Advertisement

ಮಳೆ ಇಲ್ಲದೆ ಯೋಜನೆಗಳೆಲ್ಲ ವಿಫಲ

12:24 PM Jul 06, 2017 | Team Udayavani |

ಕಡೂರು: ಮಳೆ ಬಂದರೆ ಮಾತ್ರ ಸರ್ಕಾರದ ಯೋಜನೆಗಳು ಫಲಕಾರಿಯಾಗುತ್ತವೆ ಎಂದು ಶಾಸಕ ವೈ.ಎಸ್‌.ವಿ.ದತ್ತ
ತಿಳಿಸಿದರು. 

Advertisement

ಮರಡಿಹಳ್ಳಿ ಗ್ರಾಮದ ಶ್ರೀಅಂತರಘಟ್ಟಮ್ಮ ದೇವಾಲಯದ ಆವರಣದಲ್ಲಿ ಕೃಷಿ ಮತ್ತಿತರ ಇಲಾಖೆ ಸಹಕಾರದೊಂದಿಗೆ
ಬುಧವಾರ ಆಯೋಜಿಸಿದ್ದ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗೊಬ್ಬರ,
ಬೀಜ, ಕೃಷಿ ಉಪಕರಣಗಳಂತಹ ಅನೇಕ ಸಾಮಗ್ರಿಗಳನ್ನು ರಿಯಾಯಿತಿ ದರದಲ್ಲಿ ಅಥವಾ ಉಚಿತವಾಗಿ ರೈತರಿಗೆ
ನೀಡುತ್ತದೆ. ಆದರೆ ಸರ್ಕಾರದ ಯೋಜನೆಗಳು ಫಲ ಪ್ರದವಾಗಬೇಕೆಂದರೆ ಮಳೆ ಬರಬೇಕು. ಮಳೆಯೇ
ಇಲ್ಲವೆಂದರೆ ಯೋಜನೆಗಳು ಫಲಪ್ರದವಾಗಲು ಸಾಧ್ಯವಾಗುವುದಿಲ್ಲ ಎಂದರು.

ಕಳೆದ 10 ದಿನಗಳಿಂದ ಸುಮಾರು 350 ಕಿ.ಮೀ. ಪಾದಯಾತ್ರೆ ಮುಗಿಸಿದ್ದು, ರೈತರ ಸಂಕಷ್ಟ ನನಗೆ ಅರಿವಾಗುತ್ತಿದೆ. ಎಲ್ಲೆಲ್ಲಿಯೂ ಮಳೆಯ ಸುಳಿವಿಲ್ಲ.ಅಡಕೆ, ತೆಂಗು, ಬಿತ್ತನೆ ಮಾಡಿದ ಬೀಜ ಮೊಳಕೆಯೊಡೆದು ಒಣಗಿ 
ಹೋಗುತ್ತಿರುವುದನ್ನು ಕಂಡರೆ ಭೀಕರ ಬರಗಾಲ ಕಣ್ಣ ಮುಂದೆ ಬರುತ್ತದೆ. ಮುಂದಿನ ದಿನಗಳಲ್ಲಿ ಕುಡಿವ ನೀರಿಗೂ
ಸಂಕಷ್ಟವಾಗುತ್ತದೆ. ಇಂತಹ ಸಮಯದಲ್ಲಿ ಕೃಷಿ ಇಲಾಖೆ ನೀಡುತ್ತಿರುವ ಅನೇಕ ಯೋಜನೆಗಳು ಮಳೆ ಬಂದರೆ ಮಾತ್ರ
ಸಹಕಾರವಾಗಲಿದೆ ಎಂದರು.

ಕೇಂದ್ರ ಸರ್ಕಾರ ಬೆಳೆ ವಿಮೆಯನ್ನು ಪ್ರತಿಯೊಬ್ಬ ರೈತರು ಮಾಡಿಸಬೇಕೆಂದು ಆದೇಶ ನೀಡುತ್ತದೆ. ಇದರ ಪ್ರಕಾರ
ಅನೇಕ ರೈತರು ವಿಮೆ ಮಾಡಿಸಿದ್ದರು ವಿಮೆ ಮಾಡಿಸಿದವರಿಗೆ ಕೇಂದ್ರ ಏನು ಪರಿಹಾರ ನೀಡಿದೆ ಎಂಬುದನ್ನು ತಿಳಿಸಲಿ
ಎಂದು ಕೇಂದ್ರ ಸರ್ಕಾರದ ಧೋರಣೆ ಖಂಡಿಸಿದರು. ಭದ್ರಾ ಮೇಲ್ದಂಡೆ ಯೋಜನೆಯ ತುಮಕೂರು ಕಾಲುವೆಗೆ
ಈಗಾಗಲೇ ಟೆಂಡರ್‌ ಪ್ರಕ್ರಿಯೆ ಆರಂಭಗೊಂಡಿದ್ದು, 32 ಕೆರೆ ತುಂಬಿಸುವ ಕಾಮಗಾರಿಗೆ ಕೆಲವೇ ದಿನಗಳಲ್ಲಿ ಭೂಮಿಪೂಜೆ  ನೆರವೇರಿಸಲಾಗುವುದು ಎಂದು ಭರವಸೆ ನೀಡಿದರು.

ತಾಪಂ ಅಧ್ಯಕ್ಷೆ ರೇಣುಕಾ ಉಮೇಶ್‌,ಉಪಾಧ್ಯಕ್ಷ ಪಂಚನಹಳ್ಳಿ ಪ್ರಸನ್ನ, ಜಿಪಂ ಸದಸ್ಯೆ ಕಾವೇರಿ ಲಕ್ಕಪ್ಪ, 
ಲಕ್ಕಮ್ಮ ಸಿದ್ದಪ್ಪ, ಜಿಗಣೆಹಳ್ಳಿ ಮಂಜುನಾಥ್‌, ಕೃಷಿ ಅ ಧಿಕಾರಿ ಶಿವಕುಮಾರ್‌, ಪಟ್ಟಣಗೆರೆ ಗ್ರಾಪಂ ಅಧ್ಯಕ್ಷೆ ಮಂಗಳಮ್ಮ
ಅಧ್ಯಕ್ಷತೆ ವಹಿಸಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next