ತುಮಕೂರು: ರಾಜ್ಯದಲ್ಲಿ ಕುಡಿಯುವ ನೀರಿನ ಹಾಹಾಕಾರ ತೀವ್ರ ಗೊಳ್ಳುತ್ತಿದೆ. ಕುಡಿಯುವ ನೀರಿನ ಸಮಸ್ಯೆ ನೀಗಿಸಲು ರಾಜ್ಯಾದ್ಯಂತ ಇರುವ 38608 ಕೆರೆಗಳಿಗೆ ಮಳೆ ನೀರು ಸಂಗ್ರಹಿಸುವ ಕೆಲಸವೂ ಸೇರಿದಂತೆ ನದಿ ನೀರಿನಿಂದ ಕೆರೆಗಳನ್ನು ತುಂಬಿಸುವ ಶಾಶ್ವತ ಯೋಜನೆ ರೂಪಿಸಲು ಪ್ರತಿಪಕ್ಷದ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಜೊತೆ ತುಮಕೂರು ಸಂಸದ ಜಿ.ಎಸ್.ಬಸವರಾಜ್ ಚರ್ಚೆ ನಡೆಸಿದರು.
ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೆ ಜಟಿಲವಾಗು ತ್ತಿದೆ. ನೀರಿನ ಸಮಸ್ಯೆ ಬಗೆಹರಿಸಲು ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸ ಬೇಕಾಗಿದೆ ಎಂದು ಮನವರಿಕೆ ಮಾಡಿದ್ದಾರೆ.
ನೀರಿಗೆ ಹಾಹಾಕಾರ: ಕರಾವಳಿ, ಮಲೆನಾಡು ಪ್ರದೇಶ ಸೇರಿದಂತೆ ರಾಜ್ಯದ ಬಹುತೇಕ ಎಲ್ಲಾ ಪ್ರದೇಶಗಳ ಲ್ಲಿಯೂ ಕುಡಿಯುವ ನೀರಿಗೆ ಹಾಹಾಕಾರವೆದ್ದಿದೆ. ಹೇಗಾದರೂ ಮಾಡಿ ರಾಜ್ಯಾದ್ಯಂತ ಇರುವ 38,608 ಕೆರೆಗಳಿಗೆ ಮಳೆ ನೀರು ಸಂಗ್ರಹಿಸುವ ಕೆಲಸವೂ ಸೇರಿದಂತೆ ಕುಡಿಯುವ ನೀರಿಗಾಗಿ ನದಿ ನೀರಿನಿಂದ ತುಂಬಿಸುವುದು ಮತ್ತು ಮಲೆನಾಡು ಪ್ರದೇಶದಲ್ಲಿ ಕಿಂಡಿ ಯೋಜನೆ ಮಾಡುವ ಮೂಲಕ ಕುಡಿಯುವ ನೀರು ಮತ್ತು ಅಂತರ್ಜಲ ಅಭಿವೃದ್ಧಿಗೆ ಶಾಶ್ವತ ಯೋಜನೆ ರೂಪಿಸಲು ಸಮಾಲೋಚನೆ ನಡೆಸಿದರು.
ಈ ಸಂಬಂಧ ಮುಖ್ಯಮಂತ್ರಿಗಳಿಗೂ ಪತ್ರ ಬರೆಯುವ ಮೂಲಕ ಕೇಂದ್ರ ಸರ್ಕಾರಕ್ಕೆ ಈ ಯೋಜನೆ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಕೋರಿದ ಸಂಸದರು ಪ್ರಸ್ತುತ ಬಿಜೆಪಿಯಿಂದ ಕೆರೆಗಳಿಗೆ ನದಿ ನೀರು ತುಂಬಿಸುವ ಬೃಹತ್ ಆಂದೋಲನ ರೂಪಿ ಸುವ ಕುರಿತು ಚರ್ಚಿಸಿದರು.
Advertisement
ಬೆಂಗಳೂರಿನ ಡಾಲರ್ಸ್ ಕಾಲನಿ ಧವಳಗಿರಿಯಲ್ಲಿ ಭಾನುವಾರ ಭೇಟಿ ನೀಡಿ ತುಮಕೂರು ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ, ಹೇಮಾವತಿ ನಾಲೆಯಿಂದ ನೀರು ನಿಗದಿತ ಪ್ರಮಾಣದಲ್ಲಿ ಬರದೇ ಇರುವ ಬಗ್ಗೆಯೂ ಚರ್ಚೆ ನಡೆಸಿದರು.
Related Articles
Advertisement
ತಜ್ಞರೊಂದಿಗೆ ಸಮಾಲೋಚನೆ: ಈ ಬಗ್ಗೆ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯಿಸಿ, ರಾಜ್ಯದ ಎಲ್ಲಾ ಭಾಗದಲ್ಲೂ ನೀರಿಗೆ ತೊಂದರೆಯಾಗಿದೆ. ಯಾವ ರೀತಿ ಈ ತೊಂದರೆಗೆ ಪರಿಹಾರ ದೊರಕಿಸಬೇಕು ಎಂಬ ಬಗ್ಗೆ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಪ್ರಧಾನಿ ಮತ್ತು ಜಲಶಕ್ತಿ ಸಚಿವರ ಬಳಿ ನಿಯೋಗ ಹೋಗಲು ಸಹಮತ ವ್ಯಕ್ತಪಡಿಸಿದರು.
