ಹೊಸದಿಲ್ಲಿ: ಕೋವಿಡ್ 19 ಸೋಂಕಿಗೆ ಲಸಿಕೆ ಸಿದ್ಧವಾದರೂ ದೇಶದ ಎಲ್ಲ ಜನರಿಗೆ ತಲುಪುವಲ್ಲಿ ಸ್ವಲ್ಪ ತಡವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮಾಹಿತಿ ನೀಡಿದ್ದಾರೆ.
2021ರ ಜುಲೈ ವೇಳೆಗೆ ಲಸಿಕೆಯನ್ನು ದೇಶದ 20ರಿಂದ 25 ಕೋಟಿ ಮಂದಿಗೆ ನೀಡುವ ಅಂದಾಜಿದೆ ಎಂದವರು ಹೇಳಿದ್ದಾರೆ.
ಜನವರಿಯಿಂದ ಲಸಿಕೆ ನೀಡಲು ಆರಂಭಿಸಿದರೂ ಅದು 20-25 ಕೋಟಿ ಜನರನ್ನು ತಲುಪಲು 7 ತಿಂಗಳು ಸಮಯ ಹಿಡಿಯಲಿದೆ.
ಮೊದಲು ಯಾರಿಗೆ ಲಸಿಕೆ ನೀಡಬೇಕು ಎಂಬ ಶಿಫಾರಸನ್ನು ಅಕ್ಟೋಬರ್ ಅಂತ್ಯದ ವೇಳೆಗೆ ಉನ್ನತ ಮಟ್ಟದ ತಜ್ಞರ ತಂಡ ಸರಕಾರದ ಮುಂದೆ ಮಂಡಿಸಲಿದೆ ಎಂದಿದ್ದಾರೆ.
ವಾರಿಯಯರ್ಸ್ ಗೆ ಆದ್ಯತೆ?
ಲಸಿಕೆ ನೀಡಿಕೆಯಲ್ಲಿ ಕೋವಿಡ್ 19 ವಿರುದ್ಧ ಮುಂಚೂಣಿಯಲ್ಲಿ ಹೋರಾಡುತ್ತಿರುವ ವೈದ್ಯರು, ದಾದಿಯರು ಮತ್ತಿತರರಿಗೆ ಸರಕಾರ ಮೊದಲ ಆದ್ಯತೆ ನೀಡುವ ಸಾಧ್ಯತೆ ಇದೆ.