Advertisement

ಬನ್ನಿ, ಸಂಘಟಿತರಾಗಿ ಮಳೆ ನೀರು ಸಂಗ್ರಹಿಸೋಣ

12:25 PM Mar 01, 2021 | Team Udayavani |

ವಿಜಯಪುರ: ದೇಶದ ವಿವಿಧ ಪ್ರದೇಶಗಳ ಬರ ಪರಿಸ್ಥಿತಿಯಿಂದಾಗಿ ಕೋಟ್ಯಂತರ ಜನ ಮತ್ತು ಜಾನುವಾರುಗಳು ತೊಂದರೆ ಅನುಭವಿಸುವಂತಾಗಿದೆ ಎಂದು ಪ್ರಗತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್‌.ಎಸ್‌.ಪ್ರದೀಪ್‌ ತಿಳಿಸಿದರು.

Advertisement

ಪಟ್ಟಣದ ಪ್ರಗತಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಭಾರತ ಸರ್ಕಾರದ ಯುವಜನ ಸೇವೆ ಮತ್ತು ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಬೆಂ. ಗ್ರಾ. ಜಿಲ್ಲೆ, ಸ್ಪಂದನಾ ಯುವಜನ ಸೇವಾ ಸಂಘ ವಿಜಯಪುರ ಆಶ್ರಯದಲ್ಲಿ ಮಳೆ ನೀರು ಬೀಳುವ ಸ್ಥಳದಲ್ಲೇ ಸಂಗ್ರಹಿಸಿರಿ ಎಂಬ ವಿನೂತನ ಕಾರ್ಯಕ್ರಮ ಭಿತ್ತಿಪತ್ರ ಹಾಗೂ ಕಾರ್ಯಕ್ರಮದ ರೂಪುರೇಷೆ ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ನೂರು ವರ್ಷಗಳಲ್ಲಿ ಸಹಸ್ರ-ಸಹಸ್ರ ಸಂಖ್ಯೆಯಲ್ಲಿ ಬಾವಿಗಳು, ಕೆರೆಗಳು, ಸರೋವರಗಳುಮತ್ತು ನದಿಗಳು ಬತ್ತಿಹೋಗಿವೆ. ಇದೇ ಪರಿಸ್ಥಿತಿ ಮುಂದುವರಿದರೆ ಬರುವ ದಿನಗಳು ನೀರಿಗಾಗಿ ಹಾಹಾಕಾರ ಶುರುವಾಗಲಿದೆ ಎಂದರು.

ಅಭಿಯಾನ: ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ಜನಶಕ್ತಿ ಸಚಿವಾಲಯದ ಸಂಯುಕ್ತಾಶ್ರಯದಲ್ಲಿ ಜಲಶಕ್ತಿ ಮಿಷನ್‌-ಯುವಜನ ಸೇವೆ ಮತ್ತು ಕ್ರೀಡಾ ಸಚಿವಾಲಯದ ಸಹಕಾರದಲ್ಲಿ ದೇಶದ 623 ಜಿಲ್ಲೆಗಳಲ್ಲಿ ನೆಹರು ಯುವ ಕೇಂದ್ರಗಳೊಂದಿಗೆ ಕ್ಯಾಚ್‌ ದಿ ರೈನ್‌ ಅಭಿಯಾನ ಕುರಿತಾದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕ ಡಾ.ವಿ.ಪ್ರಶಾಂತ ಮಾತನಾಡಿ, ಈ ಅಭಿಯಾನದಲ್ಲಿ ಮಳೆ ನೀರು ಸಂಗ್ರಹಿಸಲು ತಡೆಗೋಡೆಗಳು ಹಾಗೂ ಇಂಗುಗುಂಡಿಗಳನ್ನುನಿರ್ಮಿಸುವುದು, ಕೆರೆ-ಕಟ್ಟೆಗಳ ಒತ್ತುವರಿಯನ್ನು ತೆರವು ಗೊಳಿಸುವುದರ ಮೂಲಕ ನೀರು ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸುವುದು ಇತ್ಯಾದಿ ಕಾರ್ಯಚಟುವಟಿಕೆಗಳ ಮೂಲಕ ಅಂತರ್ಜಲ ಪುನರುಜ್ಜೀವನಗೊಳಿಸುವ ಕಾರ್ಯಕ್ರಮಕ್ಕೆ ಪೂರಕವಾಗಿ ಈ ಚಟುವಟಿಕೆ ನಡೆಸಲಾಗುತ್ತದೆ ಎಂದು ತಿಳಿಸಿದರು.

Advertisement

ಯುವ ಮುಖಂಡ ಅಭಿ ವೈ.ಎಸ್‌. ಮಾತನಾಡಿ, ಈಗಾಗಲೇ ಜಿಲ್ಲೆಯ ಎಲ್ಲಾ ತಾಲೂಕಿನ ವಿವಿಧ ಸ್ಥಳಗಳಲ್ಲಿ ಬೀದಿನಾಟಕಗಳ ಮೂಲಕ, ಶಾಲಾ-  ಕಾಲೇಜುಗಳಲ್ಲಿ ಪ್ರಬಂಧ, ಚಿತ್ರಕಲೆ, ಭಾಷಣಸ್ಪರ್ಧೆ, ಹರಿವು ಜಾಗೃತಿ ಉಪನ್ಯಾಸ ಕಾರ್ಯಕ್ರಮಗಳ ಮೂಲಕ ಹಾಗೂ ವಿವಿಧ ಸ್ಥಳಗಳಲ್ಲಿ ಗೋಡೆ ಬರಹ ಮತ್ತು ಕರಪತ್ರಗಳನ್ನು ವಿತರಿಸಿ ಪ್ರಚಾರಆಂದೋಲನ ಆರಂಭವಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯ ನಾಲ್ಕು ತಾಲೂಕಿನ ವಿವಿಧ ಯುವಕ ಸಂಘ, ಯುವತಿ ಮಂಡಳಿಗಳ ಪದಾಧಿಕಾರಿಗಳು ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಮತ್ತುಕಾರ್ಯದರ್ಶಿ, ವಿವಿಧ ಶಾಲಾ ಕಾಲೇಜಿನ ಮುಖ್ಯಶಿಕ್ಷಕರು, ಉಪನ್ಯಾಸಕ ವರ್ಗದವರಾದ ಭಾಸ್ಕರ,ಎ.ಸಿಸಿಲಿಯಾ ಮೇರಿ, ರಶ್ಮಿ, ಬಿ.ವೆಂಕಟೇಶ್‌,ರವೀಂದ್ರ, ಮನೋಹರ್‌, ಭರತ್‌, ಶ್ರೀಧರ್‌, ನರಸಮ್ಮ, ಹರ್ಷಿತಾ, ಅಭಿ ವೈ.ಎಸ್‌, ಹರ್ಷಿತ್‌ ಪಟೇಲ್, ಧನುಷ್‌ ಹಾಗೂ ಮಹೇಂದ್ರ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next