ಈ ಬಗ್ಗೆ ಮುಂದಿನ ಶನಿವಾರ ತುಮಕೂರಿಗೆ ಬರುತ್ತೇನೆ. ಪೂರ್ವ ಭಾವಿಯಾಗಿ ಚರ್ಚಿಸಿ ತುಮಕೂರಿನಲ್ಲಿ ರಾಜ್ಯದ ಎಲ್ಲಾ ಧಾರ್ಮಿಕ ಮುಖಂಡರು ಸೇರಿದಂತೆ ರಾಜ್ಯಮಟ್ಟದ ಬೃಹತ್ ಸಮಾವೇಶ ನಡೆಸೋಣ ಎಂದು ಭರವಸೆ ನೀಡಿದರು.
ನದಿ ಜೋಡಣೆಗೆ ಪಣತೊಡೋಣ: ಕೇಂದ್ರದಲ್ಲಿ ನರೇಂದ್ರಮೋದಿ ಯವರೊಂದಿಗೆ ಮತ್ತು ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಜೊತೆಗೆ ಸಮಾಲೋಚನೆ ನಡೆಸಿ ಕೇಂದ್ರ ಸರ್ಕಾರದ ಯೋಜನೆ ಯಾಗಿ ಅಥವಾ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕೆರೆಗಳಿಗೆ ನದಿ ನೀರು ಯೋಜನೆ ಜಾರಿ ಮಾಡಲೇಬೇಕು. ಅಟಲ್ಜೀ ಮತ್ತು ಮೋದಿ ಕನಸು ಸಹ ನದಿ ಜೋಡಣೆಯಾಗಿದೆ. ಆದ್ದರಿಂದ ನಾವು ಈ ಯೋಜನೆ ಜಾರಿ ಮಾಡಲು ಪಣತೊಡೋಣ ಎಂದರು.ಮುಖಂಡರಾದ ಗುರುಸಿದ್ದಪ್ಪ, ಶಿವರುದ್ರಯ್ಯ, ಬಿ.ಬಿ. ಮಹ ದೇವಪ್ಪ ಉಪಸ್ಥಿತರಿದ್ದರು.
ಯಡಿಯೂರಪ್ಪಗೆ ಮನವಿ:
ಲಿಂಗನಮಕ್ಕಿ ಯೋಜನೆಗೆ ವಿರೋಧ ಮಾಡಿದ್ದೀರಿ. ಲಿಂಗನಮಕ್ಕಿ ಯಲ್ಲಿ ಸುಮಾರು 150 ಟಿಎಂಸಿ ನೀರು ಸಂಗ್ರಹ ಮಾಡಬಹುದು. ಜೊತೆಗೆ ಅಘನಾಶಿನಿ, ಬೇಡ್ತಿ, ವರದಾ ನೀರನ್ನು ಸಹ ಲಿಂಗನಮಕ್ಕಿಗೆ ಹರಿಸಬಹದು. ವಿದ್ಯುತ್‌ನ್ನು ಯಾವಮೂಲದಿಂದದಾರೂ ಉತ್ಪತ್ತಿ ಮಾಡಬಹುದು. ಆದರೆ ನೀರನ್ನು ಉತ್ಪತ್ತಿ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಪರಿಸರ ಹಾಳಾಗದಂತೆ ನೀರು ಪಡೆಯಲು ಆ ಭಾಗದ ಜನರಿಗೆ ಮನವರಿಕೆ ಮಾಡುವಂತೆ ಬಿಎಸ್‌ವೈಗೆ ಅಭಿವೃದ್ಧಿ ರೆವಲ್ಯೂಷನ್ ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್ ಮನವಿ ಮಾಡಿದರು.
ಜು. 6ಕ್ಕೆ ತುಮಕೂರಿಗೆ ಬಿಎಸ್‌ವೈ:
ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಚರ್ಚಿಸಲು ಜು.6ರಂದು ತುಮಕೂರಿಗೆ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಲಿದ್ದು, ಕುಡಿಯುವ ನೀರಿನ ಸಮಸ್ಯೆ, ಹೇಮಾವತಿ ನೀರು ಜಿಲ್ಲೆಗೆ ಸಮ ರ್ಪಕವಾಗಿ ಹರಿಯದೆ ಇರುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಇದೇ ಸಂದರ್ಭ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ರಾಜ್ಯಮಟ್ಟದ ಸಮಾವೇಶವನ್ನು ಧಾರ್ಮಿಕ ಮುಖಂಡರ ಸಮ್ಮುಖದಲ್ಲಿ ತುಮಕೂರಿನಲ್ಲಿ ನಡೆಸುವ ಬಗ್ಗೆ ಬಿಜೆಪಿ ಮುಖಂಡರೊಂದಿಗೆ ಚರ್ಚಿಸುವ ಸಾಧ್ಯತೆ ಇದೆ.