ನಿಮ್ಮ ಮಕ್ಕಳ ಫೋಟೋಗಳೊಂದಿಗೆ ಪ್ರತಿಭಟನೆಗೆ ಬನ್ನಿ’ ಎಂದು ರೈತರಿಗೆ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಕರೆ ನೀಡಿ
ದ್ದಾರೆ.
Advertisement
ಸರಕಾರ ನಮ್ಮ ಬೇಡಿಕೆ ಆಲಿಸಲೇಬೇಕು. ಇಲ್ಲದಿದ್ದರೆ ಮುಂದಿನ ಹಂತವಾಗಿ ನಾವೆಲ್ಲರೂ ಸೇನೆಯಲ್ಲಿರುವ ನಮ್ಮ ಮಕ್ಕಳ ಫೋಟೋಗಳೊಂದಿಗೆ ಬಂದುಪ್ರತಿಭಟಿಸುತ್ತೇವೆ. ನಮ್ಮ(ರೈತ ರ) ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಯಲ್ಲಿದ್ದಾರೆ. ಕಾನೂನು ನೋಟಿಸ್ ಜಾರಿ ಮಾಡುವ ಮೂಲಕ ರೈತರ ಧ್ವನಿ ಹತ್ತಿಕ್ಕಬಹುದು ಎಂದು ಸರಕಾರ ಯೋಚಿಸುವುದು ಬೇಡ ಎಂದೂ ಟಿಕಾಯತ್ ಹೇಳಿದ್ದಾರೆ.
ಮೊಳೆ ನೆಟ್ಟ ಬೆನ್ನಲ್ಲೇ ಆ ಪ್ರದೇಶದಲ್ಲಿ ರೈತರು ಗುಲಾಬಿ ಹೂವು, ಚೆಂಡು ಹೂವು, ಕಬ್ಬು, ಆಲೂಗಡ್ಡೆ ಸೇರಿದಂತೆ ವಿವಿಧ ಸಸಿಗಳನ್ನು ನೆಟ್ಟಿದ್ದಾರೆ. ಘಾಜಿಪುರದ ನರ್ಸರಿ ಗಳಿಂದ ಈ ಸಸಿಗಳನ್ನು ತಂದು ನೆಡಲಾಗಿದೆ. ಸರಕಾರ ನಮ್ಮ ವಿರುದ್ಧ ದ್ವೇಷ ಕಾರಿದರೂ, ನಾವು ಪ್ರೀತಿಯನ್ನೇ ಹಬ್ಬುತ್ತೇವೆ ಎಂದು ರೈತರು ತಿಳಿಸಿದ್ದಾರೆ. ಟಿಕ್ರಿ ಗಡಿಯಲ್ಲಿ ರೈತ ಆತ್ಮಹತ್ಯೆ: ದಿಲ್ಲಿಯ ಟಿಕ್ರಿ ಗಡಿಯಲ್ಲಿ ಪ್ರತಿಭಟನಕಾರ ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹರಿಯಾಣದ ಜಿಂದ್ ನವರಾದ
ಕರಂವೀರ್ ಸಿಂಗ್ ( 52) ಆತ್ಮಹತ್ಯೆ ಪತ್ರ ಬರೆದಿಟ್ಟು, ಗಡಿಯಿಂದ 2 ಕಿ.ಮೀ. ದೂರದ ಮರವೊಂದರಲ್ಲಿ ನೇಣಿಗೆ ಶರಣಾಗಿದ್ದಾರೆ.
Related Articles
Advertisement
ಭಾರತದ ಅಧಿಕಾರಿಗಳಿಗೆ ಕೆನಡಾ ಭದ್ರತೆ ಜ.26ರಂದು ಕೆನಡಾದಲ್ಲಿ ಪ್ರಧಾನಿ ಮೋದಿ ಹಾಗೂ ಅಲ್ಲಿ ರುವ ರಾಯಭಾರ ಕಚೇರಿಗಳ ಅಧಿಕಾರಿಗಳಿಗೆ ಖಲಿ ಸ್ಥಾನ ಪರ ಗುಂಪೊಂದು ಜೀವ ಬೆದರಿಕೆ ಒಡ್ಡಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರಾಡ್ನೂ ಎಚ್ಚೆತ್ತಿದ್ದಾರೆ. ಒಟ್ಟಾವಾ ಮತ್ತು ವ್ಯಾಂಕೋವರ್ ನಲ್ಲಿರುವ ಭಾರತದ ಉನ್ನದ ರಾಜ ತಾಂತ್ರಿಕ ಅಧಿಕಾರಿಗಳಿಗೆ ಭದ್ರತೆ ಒದಗಿಸುವಂತೆ ಸೂಚಿಸಿದ್ದಾರೆ.