ಬೈಂದೂರು: ಮಾನಸ ಮಿತ್ರ ಮಂಡಳಿ ಆಲಂದೂರು, ಧ.ಗ್ರಾ.ಯೋಜನೆ, ಊರಿನ ನಾಗರಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಒಂದು ಎಕರೆ ಹಡಿಲು ಬಿದ್ದ ಭೂಮಿಯ ಭತ್ತದ ನಾಟಿ ಕಾರ್ಯ ರವಿವಾರ ಬೆಳಗ್ಗೆ ನಡೆಯಿತು.
ನಾಟಿಗೆ ಬೆಂಗಳೂರಿನಿಂದ ಬಂದ ಯುವಕರು ಸಾರ್ವಜನಿಕರು ಹಿರಿಯರು,
ಧ.ಗ್ರಾಮಾಭಿವೃದ್ದಿ ಮಹಿಳೆಯರು ಬೆಳಗ್ಗೆಯಿಂದಲೇ ಉತ್ಸಾಹದಿಂದ ಗದ್ದೆಯಲ್ಲಿ ನಾಟಿ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದರು. ಈ ಕಾರ್ಯಕ್ಕೆ ಊರವರು ಪ್ರೋತ್ಸಾಹ ನೀಡಿದರು.
ಕೆಸರುಗದ್ದೆ ಓಟ, ಗ್ರಾಮೀಣ ಸಂಪ್ರದಾಯಗಳ ಮೂಲಕ ಯುವಕರು ನಾಟಿ ಕಾರ್ಯಕ್ಕೆ ಹಬ್ಬದ ಮೆರುಗು ತಂದು ಕೊಟ್ಟರು.
ದೂರದ ಬೆಂಗಳೂರು,ಮುಂಬೈ ಮುಂತಾದ ಕಡೆಗಳಿಂದ ಆಗಮಿಸಿ ಯುವಕರು ನಾಟಿ ಕಾರ್ಯ ಮಾಡುವುದಕ್ಕಾಗಿ ಊರಿಗೆ ಆಗಮಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಮಾನಸ ಮಿತ್ರ ಮಂಡಳಿ ಅಧ್ಯಕ್ಷರು, ಪದಾಧಿಕಾರಿಗಳು, ಸರ್ವ ಸದಸ್ಯರು, ಧ.ಗ್ರಾ.ಯೋಜನೆಯ ಸದಸ್ಯರು ಹಾಗೂ ಊರಿನ ಹಿರಿಯರು ಉಪಸ್ಥಿತರಿದ್ದರು.