Advertisement

ಅಕ್ರಮ ವಲಸಿಗರು, ಪಾಕ್‌ ಛಾಯಾ ಸಮರ: ಜ|ರಾವತ್‌ ಎಚ್ಚರಿಕೆ

11:15 AM Feb 22, 2018 | Team Udayavani |

ಹೊಸದಿಲ್ಲಿ : ಬಾಂಗ್ಲಾದೇಶದಿಂದ ಭಾರತದ ಈಶಾನ್ಯ ರಾಜ್ಯಗಳಿಗೆ ಗಣನೀಯ ಪ್ರಮಾಣದಲ್ಲಿ  ಅಕ್ರಮ ವಲಸೆ ನಡೆಯುತ್ತಿರುವುದರ ಹಿಂದೆ ಪಾಕಿಸ್ಥಾನದ ಕೈವಾಡವಿದ್ದು ಈ ಮೂಲಕ ಭಾರತದ ವಿರುದ್ಧ ಛಾಯಾ ಸಮರ ನಡೆಸುತ್ತಿರುವ ಪಾಕಿಸ್ಥಾನಕ್ಕೆ ಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಎಚ್ಚರಿಕೆ ನೀಡಿದ್ದಾರೆ.

Advertisement

ಭಾರತದ ಈಶಾನ್ಯ ರಾಜ್ಯಗಳಿಗೆ ಬಾಂಗ್ಲಾ ದೇಶದಿಂದ ದೊಡ್ಡ ಸಂಖ್ಯೆಯಲ್ಲಿ ಅಕ್ರಮ ವಲಸಿಗರನ್ನು ನುಗ್ಗಿಸುವ ಮೂಲಕ ಈಶಾನ್ಯ ಭಾಗಗಳನ್ನು ಒಳಹಾಕಿಕೊಳ್ಳುವ ದುರುದ್ದೇಶ ಪಾಕಿಸ್ಥಾನದ್ದಾಗಿದೆ; ಈ ರೀತಿಯ ಛಾಯಾ ಸಮರ ನಡೆಸುತ್ತಿರುವ ಪಾಕಿಸ್ಥಾನಕ್ಕೆ ಇದು ಭಾರತದ ಎಚ್ಚರಿಕೆಯಾಗಿದೆ ಎಂದು ರಾವತ್‌ ಮಾಧ್ಯಮವನ್ನು ಉದ್ದೇಶಿಸಿ ಹೇಳಿದರು. 

ಪಾಕಿಸ್ಥಾನದ ಈ ಛಾಯಾ ಸಮರಕ್ಕೆ ಚೀನದ ಬೆಂಬಲವಿದ್ದು  ಭಾರತದ ಈಶಾನ್ಯ ಭಾಗವನ್ನು ಪ್ರಕ್ಷುಬ್ದವಾಗಿರಿಸುವುದು ಈ ಛಾಯಾ ಸಮರದ ಉದ್ದೇಶವಾಗಿದೆ ಎಂದು ಜನರಲ್‌ ರಾವತ್‌ ಹೇಳಿದರು. 

ಅಸ್ಸಾಮಿನ ಹಲವು ಜಿಲ್ಲೆಗಳಲ್ಲಿ ಮುಸ್ಲಿಂ ಜನಸಂಖ್ಯೆ ಒಂದೇ ಸಮನೆ ಹೆಚ್ಚುತ್ತಿರುವುದರ ಹಿಂದೆ ಪಾಕಿಸ್ಥಾನದ ಕೈವಾಡವಿದ್ದು ಅದಕ್ಕೆ ಚೀನದ ಬೆಂಬಲ ಇರುವುದು ಸ್ಪಷ್ಟವಿದೆ ಎಂದು ಜನರಲ್‌ ರಾವತ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next