Advertisement

ಪರಿಸರದ ಉಳಿವಿಗೆ ನಗರದಲ್ಲಿ ಗಿಡ ಮರಗಳು ಹೆಚ್ಚಲಿ

11:21 AM Jun 02, 2019 | Sriram |

ಬದಲಾಗುತ್ತಿರುವ ಈ ಕಾಲ ಘಟ್ಟದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಮುಂದೆ ಆಗಲಿರುವ ಅನಾಹುತಗಳ ಈಗಾಗಲೇ ಎಲ್ಲರಿಗೂ ತಿಳಿದಿರುವ ವಿಷಯ. ಸಸ್ಯ ಸಂಪತ್ತು ನಾಶವಾಗುತ್ತಿರುವ ಇಂದಿನ ದಿನಗಳಲ್ಲಿ, ಮುಂದೆ ಆಗಲಿರುವ ಅನಾಹುತಗಳನ್ನು ಪರಿಗಣಿಸಿ ಸಸ್ಯ ಸಂಪತ್ತನ್ನು ಉಳಿಸಿ ಬೆಳೆಸುವುದು ಎಲ್ಲಾ ಮನುಕುಲದ ಕರ್ತವ್ಯ. ನಮ್ಮ ನಗರಕ್ಕೆ ಹಸುರು ಹೊದಿಕೆಯನ್ನು ಹಾಕಲು ಹೆಚ್ಚಿನ ರೀತಿಯಲ್ಲಿ ಗಿಡ ಮರಗಳನ್ನು ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿದುಕೊಳ್ಳಬೇಕು.

Advertisement

ಪರಿಸರ ಉಳಿವಿಗೆ ನಾವೇನು ಮಾಡಬಹುದು ?
1. ಮಂಗಳೂರಿನ ಮುಖ್ಯ ನಗರ ಪ್ರದೇಶದಲ್ಲಿ, ವಿದ್ಯುತ್‌ ತಂತಿಗಳನ್ನು ಸಂಪೂರ್ಣವಾಗಿ ಭೂಗತಗೊಳಿಸಲು ಸಂಬಂಧಪಟ್ಟವರು ಉತ್ತಮ ಯೋಜನೆಯನ್ನು ರೂಪಿಸಬೇಕಾಗಿದೆ. ಇದರಿಂದಾಗಿ ಕಾಲಕಾಲಕ್ಕೆ ಕಂಬದಲ್ಲಿರುವ ವಿದ್ಯುತ್‌ ತಂತಿಗಳನ್ನು ತಾಗುವ ಮರಗಳನ್ನು/ಕೊಂಬೆಗಳನ್ನು ಕಡಿಯುವ ಪರಿಪಾಠ ಕಡಿಮೆಯಾಗುವುದರೊಂದಿಗೆ ಮರಗಳು ಹೆಚ್ಚು ಎತ್ತರಕ್ಕೆ ಬೆಳೆಯಲು ಸಹಕಾರಿಯಾಗಲಿವೆ.

2. ಎಲ್ಲೆಲ್ಲಿ ರಸ್ತೆಯಂಚಿನಲ್ಲಿ ಗಿಡ ಮರಗಳು ಇಲ್ಲವೋ, ಅಂತಹ ಪ್ರದೇಶಗಳಲ್ಲಿ ಮುಖ್ಯವಾಗಿ ಹಂಪನಕಟ್ಟೆಯ ವೆನ್ಲಾಕ್‌ ಆಸ್ಪತ್ರೆ ಹೊರ ಪ್ರದೇಶದಲ್ಲಿ, ಕಾರ್‌ಸ್ಟ್ರೀಟ್ ಪ್ರದೇಶದಲ್ಲಿ ಗಿಡಗಳನ್ನು ನೆಟ್ಟು ಮರವಾಗಿ ಬೆಳೆೆಸಬೇಕು.

3. ಕೆಲವೊಂದು ಕಡೆಗಳಲ್ಲಿ ನೆಟ್ಟ ಗಿಡಗಳು ಶಿಥಿಲಾವಸ್ಥೆಯಲ್ಲಿದ್ದು, ಅಲ್ಲಿ ಹೊಸ ಗಿಡಗಳನ್ನು ಮಳೆಗಾಲದ ಆದಿಯಲ್ಲಿ ನೆಟ್ಟು ಪೋಷಿಸಬೇಕು (ಮುಖ್ಯವಾಗಿ ಉರ್ವಸ್ಟೋರ್‌-ಲೇಡಿಹಿಲ್ ಪ್ರದೇಶ, ಲೇಡಿಹಿಲ್-ಲಾಲ್ಬಾಗ್‌, ಲೇಡಿಹಿಲ್-ಮಣ್ಣಗುಡ್ಡ ಪ್ರದೇಶಗಳು).

4. ಕೆಲವೊಂದು ಖಾಲಿ ಜಾಗ ಇದ್ದ ಕಡೆ (ಲಾಲ್ಬಾಗ್‌, ಮಣ್ಣಗುಡ್ಡ ಇತ್ಯಾದಿ ಪ್ರದೇಶಗಳು), ಗಿಡಗಳನ್ನು ನೆಟ್ಟು ಪೋಷಿಸುವಂತಿರಬೇಕು.

Advertisement

5.ಶಾಲಾ, ಕಾಲೇಜುಗಳ ಆವರಣದಲ್ಲಿ ಮತ್ತು ಮೈದಾನದಂಚಿನಲ್ಲಿ ಗಿಡ ಮರಗಳನ್ನು ಬೆಳೆಸಿ ಪೋಷಿಸಬೇಕು. ಅದೇ ರೀತಿ ಸರಕಾರಿ ಕಚೇರಿಗಳಲ್ಲಿ, ಆಸ್ಪತ್ರೆಗಳಲ್ಲಿ, ಉದ್ದಿಮೆಗಳ ಆವರಣಗಳಲ್ಲಿ ಗಿಡಮರಗಳನ್ನು ಬೆಳೆಸಿ ಪೋಷಿಸಬೇಕು.

ಗಿಡಗಳನ್ನು ನೆಡುವ, ಮರಗಳಾಗುವಂತೆ ಪೋಷಿಸುವ ಮತ್ತು ಎಲ್ಲರ ಮುಂದಿನ ಜೀವನ ಸುಖಮಯವಾಗುವಂತೆ ಚಿಂತನೆ ಮಾಡುವ, ಈ ಬಗ್ಗೆ ನಾಗರಿಕರೊಂದಿಗೆ ಸಂಬಂಧಪಟ್ಟಂತಹ ಅಧಿಕಾರಿಗಳೂ ಚಿಂತನೆ ಮಾಡುವುದರೊಂದಿಗೆ ನಮ್ಮ ಮಂಗಳೂರು ಮುಂದಿನ ದಿನಗಳಲ್ಲಿ ಉತ್ತಮ ಹಸುರು ಹೊದಿಕೆಯನ್ನು ಹೊಂದಲಿ ಎಂಬುದು ಆಪೇಕ್ಷೆ.

-ವಿಶ್ವನಾಥ್‌ ಕೋಟೆಕಾರ್‌

Advertisement

Udayavani is now on Telegram. Click here to join our channel and stay updated with the latest news.

Next