Advertisement
ಒಬ್ಬ ವ್ಯಕ್ತಿ ಓಡುತ್ತಾ, ಆ ದಾರಿಯಲ್ಲಿ ಸಿಗುವ ಕಸವನ್ನು ಹೆಕ್ಕಿ ಕೈಯಲ್ಲಿದ್ದ ಬ್ಯಾಗ್‌ಗೆ ತುಂಬಿಸಿಕೊಂಡು ಪರಿಸರ ಕಾಳಜಿ, ಫಿಟ್ನೆಸ್ ಬಗ್ಗೆಯೂ ಆಲೋಚನೆ ಮಾಡುವುದು ಪ್ಲಾಗಿಂಗ್ ಹಿಂದಿನ ಉದ್ದೇಶ. ಈ ಪರಿಸರ ಸ್ನೇಹಿ ಟ್ರೆಂಡ್ ಯೂರೋಪ್, ಅಮೆರಿಕ, ಮೆಕ್ಸಿಕೋ ಹಾಗೂ ಇನ್ನು ಕೆಲ ರಾಷ್ಟ್ರಗಳಿಗೆ ಹಬ್ಬಿತು ಎನ್ನಲಾಗಿದೆ.
ಈ ಫಿಟ್ನೆಸ್ ಟ್ರೆಂಡ್ ಆರಂಭಿಸಿದ್ದು 2016ರಲ್ಲಿ ಸ್ವೀಡನ್ನ ಎರಿಕ್ ಅಸ್ಟ್ರೋಮ್ ಎಂಬ ಓಟಗಾರ್ತಿ. ತಾನು ಪ್ರತಿದಿನ ಜಾಗಿಂಗ್ ಮಾಡುವ ಮಾರ್ಗದಲ್ಲಿ ಕಸದ ರಾಶಿ ನೋಡಿ ರೋಸಿ ಹೋಗಿ ಇದನ್ನು ಆರಂಭಿಸಿದರು. ಎಲ್ಲರೂ ಪರಿಸರ ಸ್ವಚ್ಛತೆ ಬಗ್ಗೆ ಗಮನ ಹರಿಸಲಿ ಎಂದು ಅದರ ಫೋಟೊಗಳನ್ನು ಇನ್‌ಸ್ಟ್ರಾ ಗ್ರಾಮ್‌ನಲ್ಲಿ ಹಂಚಿಕೊಂಡರು. ಇದು ಬರಬರುತ್ತಾ ಭಾರಿ ಪ್ರಚಾರ ಪಡೆಯಿತು. ಈಗ ನಮ್ಮ ದಿಲ್ಲಿ, ಬೆಂಗಳೂರಿನಲ್ಲೂ ಇಂತಹ ಟ್ರೆಂಡ್ ನಿಧಾನವಾಗಿ ಆರಂಭವಾಗಿದೆ. ಅದರಲ್ಲೂ ಪರಿಸರಪ್ರೇಮಿಗಳು ಹಾಗೂ ಫಿಟೆ°ಸ್ ಪ್ರಿಯರನ್ನು ಹೆಚ್ಚು ಆಕರ್ಷಿಸುತ್ತಿದೆ.
Related Articles
ಅರ್ಧಗಂಟೆ ಬರಿಯ ಜಾಗಿಂಗ್ ಮಾಡುವುದಕ್ಕಿಂತ ಪ್ಲಾಗಿಂಗ್ ಮಾಡಿದರೆ ಎರಡು ಪಟ್ಟು ಹೆಚ್ಚು ಕ್ಯಾಲೋರಿ ಬರ್ನ್ ಆಗುತ್ತದೆ. ಇದರಲ್ಲಿ ಓಡುವುದು, ಬಗ್ಗುವುದು, ಏಳುವುದು ಮಾಡಬೇಕಾಗಿದ್ದರಿಂದ ಸಹಜವಾಗಿ ಹೆಚ್ಚು ಕ್ಯಾಲೋರಿ ಕಳೆದುಕೊಳ್ಳುತ್ತೇವೆ. ಹಾಗೇ ದೇಹಕ್ಕೆ ಅಧಿಕ ವ್ಯಾಯಾಮವೂ ಆಗುವುದರಿಂದ ಫಿಟ್‌ಆಗಿ, ಸ್ನಾಯುಗಳು ಸದೃಢವಾಗುತ್ತವೆ. ದೈಹಿಕ ಆರೋಗ್ಯ ಸುಧಾರಣೆ ಹಾಗೂ ಪರಿಸರ ಕಾಳಜಿಯನ್ನು ಒಟ್ಟಿಗೆ ಮಾಡಬಹುದು. ಈಗೀಗ ಟ್ರೆಕಿಂಗ್‌ನಲ್ಲೂ ಪ್ಲೊಗ್ಗಿಂಗ್ ಆರಂಭವಾಗಿದೆ.
Advertisement
ಮೋದಿಯವರಿಂದ ಪ್ಲಾಗಿಂಗ್ ಮಾದರಿಇತ್ತೀಚೆಗೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಮಹಾಬಲಿಪುರಂ ಸಮುದ್ರ ತೀರದಲ್ಲಿ ವಾಯು ವಿಹಾರ ಮಾಡಿ ಬೀಚ್‌ನಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ತ್ಯಾಜ್ಯವನ್ನು ಪ್ಲಾಗಿಂಗ್ ಮಾದರಿಯಲ್ಲಿ ಕೈಗೊಂಡು ಸ್ವಚ್ಛ ಭಾರತ ಮತ್ತು ಫಿಟೆ°ಸ್ ಸಂದೇಶವನ್ನು ಸಾರಿದರು. ಹಾಗೇ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಅತೀ ಹೆಚ್ಚು ವೈರಲ್ ಕೂಡ ಆಗಿತ್ತು. -ಕಾರ್ತಿಕ್ ಚಿತ್ರಾಪುರ