Advertisement

ಕಲಾಕ್ಷೇತ್ರದ ದುರಸ್ತಿಗೆ ಕ್ರಿಯಾಯೋಜನೆ

09:26 PM Jun 22, 2019 | Team Udayavani |

ಹಾಸನ: ದುಸ್ಥಿತಿಯಲ್ಲಿರುವ ನಗರದ ಹಾಸನಾಂಬ ಕಲಾಕ್ಷೇತ್ರದ ದುರಸ್ತಿಗೆ 4.5 ಕೋಟಿ ರೂ. ಕ್ರಿಯಾ ಯೋಜನೆ ಸಿದ್ಧಪಡಿಸಿ ಅನುದಾನ ಬಿಡುಗಡೆಗೆ ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶನಾಲಯಕ್ಕೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂಪಾಷಾ ಹೇಳಿದರು.

Advertisement

ಜಿಲ್ಲಾ ವಕೀಲರ ಸಂಘವು ಹಮ್ಮಿಕೊಂಡಿದ್ದ ಆಡಳಿತ ಸುಧಾರಣೆ ಕುರಿತು ಸಂವಾದ ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಶೇಖರ್‌ ಅವರ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯವರು, ಕಲಾಕ್ಷೇತ್ರದ ದುರಸ್ತಿಗೆ ಅನುದಾನ ಮಂಜೂರಾತಿಗೆ ಸಂಬಂಧಪಟ್ಟ ಅಧಿಕಾರಿಯವರನ್ನು ಸಂಪರ್ಕಿಸಿ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ನ್ಯಾಯಾಂಗ ಇಲಾಖೆಗೆ ಸಹಕಾರ: ಜಿಲ್ಲಾಡಳಿತವು ನ್ಯಾಯಾಂಗ ಇಲಾಖೆಗೆ ಎಲ್ಲಾ ರೀತಿಯ ಸಹಕಾರ ನೀಡಲಿದೆ. ಆಡಳಿತ ವ್ಯವಸ್ಥೆ ಸುಧಾರಣೆ ಗೆ ಹಲವು ರಚನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪೌತಿಖಾತೆ ಆಂದೋಲನದ ಮೂಲಕ ಸಾವಿರ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಮುಂದೆಯೂ ಎಲ್ಲ ತಾಲೂಕು ಹೋಬಳಿಗಳಲ್ಲಿ ಪೌತಿ ಖಾತೆ ಆಂದೋಲನ, ಜನ ಸಂಪರ್ಕ ಸಭೆಗಳನ್ನು ನಡೆಸಲಾಗುವುದು ಜಿಲ್ಲಾಧಿಕಾರಿಯವರು ತಿಳಿಸಿದರು.

ಗ್ರಾಮ ವಾಸ್ತವ್ಯಕ್ಕೆ ಮೆಚ್ಚುಗೆ: ವಕೀಲರ ಸಂಘದ ಅಧ್ಯಕ್ಷ ಶೇಖರ್‌ ಹಾಗೂ ಪದಾಧಿಕಾರಿಗಳು ಜಿಲ್ಲಾಧಿಕಾರಿ ಜೆ.ಸಿ.ಪುರದಲ್ಲಿ ಮಾಡಿದ ಗ್ರಾಮ ವಾಸ್ತವ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇಂತಹ ಕ್ರಮಗಳಿಂದ ಗ್ರಾಮೀಣ ಜನರ ಹಲವು ಸಂಕಷ್ಟ ಗಳು ಸುಲಭವಾಗಿ ಬಗೆಹರಿಯಲಿದ್ದು ಜಿಲ್ಲಾಡಳಿತದ ಕ್ರಮ ಅಭಿನಂದನಾರ್ಹ ಎಂದರು.

