಡಗಳನ್ನು ಹಾಳು ಮಾಡಬಾರದು. ಕಾಲೇಜಿನ ಆವರಣದಲ್ಲಿ ಸಾಕಷ್ಟು ಖಾಲಿ ಜಾಗ ಇದ್ದು, ಅಲ್ಲಿ ಕಟ್ಟಡ ನಿರ್ಮಿಸಿಕೊಳ್ಳಲು ಅವಕಾಶವಿದೆ.  ಆದರೆ ಮಧ್ಯಭಾಗದಲ್ಲಿ ಕಟ್ಟಡ ನಿರ್ಮಿಸುತ್ತಿರುವುದು ಅವೈಜ್ಞಾನಿಕವಾಗಿದ್ದು, ಈಗಿರುವ ಕಾಲೇಜು ಕಟ್ಟಡದಿಂದ ಬೇರ್ಪಡಿಸಿದರೆ ಅನೈತಿಕ ಚಟುವಟಿಕೆಗೆ ಅವಕಾಶ ದಾರಿ ಮಾಡಿಕೊಟ್ಟಂತಾಗುತ್ತದೆ ಎಂಬ ಮಾತುಗಳೂ ಕೇಳಿಬಂದಿವೆ. ಆದ್ದರಿಂದ ಕೂಡಲೇ ಕಟ್ಟಡ ಕಾಮಗಾರಿ ಸ್ಥಗಿತಗೊಳಿಸಿ ಬೇರೆ ಕಡೆ ನಿರ್ಮಿಸಬೇಕು. ಈ ಮೂಲಕ ಅಳಿದುಳಿದಿರುವ ಅಲ್ಪಸ್ಪಲ್ಪ ಜಾಗದಲ್ಲಿರುವ ಗಿಡಗಳನ್ನು ರಕ್ಷಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.

Advertisement

Udayavani is now on Telegram. Click here to join our channel and stay updated with the latest news.

Next