Advertisement
ತಾಲೂಕಿನ ಸಾಮಾಜಿಕ ಅರಣ್ಯ ಇಲಾಖೆಯು ಗ್ರಾ.ಪಂ., ಶಾಲೆ, ರಸ್ತೆ ಬದಿ ಸಹಿತ ಖಾಲಿ ಸ್ಥಳಗಳಲ್ಲಿ 47,500 ಗಿಡಗಳನ್ನು ನೆಡುವ ಸಲುವಾಗಿ ಹಾಲಾಡಿ ನರ್ಸರಿಯಲ್ಲಿ ಬೆಳೆಸಿದೆ. ಪ್ರತಿ ಗ್ರಾ.ಪಂ. ಗೆ ಬೇಡಿಕೆಗೆ ಅನುಗುಣವಾಗಿ ಅಥವಾ 500 ಗಿಡಗಳಂತೆ ನೀಡಲಾಗುತ್ತಿದ್ದು ತಾಲೂಕಿನ 65 ಗ್ರಾ.ಪಂ.ಗಳಿಗೆ ಗಿಡ ನೆಡುವ ಜವಾಬ್ದಾರಿ ನೀಡಿದೆ.
Related Articles
Advertisement
ಸಬ್‌ಮಿಷನ್ ಆನ್ ಆ್ಯಗ್ರೋಫಾರೆಸ್ಟ್ರಿ (ಎಸ್‌ಎಎಂಎಫ್) ಯೋಜನೆ ಮೂಲಕವೂ ಗಿಡಗಳ ನಾಟಿಗೆ ಅವಕಾಶವಿದೆ. 6×9 ಅಳತೆ ಚೀಲದ ಸಸಿಗೆ 1 ರೂ., 8×12 ಅಳತೆ ಚೀಲದ ಸಸಿಗೆ 3 ರೂ. ಪಾವತಿಸಿ ಫಲಾನುಭವಿಗಳು ಗಿಡ ಪಡೆಯಬಹುದು. ಬೌಂಡರಿ ಪ್ಲಾಂಟಿಗ್‌ಗೆ ಪ್ರತಿ ಗಿಡಕ್ಕೆ 14 ರೂ., ಒಂದು ಹೆಕ್ಟೇರ್‌ನಲ್ಲಿ 100ರಿಂದ 500ರಂತೆ ಪ್ರತಿಗಿಡಕ್ಕೆ 14 ರೂ., 1 ಹೆಕ್ಟೇರ್‌ನಲ್ಲಿ 500ರಿಂದ 1,000ದಂತೆ ಪ್ರತಿ ಗಿಡಕ್ಕೆ 10 ರೂ., 1 ಹೆಕ್ಟೇರ್‌ನಲ್ಲಿ 1,000ದಿಂದ 1,200ರಂತೆ ಪ್ರತಿ ಗಿಡಕ್ಕೆ 7 ರೂ. ಪ್ರೋತ್ಸಾಹ ಧನ ಲಭ್ಯವಾಗ ಲಿದೆ. ನಿರ್ವಹಣೆ ವೆಚ್ಚವೂ ಸಿಗಲಿದೆ.
ವಿವಿಧ ತಳಿ
ಆರ್‌ಎಸ್‌ಪಿಡಿಯಲ್ಲಿ ನುಗ್ಗೆ, ಸೀತಾಫಲ, ಸಾಗುವಾನಿ, ನೆಲ್ಲಿ, ಹೊನ್ನೆ, ರೈನ್‌ಟ್ರೀ, ಬಿಲ್ವಪತ್ರೆ, ಬಿದಿರು, ಮತ್ತಿ, ಮಹಾಗನಿ, ದಾಳಿಂಬೆ, ಟೋಕೋಮಾ, ಮುರಿಯ, ಕಹಿಬೇವು ಇವುಗಳನ್ನು ಒಟ್ಟು 18 ಸಾವಿರ ಗಿಡಗಳನ್ನು 6×9 ಗಾತ್ರದ ಚೀಲದಲ್ಲಿ, ಮಹಾಗನಿ, ನೇರಳೆ, ಪೇರಳೆ, ಗೇರು, ಟೋಕೋಮಾ, ಶ್ರೀಗಂಧದ 6 ಸಾವಿರ ಗಿಡಗಳನ್ನು 8×12 ಚೀಲದಲ್ಲಿ ಬೆಳೆಸಲಾಗಿದೆ.
ಹಸಿರು ಕರ್ನಾಟಕ ಯೋಜನೆಯಲ್ಲಿ 6×9 ಚೀಲದಲ್ಲಿ ನುಗ್ಗೆ, ಸೀತಾಫಲ, ಸಾಗುವಾನಿ, ನೆಲ್ಲಿ, ಹೊನ್ನೆ, ರೈನ್‌ಟ್ರೀ, ಬಿಲ್ವಪತ್ರೆ, ಬಿದಿರು, ಮತ್ತಿ, ಮಹಾಗನಿ, ದಾಳಿಂಬೆ, ಟೋಕೋಮಾ, ಮುರಿಯ, ಕಹಿಬೇವು, ಬೋರೆ, ಸೀಮಾರೂಬಾ ಜಾತಿಯ ಒಟ್ಟು 23 ಸಾವಿರ ಗಿಡಗಳನ್ನು ಬೆಳೆಸಲಾಗಿದೆ. 14×20 ಗಾತ್ರದ ಚೀಲದಲ್ಲಿ 500 ಶ್ರೀಗಂಧದ ಗಿಡಗಳನ್ನು ಬೆಳೆಸಲಾಗಿದೆ. ಹಸಿರು ಕರ್ನಾಟಕ ಯೋಜನೆಯಲ್ಲಿ ಗಿಡಗಳನ್ನು ಉಚಿತವಾಗಿ ನೀಡಲಾಗಿದೆ.
ಶಾಲಾ ಕಾಲೇಜುಗಳಿಗೆ ಗ್ರಾ.ಪಂ. ಮೂಲಕ ನೀಡಲಾಗಿದೆ. ಈ ಮೂಲಕ ಮಕ್ಕಳಲ್ಲೂ ಹಸಿರು ಕ್ರಾಂತಿ ಚಿಂತನೆ ಬೆಳೆಸಲಾಗಿದೆ. ಹಾಲಾಡಿ ನರ್ಸರಿ ದೂರವಾಯಿತು. ಬಾಡಿಗೆ ತುಂಬ ತೆರಬೇಕಾಗುತ್ತದೆ ಎಂಬ ದೂರುಗಳೂ ಸಾರ್ವಜನಿಕರಿಂದ ಇದೆ.