Advertisement
ಯೋಜನೆ ಅಗತ್ಯಅಕ್ವೇರಿಯಂ ಖರೀದಿ ಮಾಡಿ ಮನೆಗೆ ತರುವ ಮುನ್ನವೇ ಸರಿಯಾದ ಯೋಜನೆ ಹಾಕಿಕೊಳ್ಳಬೇಕು. ಏಕೆಂದರೆ ಅದರ ಸ್ಥಳವನ್ನು ಆಗಾಗ ಬದಲಾಯಿಸಲು ಕಷ್ಟ. ಹೀಗಾಗಿ ಎಲ್ಲಿಡಬೇಕು, ವಾಸ್ತು ಪ್ರಕಾರ ಆ ಜಾಗ ಸರಿಯೇ, ಅಲ್ಲಿ ಪ್ಲಗ್ ವ್ಯವಸ್ಥೆ ಇದೆಯೇ ? ಮನೆಯ ಅಲಂಕಾರಕ್ಕೆ ಇದು ಪೂರಕವಾಗಿ ಹೊಂದಿಕೊಳ್ಳುವುದೇ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು.
ಲೀವಿಂಗ್ ರೂಮ್ ಅಥವಾ ಡೈನಿಂಗ್ ಏರಿಯಾ ಮತ್ತು ಕಿಚನ್ ಮಧ್ಯೆ ರೂಮ್ ಡಿವೈಡರ್ ಇದ್ದರೆ ಅದರ ಭಾಗವಾಗಿ ಇಡಬಹುದು. ಇದರ ಜತೆಗೆ ನೀವು ಕೂರುವ ಸೋಫಾಕ್ಕೆ ಎದುರಾಗಿದ್ದರೆ ಮನೆಯ ಅಂದಕ್ಕೆ ಅನುಕೂಲವಾಗಿ ಕಾಣುತ್ತದೆ. ಇದರ ಹೊರತಾಗಿ ಟಿವಿ ಕ್ಯಾಬಿನೆಟ್ ಅಥವಾ ಬಾರ್ ಯೂನಿಟ್‌ನ ಭಾಗವಾಗಿಯೂ ಬಳಸಬಹುದು. ಎಚ್ಚರಿಕೆ ಅಗತ್ಯ
ಸದಾ ಓಡಾಡುವ ಜಾಗದಲ್ಲಿ ಅಕ್ವೇರಿಯಂ ಇಡುವುದು ಸೂಕ್ತವಲ್ಲ. ಏಕೆಂದರೆ ಓಡಾಡಲು ಅಡೆತಡೆಯಾಗುವುದರ ಜತೆಗೆ ಏನಾದರೂ ತಾಗಿ ಅಕ್ವೇರಿಯಂ ಒಡೆಯುವ ಸಾಧ್ಯತೆಗಳನ್ನು ಕಡೆಗಣಿಸುವಂತಿಲ್ಲ. ಇನ್ನು ಕಿಟಕಿಗಳ ಮೂಲಕ ಸೂರ್ಯ ಬೆಳಕು ನೇರವಾಗಿ ತಾಗುವ ಜಾಗದಲ್ಲೂ ಅಕ್ವೇರಿಯಂ ಇಡಬಾರದು.
Related Articles
Advertisement
ಗಾತ್ರ ನಿರ್ಣಯಎಷ್ಟು ಮೀನುಗಳನ್ನು ಹಾಕಬೇಕು ಎಂಬುದನ್ನು ಯೋಚಿಸಿ ಬಳಿಕ ಅಕ್ವೇರಿಯಂ ಗಾತ್ರವನ್ನು ನಿರ್ಣಯ ಮಾಡಬೇಕು. ಟ್ಯಾಂಕ್ ದೊಡ್ಡದಿದ್ದಷ್ಟೂ ಒಳಗಿರುವ ಮೀನುಗಳಿಗೆ ಓಡಾಡಲು ಅನುಕೂಲವಾದ ವಾತಾವರಣವನ್ನು ನಿರ್ಮಿಸುತ್ತದೆ. ಚಿಕ್ಕ ಗಾತ್ರದ ಅಕ್ವೇರಿಯಂ ಆದ್ರೆ, ಚಿಕ್ಕ ಮೀನುಗಳನ್ನು ಹಾಕಬೇಕು. ಗೋಲ್ಡ… ಫಿಶ್, ಏಂಜಲ್ ಫಿಶ್, ಡಿಸ್ಕಸ್ ಫಿಸ್ ಮತ್ತು ನೀಲಿ ಧಾರೆ ಉಳ್ಳ ನಿಯಾನ್ ಫಿಶ್ ನೋಡಲು ತುಂಬಾ ಆಕರ್ಷಕವಾಗಿರುತ್ತವೆ. ಟೈಗರ್ ಶಾರ್ಕ್, ಸಿಲ್ವರ್ ಶಾರ್ಕ್‌ಗಳನ್ನೂ ಬಿಡಬಹುದು. ಎಲ್ಲೆಡೆಯೂ ಸಾಧ್ಯ
ಅಕ್ವೇರಿಯಂ ಅನ್ನು ಹೊರಗೆ ಮಾತ್ರವಲ್ಲ ಒಳಗಡೆಯೂ ಅಲಂಕರಿಸಬಹುದು. ಇದಕ್ಕಾಗಿ ಒಳಗಡೆ ಅಕ್ವೇರಿಯಂ ಪ್ಲಾಂಟ್, ಪೆಬೆಲ್, ಚಿಪ್ಪು ಮೊದಲಾದವನ್ನು ಇಡಬಹುದು. ಇದರ ಜತೆಗೆ ಆಟಿಕೆ ಆಮೆ, ಏಡಿಯನ್ನೂ ಇಡುತ್ತಾರೆ. ಇದರ ಮೇಲ್ಭಾಗದಲ್ಲಿ ಕನ್ನಡಿಯನ್ನು ಅಳವಡಿಸಿದರೆ ಅಕ್ವೇರಿಯಂ ಇನ್ನಷ್ಟು ದೊಡ್ಡದಿರುವಂತೆ ಕಾಣುತ್ತದೆ. ಸುