Advertisement
ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ಹೊತ್ತಿನಲ್ಲಿ ಬೋಯಿಂಗ್ 777-300ಇಆರ್ ವಿಮಾನ ಆಗಸದಲ್ಲಿ ತೀವ್ರ ಪ್ರಕ್ಷುಬ್ಧತೆಗೆ ಸಿಲುಕಿತು. ಬಳಿಕ ಬ್ಯಾಂಕಾಕ್‌ನ ಸುವರ್ಣಭೂಮಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು. ಯಾನದ ವೇಳೆಯೇ ವಿಮಾ ನವು ಏಕಾ ಏಕಿ ಓಲಾ ಡಿದ ಕಾರಣ ಪ್ರಯಾಣಿಕರೊಬ್ಬ ರು ಮೃತಪಟ್ಟಿದ್ದು, ಹಲವು ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದಾರೆ. ಅವರೆಲ್ಲರನ್ನು ಬ್ಯಾಂಕಾಕ್‌ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಏರ್‌ಲೈನ್ಸ್ ತಿಳಿಸಿದೆ. ವಿಮಾನದಲ್ಲಿ 211 ಪ್ರಯಾಣಿಕರು, 18 ಸಿಬಂದಿ ಇದ್ದರು.
Related Articles
Advertisement
ಅಪರಾಹ್ನ 3:45ಕ್ಕೆ ವಿಮಾನ ಬ್ಯಾಂಕಾಕ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿತು. ವಿಮಾನದಲ್ಲಿದ್ದ ಬಹುತೇಕ ಪ್ರಯಾಣಿಕರ ತಲೆಗೆ ಗಂಭೀರ ಗಾಯವಾಗಿದೆ. 30 ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಾಗಿಸಿದ್ದು, ಉಳಿದ ಪ್ರಯಾಣಿಕರು ಹಾಗೂ ಸಿಬಂದಿಗೆ ವಿಮಾನ ನಿಲ್ದಾಣದಲ್ಲಿ ಚಿಕಿತ್ಸೆ ನೀಡಲಾಗಿದೆ. ಘಟನೆಯಿಂದ 73 ವರ್ಷದ ಬ್ರಿಟಿಷ್ ಪ್ರಜೆ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ ಎಂದು ಬ್ಯಾಂಕಾಕ್‌ನ ಸುವರ್ಣಭೂಮಿ ವಿಮಾನ ನಿಲ್ದಾಣದ ಜನರಲ್ ಮ್ಯಾನೇಜರ್ ಕಿತ್ತಿಪೊಂಗ್ ಕಿತ್ತಿಕಚೊರ್ನ್ ತಿಳಿಸಿದ್ದಾರೆ. ಘಟನೆ ಕುರಿತು ಸಿಂಗಾಪುರ್ ಏರ್‌ಲೈನ್ಸ್ ಸಂಸ್ಥೆ ಹಾಗೂ ಸಿಂಗಾಪುರ ಸರಕಾರ ವಿಷಾದ ವ್ಯಕ್ತಪಡಿಸಿದೆ ಹಾಗೂ ಪರಿಹಾರ ಕಾರ್ಯಕ್ಕೆ ಮುಂದಾಗಿದೆ.
