Advertisement

ವಿಮಾನ ಪತನ, ಪೈಲೆಟ್ ಸೇರಿದಂತೆ 9 ಜನರ ದುರ್ಮರಣ

09:53 AM Dec 02, 2019 | Mithun PG |

ವಾಷಿಂಗ್ಟನ್ ಡಿಸಿ: ವಿಮಾನ ಪತನವಾಗಿ ಎರಡು ಮಕ್ಕಳು ಸೇರಿದಂತೆ ಒಂಬತ್ತು ಜನರು  ಮೃತಪಟ್ಟ ಘಟನೆ ಅಮೇರಿಕಾದ ಸೌತ್ ಡಕೋಟಾದಲ್ಲಿ ನಡೆದಿದೆ.

Advertisement

ಪಿಲಾಟಸ್ ಪಿಸಿ-12  ವಿಮಾನ ಟೇಕಾಫ್ ಆದ ಕೆಲ ಸಮಯದಲ್ಲೇ ಪತನವಾಗಿದೆ. ವರದಿಯ ಪ್ರಕಾರ ಶನಿವಾರ ಮಧ್ಯಾಹ್ನ 12:30 ಸಮಯದಲ್ಲಿ ಅಪಘಾತವಾಗಿದೆ. ಈ ವಿಮಾನವು ಚೆಂಬರ್ಲೇನ್ ನಿಂದ ಸಿಯೋಕ್ಸ್ ಫಾಲ್ಸ್ ನ ಪಶ್ಚಿಮಕ್ಕೆ ಹೊರಟಿತ್ತು.

ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿವೆ. ವಿಮಾನದಲ್ಲಿ 12 ಜನರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next