ಕಠ್ಮಂಡು: ನೇಪಾಳದ ಪೋಖರಾ ವಿಮಾನ ನಿಲ್ದಾಣದಲ್ಲಿ 68 ಪ್ರಯಾಣಿಕರಿದ್ದ ವಿಮಾನ ಪತನವಾಗಿರುವ ಘಟನೆ ರವಿವಾರ (ಜ.15 ರಂದು) ವರದಿಯಾಗಿದೆ.
ಹಳೆ ವಿಮಾನ ನಿಲ್ದಾಣ ಮತ್ತು ಪೋಖರಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇಯಲ್ಲಿ ಯೇಟಿ ಏರ್ ಲೆನ್ಸ್ ವಿಮಾನ ಅಪಘಾತವಾಗಿ ಹೊತ್ತು ಉರಿದಿದೆ. ವಿಮಾನದಲ್ಲಿ ಒಟ್ಟು 68 ಪ್ರಯಾಣಿಕರೊಂದಿಗೆ ನಾಲ್ವರು ಸಿಬ್ಬಂದಿ ಇದ್ದರು ಎಂದು ಯೇಟಿ ಏರ್‌ಲೈನ್ಸ್ ವಕ್ತಾರ ಸುದರ್ಶನ್ ಬರ್ತೌಲಾ ಹೇಳಿದ್ದಾರೆ ಎಂದು ಕಠ್ಮಂಡು ಪೋಸ್ಟ್ ವರದಿ ಮಾಡಿದೆ.
ವಿಮಾನ ಕಠ್ಮಂಡುವಿನಿಂದ ಪೋಖರಾ ತೆರಳುತ್ತಿತ್ತ ಈ ವೇಳೆ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ.
ಸದ್ಯಕ್ಕೆ ಸಾವು – ನೋವಿನ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ. ಪ್ರಯಾಣಿಕರ ರಕ್ಷಣಾ ಕಾರ್ಯಚರಣೆ ಮುಂದುವರೆದಿದೆ. ಪೋಖರಾ ವಿಮಾನ ನಿಲ್ದಾಣದಲ್ಲಿ ಎಲ್ಲಾ ವಿಮಾನ ಸಂಚಾರವನ್ನು ಬಂದ್ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
Related Articles