ಮುದ್ದೇಬಿಹಾಳ: ಪರಿಸರ ಮಾಲಿನ್ಯ, ಗ್ಲೋಬಲ್ ವಾರ್ಮಿಂಗ್ ಪರಿಣಾಮ ಅನೇಕ ರೋಗಗಳು ಬರತೊಡಗಿವೆ. ಇದಕ್ಕೆಲ್ಲ ಪರಿಹಾರವೆಂದರೆ ಸಸಿ ನೆಟ್ಟು ಗಿಡ ಮರಗಳನ್ನು ಹೆಚ್ಚೆಚ್ಚು ಬೆಳೆಸುವಂಥದ್ದು ಎಂದು ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಸಿ.ಎಸ್.ನಾಡಗೌಡ ಹೇಳಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ 51ನೇ ಜನ್ಮದಿನ ನಿಮಿತ್ತ ಶನಿವಾರ ಇಲ್ಲಿನ ವಿದ್ಯಾನಗರದಲ್ಲಿರುವ ಎಸ್‌ಡಿಎಂ ಲೇಔಟ್‌ನಲ್ಲಿ ಬ್ಲಾಕ್ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಯುವ ಕಾಂಗ್ರೆಸ್, ಎನ್‌ಎಸ್‌ಯುಐ, ಶೃಂಗಾರಗೌಡ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಅರಳಿಗಿಡ ನೆಡುವ ಕಾರ್ಯಕ್ರಮಕ್ಕೆ ಅರಳಿಗಿಡ ನೆಟ್ಟು ಚಾಲನೆ ನೀಡಿ ಮಾತನಾಡಿದರು. ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ನಾಡಗೌಡರು, ಬಿಜೆಪಿ ಸರ್ಕಾರ ಆಪರೇಷನ್ ಕಮಲ ಮಾಡಿಯೇ ಅ ಧಿಕಾರಕ್ಕೆ ಬಂದಿದೆ. ರಾಜ್ಯದ ಹಿತ ಕಾಪಾಡಲು ಇವರು ಅ ಧಿಕಾರಕ್ಕೆ ಬಂದಿಲ್ಲ.
ರಾಜ್ಯವನ್ನು ದೋಚುವ ಉದ್ದೇಶದಿಂದ ಅಧಿ ಕಾರಕ್ಕೆ ಬಂದಿದ್ದಾರೆ. ಜನರು ಇವರ ಬಗ್ಗೆ ಜಾಗೃತರಾಗಬೇಕು. ನೀರಾವರಿ ಯೋಜನೆಯಡಿ 2000 ಕೋಟಿ ಹಣ ಕಿಕ್‌ಬ್ಯಾಕ್ ಪಡೆದಿರುವ ಆರೋಪವನ್ನು ಅವರದೇ ಪಕ್ಷದ ಶಾಸಕರು ಮಾಡುತ್ತಿದ್ದಾರೆ. ಜಿಂದಾಲ್‌ಗೆ ಭೂಮಿ ಕೊಟ್ಟಾಗಲೂ ಕಿಕ್‌ಬ್ಯಾಕ್ ಪಡೆದಿದ್ದಾರೆ. ಕೊರೊನಾ ಸಾಮಗ್ರಿ ಖರೀದಿಯಲ್ಲಿ, ಪುನರ್ವಸತಿ ಕೇಂದ್ರಗಳಲ್ಲಿ ದುಡ್ಡು ಹೊಡೆದಿದ್ದಾರೆ. ಈ ಸರ್ಕಾರ ತನ್ನ ಪರಿಮಿತಿ ದಾಟಿದೆ. ನಮಗೆ ಸಿಬಿಐ ಬಗ್ಗೆ ನಂಬಿಕೆ ಇಲ್ಲವಾಗಿದೆ. ಎಸಿಬಿ, ಲೋಕಾಯುಕ್ತ ಸಂಸ್ಥೆಗಳೂ ಜನರ ನಂಬಿಕೆ ಕಳೆದುಕೊಂಡಿದೆ.
ಹೀಗಾಗಿ ಕಿಕ್‌ಬ್ಯಾಕ್ ಸೇರಿ ಸರ್ಕಾರದ ಎಲ್ಲ ಹಗರಣಗಳನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ನೇತೃತ್ವದ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸದ್ದಾಂ ಕುಂಟೋಜಿ, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯುಸೂಫ್ ನಾಯೊRàಡಿ, ಮಹ್ಮದರμàಕ ಶಿರೋಳ, ಶೋಭಾ ಶಳ್ಳಗಿ, ಮಹಿಬೂಬ ಗೊಳಸಂಗಿ, ರಿಯಾಜ ಢವಳಗಿ, ಹಣಮಂತ ವಡ್ಡರ, ಶಿವು ಶಿವಪುರ, ರμàಕ್ ದ್ರಾಕ್ಷಿ, ಮೂಲಿಮನಿ, ಮಲ್ಲಿಕಾರ್ಜುನ ನಾಡಗೌಡ, ಅಶೋಕ ಅಜಮನಿ, ವೈ.ಎಚ್. ವಿಜಯಕರ್, ರುದ್ರಗೌಡ ಅಂಗಡಗೇರಿ, ಕಾಮರಾಜ ಬಿರಾದಾರ, ಹುಸೇನ ಮುಲ್ಲಾ, ಬಸವರಾಜ ಹುರಕಡ್ಲಿ, ಸಂಗಪ್ಪ ಮೇಲಿನಮನಿ, ಟಿಪ್ಪು ಮ್ಯಾಗೇರಿ, ಅಬೂಬRರ ಹಡಗಲಿ, ಪ್ರಶಾಂತ ತಾರನಾಳ ಇದ್ದರು. ಅಂಗಾರಗೌಡ ಪೌಂಢೇಶನ್ ಸಂಚಾಲಕ ಸಿದ್ದನಗೌಡ ಪಾಟೀಲ ಅವರು 10 ಅರಳಿಗಿಡ ಉಚಿತವಾಗಿ ನೀಡಿ ಪರಿಸರ ಪ್ರೇಮ ಮೆರೆದರು. ಇಂಡಿ: ರಾಹುಲ್ ಗಾಂ ಧಿ ಜನ್ಮದಿನ ನಿಮಿತ್ತ ಸಸಿ ನೆಡುವ ಕಾರ್ಯಕ್ರಮಕ್ಕೆ ಅವಿನಾಶ ಬಗಲಿ ಚಾಲನೆ ನೀಡಿದರು.