ಸೀಟ್‌ಬೆಲ್ಟ್ ಧರಿಸಿರಲಿಲ್ಲ
ವಿಮಾನ ಒಮ್ಮೆಲೆ ಅಲುಗಾಡತೊಡಗಿತು. ನಾನು ಕಿರುಚಾಡಿದೆ. ಕೂಡಲೇ ವಿಮಾನ ಕೆಳಗೆ ಹೋಯಿತು. ಪ್ರಯಾಣಿಕರಲ್ಲಿ ಬಹುತೇಕರು ಸೀಟ್‌ಬೆಲ್ಟ್ ಧರಿಸಿರಲಿಲ್ಲ. ಹಾಗಾಗಿ ಎಲ್ಲರೂ ವಿಮಾನದ ಒಳಛಾವಣಿಗೆ ಅಪ್ಪಳಿಸಿದರು. ಶೌಚಾಲಯದಲ್ಲಿದ್ದ ಪ್ರಯಾಣಿಕರಿಗೆ ಹೆಚ್ಚಿನ ಗಾಯವಾಗಿದೆ. ವಿಮಾನ ಲ್ಯಾಂಡ್ ಆದ ಅನಂತರ 90 ನಿಮಿಷದಲ್ಲಿ ಎಲ್ಲರನ್ನು ಸುರಕ್ಷಿತವಾಗಿ ಹೊರತರಲಾಯಿತು ಎಂದು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 28 ವರ್ಷದ ಜಫ್ರಾನ್ ಅಜ್ಮಿರ್ ತಿಳಿಸಿದ್ದಾರೆ.
ವಿಮಾನದಲ್ಲಿ ನಿಂತಿದ್ದ ಪ್ರಯಾಣಿಕ:ನಿಲ್ದಾಣಕ್ಕೆ ವಾಪಸಾದ ಫ್ಲೈಟ್!
ಮುಂಬಯಿ: ಮಹಾರಾಷ್ಟ್ರದ ಮುಂಬಯಿಯಿಂದ ವಾರಾಣಸಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬರು ನಿಂತು ಪ್ರಯಾಣಿಸಲು ಮುಂದಾಗಿದ್ದರು. ಹಾರಾಟ ಪ್ರಾರಂಭವಾದ ಬಳಿಕ ವಿಮಾನದ ಸಿಬಂದಿ ಇದನ್ನು ಗಮನಿಸಿದ್ದು, ವಿಮಾನ ಮತ್ತೆ ಮುಂಬಯಿ ನಿಲ್ದಾಣಕ್ಕೆ ಹಿಂದಿರುಗಿದ ಘಟನೆ ಮಂಗಳವಾರ ನಡೆದಿದೆ. ಸಾಮಾನ್ಯವಾಗಿ ವಿಮಾನ ಕಡೆ ಘಳಿಗೆಯಲ್ಲಿ ಖಾಲಿ ಹೋಗದಂತೆ ತಡೆಯಲು ಸೀಟುಗಳನ್ನು ಭರ್ತಿ ಮಾಡಲು ಹೆಚ್ಚುವರಿ ಪ್ರಯಾಣಿಕರಿಗೆ ಟಿಕೆಟ್ ನೀಡಲಾಗಿರುತ್ತದೆ. ಮಂಗಳವಾರ ಇಂಡಿಗೋದ 6ಇ 6543 ವಿಮಾನದಲ್ಲಿ ಈಗಾಗಲೇ ಸೀಟ್ ಬುಕ್ ಮಾಡಿದ್ದ ವ್ಯಕ್ತಿಯ ಜಾಗಕ್ಕೇ ಮತ್ತೂಬ್ಬ ಹೆಚ್ಚುವರಿ ಪ್ರಯಾಣಿಕನಿಗೂ ಟಿಕೆಟ್ ನೀಡಲಾಗಿತ್ತು. ಸಿಬಂದಿ ಸರಿಯಾಗಿ ಪರಿಶೀಲಿಸದೆ ಹೆಚ್ಚುವರಿ ಪ್ರಯಾಣಿಕನೂ ವಿಮಾನ ಏರಿದ್ದರು. ಸೀಟು ಭರ್ತಿಯಾಗಿದ್ದ ಕಾರಣ ಆತ ನಿಂತೇ ಇದ್ದರು. ವಿಮಾನ ಹಾರಾಟ ಆರಂಭಿಸಿದ ಬಳಿಕ ಸಿಬಂದಿ ಇದನ್ನು ಗಮನಿಸಿದ ಹಿನ್ನೆಲೆಯಲ್ಲಿ ವಿಮಾನ ಮತ್ತೆ ನಿಲ್ದಾಣಕ್ಕೆ ಹಿಂದಿರುಗಿದೆ.