ಪ್ರಕರಣ ಶೀಘ್ರ ಇತ್ಯರ್ಥಗೊಳಿಸಿ: ತಹಶಿಲ್ದಾರರ ಕಚೇರಿ ನ್ಯಾಯಾಲಯಗಳಲ್ಲಿ ವಕೀಲರನ್ನು ಹಾಗೂ ವ್ಯಾಜ್ಯ ಹೂಡಿದವರನ್ನು ಹೆಚ್ಚು ಅಲೆಸದೇ ಬೇಗ ವಿಚಾರಣೆ ಮುಗಿಸಿಕೊಡಬೇಕು ಎಂದು ಮನವಿ ಮಾಡಿದರು. ಹಾಸನ ನಗರದ ಸಂಚಾರಿ ವ್ಯವಸ್ಥೆ ಸುಧಾರಣೆ ಆಗಬೇಕು ಎಂದರು.
ಚೆಕ್‌ ಬೌನ್ಸ್‌ ಪ್ರಕರಣಗಳಲ್ಲಿ ಪೊಲೀಸ್‌ ಇಲಾಖೆಯಲ್ಲಿ ಸಕಾಲದಲ್ಲಿ ದೂರು ದಾಖಲಿಸಿ ಸೂಕ್ತ ವರದಿಯನ್ನು ಆದಷ್ಟು ಬೇಗ ನ್ಯಾಯಾಲಯಕ್ಕೆ ಸಲ್ಲಿಸಿ ಬೇಕು ಎಂದು ಮನವಿ ಮಾಡಿದರು.

Advertisement

ವಕೀಲರ ಸಹಕಾರ ಅಗತ್ಯ: ಜಿಲ್ಲೆಯಲ್ಲಿ ಕಾನೂನು ಜಾಗೃತಿಗೆ ವಕೀಲರ ಸಂಘದ ಸಹಕಾರವೂ ಮುಖ್ಯ ಎಂದು ಅವರು ಹೇಳಿದರು. ಎಲ್ಲಾ ನಗರ ಸ್ಥಳೀಯ ಸಂಸ್ಥೆ ಗಳ ವ್ಯಾಪ್ತಿಯಲ್ಲಿ ಸಂಚಾರಿ ವ್ಯವಸ್ಥೆ ಸುಧಾರಣೆ ಗೆ ಈಗಾಗಲೆ ಗಮನ ಹರಿಸಲಾಗಿದೆ. ಸೂಚನಾ ಫ‌ಲಕಗಳ ಅಳವಡಿಕೆ, ಹೈ ಮಾಸ್ಟ್‌ ದೀಪ , ಕ್ಯಾಟ್‌ ಐ, ರಿಫ್ಲೆಕ್ಟರ್‌ಗಳ ಅಳವಡಿಕೆಗೆ ಅಗತ್ಯ ಅನುದಾನವನ್ನು ಒದಗಿಸಲಾಗಿದೆ ಎಂದು ವಿವರಿಸಿದರು.

ಪೊಲೀಸ್‌ ಇಲಾಖೆ ಸ್ಪಂದನೆ: ಜಿಲ್ಲಾ ಪೋಲಿಸ್‌ ವರಿಷ್ಠಾಧಿಕಾರಿ ಪ್ರಕಾಶ್‌ಗೌಡ ಮಾತನಾಡಿ, ನಗರದ ಸಂಚಾರಿ ವ್ಯವಸ್ಥೆ , ಕಾನೂನು ಸುವ್ಯವಸ್ಥೆ ಸುಧಾರಣೆಗೆ ಹಲವು ಕ್ರಮಗಳನ್ನು ಕೈಗೊಂಡಿದ್ದು, ಪೊಲೀಸ್‌ ಇಲಾಖೆಯಲ್ಲಿ ವಕೀಲರಿಗೆ ಪೂರಕ ಸ್ಪಂದನೆ ಸಿಗಲಿದೆ. ಚೆಕ್‌ ಬೌನ್ಸ್‌ ಪ್ರಕರಣಗಳಲ್ಲಿ ಆದಷ್ಟು ಬೇಗ ನಿಯಮಾನುಸಾರವಾಗಿ ಪ್ರಕರಣ ದಾಖಲಿಸಲು ಎಲ್ಲಾ ಪೊಲೀಸ್‌ ಠಾಣೆಗಳಿಗೆ ನಿರ್ದೇಶನ ನೀಡಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next