ಗಂಗಾವತಿ: ನದಿ ಕೆರೆ ಕಟ್ಟೆ ಹಳ್ಳ ಕೊಳ್ಳ ಸುತ್ತಲೂ ಡಿಸೈನರ್ ಸೂರಜ್ ಗೆ ನೆಡುತೋಪು ಬೆಳೆಸುವ ರೋಟರಿ ಕ್ಲಬ್ ನ ಕಾರ್ಯ ಶ್ಲಾಘನೀಯ ಎಂದು ಮಾಜಿ ಸಂಸದ ಶಿವರಾಮಗೌಡ ಹೇಳಿದರು.
ಅವರು ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ನಿಮಿತ್ತ ರೋಟರಿ ಕ್ಲಬ್ ಸೆಂಟ್ರಲ್ ವತಿಯಿಂದ ತಾಲ್ಲೂಕಿನ ಕೋಟಯ್ಯಕ್ಯಾಂಪ್ ನ ಕುಡಿಯುವ ನೀರಿನ ಕೆರೆ ಸುತ್ತಲೂ ಸಾರ್ವತ್ರಿಕ ನೆಡುತೋಪು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ನೈಸರ್ಗಿಕ ಸಂಪತ್ತು ಕಾಪಾಡುವುದು ಅವಶ್ಯವಾಗಿದೆ. ನೈಸರ್ಗಿಕವಾಗಿರುವ ಗಿಡ-ಮರ,ಗುಡ್ಡ-ಬೆಟ್ಟ,ನೀರು-ಗಾಳಿ ಇವುಗಳನ್ನು ಕಾಪಾಡುವುದು ಅವಶ್ಯಕತೆಯಿದೆ. ಗಿಡ ಮರಗಳಿಂದ ಶುದ್ದ ಗಾಳಿ, ಮಳೆ-ಬೆಳೆ ಪ್ರಾಕೃತಿಕ ಆಮ್ಲಜನಕ ಉತ್ಪತ್ತಿ ಆಗಿ ನಮಗೆಲ್ಲಾ ತುಂಬಾ ಉಪಯುಕ್ತವಾಗಿದೆ. ಕಾರಣ ಎಲ್ಲರೂ ಪ್ರಕೃತಿಯ ಆರಾಧಕರಾಗಬೇಕು. ನೈಸರ್ಗಿಕ ಸಂಪತ್ತು ಹಾಳು ಮಾಡದೇ ಕಾಪಾಡುವ ಅವಶ್ಯಕತೆ ಇದೆ ಎಂದರು.
ರೋಟರಿ ಸಂಸ್ಥೆಯ ಅಧ್ಯಕ್ಷ ಮಹೇಶ ಸಾಗರ ಮಾತನಾಡಿ ರೋಟರಿ ಸಂಸ್ಥೆಯು ಸಾಮಾಜಿಕ ಶೈಕ್ಷಣಿಕ ಮತ್ತು ಆರೋಗ್ಯ ಸೇವೆ ನೀಡುತ್ತಿದೆ. ಪರಿಸರ ಕಾಳಜಿ ಗ್ರಾಮೀಣ ಭಾಗದಲ್ಲಿ ರೋಟರಿ ತನ್ನ ಸೇವೆ ವಿಸ್ತರಿಸಿದ್ಧು ಕೋಟಯ್ಯ ಕ್ಯಾಂಪಿನ 8 ಎಕರೆ ಪ್ರದೇಶದ ಕುಡಿಯುವ ನೀರಿನ ಕೆರೆ ದಂಡೆ ಆವರಣದಲ್ಲಿ ಗಿಡ ಮರ ನೆಡುವುದರ ಜೊತೆಗೆ ರೈತರಿಗೆ ಸಸಿ ವಿತರಣೆ ಮಾಡಿ ಹಸಿರು ಹಬ್ಬ ಕಾರ್ಯಕ್ರಮ ಏರ್ಪಡಿಸಿ ರೋಟರಿ ಪರಿಸರ ಕಾಳಜಿ ಮಾಡುತ್ತಿದೆ ಎಂದರು.
ಗ್ರಾಮದ ಮುಖಂಡರಾದ ನೆಕ್ಕಂಟಿ ರಾಮಕೃಷ್ಣ, ರೋಟರಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಅಜಿತ್ ರಾಜ ಸುರಾನ ಮತ್ತು ಗ್ರಾ. ಪಂ. ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು,ಪಿ ಡಿ ಓ ಹಾಗೂ ರೋಟರಿಯ ಪಧಾಧಿಕಾರಿಗಳಾದ ಟಿ. ಆಂಜನೇಯ, ವಾಸು ಕೊಳಗದ, ಜೆ ನಾಗರಾಜ, ಪ್ರಕಾಶ ಛೋಪ್ರ, ದೊಡ್ಡಯ್ಯ, ಉಗಮರಾಜ, ನಾಗರಾಜ ಗುತ್ತೇದಾರ, ಗುರುರಾಜ, ಸದಾನಂದ ಶೇಠ್, ಸುರೇಶ, ಅಶೋಕ, ಶ್ರೀನಿವಾಸ, ಗಂಗಾಧರ, ಸೋಮಶೇಖರ, ವೆಂಕಟೇಶ, ಬಸವರಾಜ, ರುದ್ರಗೌಡ್ ಇದ್ದರು.