Advertisement

ತಾಲೂಕು ಆಸ್ಪತ್ರೆ ಅಭಿವೃದ್ಧಿಗೆ ನೀಲ ನಕಾಶೆ ಸಿದ್ಧ’

01:36 PM Oct 25, 2020 | Suhan S |

ಪುತ್ತೂರು, ಅ. 24: ಪುತ್ತೂರು ಉಪವಿಭಾಗಕ್ಕೆ ಸೇರಿರುವ ಎಲ್ಲ ತಾಲೂಕಿನ ಜನರಿಗೆ ಅಗತ್ಯ ಸೌಲಭ್ಯ ದೊರೆಕಿಸುವ ನಿಟ್ಟಿನಲ್ಲಿ ಪುತ್ತೂರು ತಾಲೂಕು ಆಸ್ಪತ್ರೆಯನ್ನು ಆಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಲು ನೀಲ ನಕಾಶೆ ಸಿದ್ಧಪಡಿಸಲಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

Advertisement

ಪುತ್ತೂರು ಸರಕಾರಿ ಆಸ್ಪತ್ರೆಯ ಆವರಣದಲ್ಲಿ ರೋಟರಿ ಕ್ಲಬ್‌ ಪುತ್ತೂರು, ರೋಟರಿ ಕ್ಲಬ್‌ ಪುತ್ತೂರು ಪೂರ್ವ, ಪುತ್ತೂರು ಸಿಟಿ, ಪುತ್ತೂರು ಸೆಂಟ್ರಲ್‌, ಪುತ್ತೂರು ಸ್ವರ್ಣ, ಪುತ್ತೂರು ಯುವ, ಪುತ್ತೂರು ಎಲೈಟ್‌ ಹಾಗೂ ಇನ್ನರ್‌ವ್ಹೀಲ್‌ ಕ್ಲಬ್‌ಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಪೋಲಿಯೋ ದಿನಾಚರಣೆ ಹಾಗೂ ಸರಕಾರಿ ಆಸ್ಪತ್ರೆಗೆ ವಿವಿಧ ಕೊಡುಗೆ ವಿತರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಸರಕಾರಿ ಆಸ್ಪತ್ರೆಯಲ್ಲಿ ಈಗಾಗಲೇ ಶೇ. 80ರಷ್ಟು ವೈದ್ಯರ ಹುದ್ದೆ ಭರ್ತಿಯಾಗಿದೆ. ವೆಂಟಿಲೇಟರ್‌, ಆಕ್ಸಿಜನ್‌ ಬೆಡ್‌ಗಳನ್ನು ಒದಗಿಸಲಾಗಿದೆ. 50 ಮಂದಿಗೆ ಡಯಾಲಿಸಿಸ್‌ ಕೇಂದ್ರ ಸಹಕಾರಿ ಆಗಿದ್ದು, ಇನ್ನೂ 18 ಮಂದಿಗೆ ಬೇಡಿಕೆಗಳಿದ್ದು ಮುಂದಿನ ದಿನಗಳಲ್ಲಿ ಶೇ. 100ರಷ್ಟು ಡಯಾಲಿಸಿಸ್‌ ಸೌಲಭ್ಯ ಒದಗಿಸಲು ಬದ್ಧರಾಗಿದ್ದೇವೆ. ಮೆಡಿಕಲ್‌ ಫಾರ್ಮುಸಿ, ಸಿಬಂದಿ ಕೊರತೆಯನ್ನು ನೀಗಿಸಿ ಸುಸಜ್ಜಿತ ಆಸ್ಪತ್ರೆಯನ್ನಾಗಿ ರೂಪಿಸಲಾಗುವುದು ಎಂದು ಹೇಳಿದರು. ಸಿಟಿ ಆಸ್ಪತ್ರೆಯ ಡಾ| ಭಾಸ್ಕರ್‌ ರಾವ್‌ ಮಾತನಾಡಿ, ವಿಶ್ವದಲ್ಲಿ ಪೋಲಿಯೋ ಶೇ. 99.9ರಷ್ಟು ನಿಯಂತ್ರಣಗೊಂಡಿದೆ. 2020ರಲ್ಲಿ ವಿಶ್ವದಲ್ಲಿ 117 ಪ್ರಕರಣಗಳು ಪತ್ತೆಯಾಗಿದೆ. ಈಗ ಎರಡು ರಾಷ್ಟ್ರದಲ್ಲಿ ಮಾತ್ರ ಸ್ಥಳೀಯ ಕೆಲವು ಪ್ರಕರಣಗಳು ಕಂಡುಬರುತ್ತಿದೆ. ವಿಶ್ವದಲ್ಲಿ ಪೋಲಿಯೋ ನಿಯಂತ್ರಣಕ್ಕೆ ರೋಟರಿ ಕ್ಲಬ್‌ ಪ್ರಯತ್ನಿಸುತ್ತಿದ್ದು ವಾರ್ಷಿಕ 50 ಮಿಲಿಯನ್‌ ಯು.ಎಸ್‌ ಡಾಲರ್‌ ಬಂಡವಾಳ ಹೂಡುತ್ತಿದೆ ಎಂದರು.

ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ಆಶಾ ಪುತ್ತೂರಾಯ ಮಾತನಾಡಿ, ಆಸ್ಪತ್ರೆಯ ಆವಶ್ಯಕತೆ ಹಾಗೂ ಮೂಲ ಸೌಕರ್ಯಗಳ ಕೊರತೆ ಬಗ್ಗೆ ರೋಟರಿ ಸಂಸ್ಥೆಯ ಗಮನಕ್ಕೆ ತಂದಾಗ ಅವರು ಅನೇಕ ಸವಲತ್ತು ಒದಗಿಸಿದ್ದಾರೆ ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ|ಅಶೋಕ್‌ ಕುಮಾರ್‌ ರೈ, ರೋಟರಿ ಕ್ಲಬ್‌ ಸಹಾಯಕ ಗವರ್ನರ್‌ಗಳಾದ ಸಚ್ಚಿದಾನಂದ ಹಾಗೂ ರತ್ನಾಕರ ರೈ ಕೆದಂಬಾಡಿ, ರೋಟರಿ ಕ್ಲಬ್‌ ಪುತ್ತೂರು ಪೂರ್ವದ ಅಶ್ವಿ‌ನಿ ಕೃಷ್ಣ ಮತ್ತಿತರರುಉಪಸ್ಥಿತರಿದ್ದರು. ರೋಟರಿ ಕ್ಲಬ್‌ ಅಧ್ಯಕ್ಷ ಕ್ಸೇವಿಯರ್‌ ಡಿ’ಸೋಜಾ ಸ್ವಾಗತಿಸಿದರು. ರೋಟರಿ ಯುವದ ಕಾರ್ಯದರ್ಶಿ ಉಮೇಶ್‌ ನಾಯಕ್‌ ವಂದಿಸಿದರು. ಆರೋಗ್ಯ ರಕ್ಷಾ ಸಮಿತಿ ಸದಸ್ಯ ರಫೀಕ್‌ ಕಾರ್ಯಕ್ರಮ ನಿರೂಪಿಸಿದರು.

Advertisement

ವಿವಿಧ ಕೊಡುಗೆಗಳು :  ಪುತ್ತೂರಿನ ಏಳು ರೋಟರಿ ಕ್ಲಬ್‌ ಹಾಗೂ ಇನ್ನರ್‌ ವ್ಹೀಲ್‌ ಕ್ಲಬ್‌ನಿಂದ ತಲಾ ಒಂದೊಂದು ಫ್ಯಾನ್‌, ಡಯಾಲಿಸಿಸ್‌ ಕೇಂದ್ರಕ್ಕೆ ಸ್ಟ್ರಕ್ಚರ್‌ಹಾಗೂ ರೋಟರಿ ಕ್ಲಬ್‌ ಪುತ್ತೂರು ಸಿಟಿ ಮೂಲಕ ಮಿತ್ರಂಪಾಡಿ ಜಯರಾಮ ರೈ ಅವರು ಡಯಾಲಿಸಿಸ್‌ ಕೇಂದ್ರಕ್ಕೆ ವ್ಹೀಲ್‌ ಚಯರ್‌ ಕೊಡುಗೆಯಾಗಿ ನೀಡಿದರು.

ಗೌರವಾರ್ಪಣೆ :ಸರಕಾರಿ ಆಸ್ಪತ್ರೆಯಲ್ಲಿರುವ ಕೋವಿಡ್‌-19 ರೋಗಿಗಳಿಗೆ ಸತತ 100 ದಿನಗಳಲ್ಲಿ ಪ್ರತಿ ದಿನ ರೂ. 80ಕ್ಕೂ ಅಧಿಕ ಬೆಲೆಯ 1,500 ಕ್ಕೂ ಅಧಿಕ ಕಿಟ್‌ ವಿತರಿಸಿದ ಇ-ಫ್ರೆಂಡ್ಸ್‌ ನ ಪದಾಧಿಕಾರಿಗಳನ್ನು ಗೌರವಿಸಲಾಯಿತು.

ಸೇವೆ ಒದಗಿಸಲು ಪ್ರಯತ್ನ :  ಖಾಸಗಿ ಆಸ್ಪತ್ರೆಗಳಿಗೆ ಚಿಕ್ಸಿತೆಗೆ ದಾಖಲಾಗುವ ಜನರಿಗೆ ಬಿಲ್‌ ಪಾವತಿಯೇ ದೊಡ್ಡ ಸವಾಲಾಗಿದೆ. ತನ್ನ ಎಲ್ಲ ಆಸ್ತಿ ಮಾರಿದರೂ, ಬಿಲ್‌ ಹಣ ಪಾವತಿಗೆ ಸಾಧ್ಯವಾಗದ ಸ್ಥಿತಿ ಇದೆ. ಹಾಗಾಗಿ ಸರಕಾರಿ ಆಸ್ಪತ್ರೆಯಲ್ಲಿ ಜನರಿಗೆ ಅಗತ್ಯ ಸೇವೆ ಸಿಗುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next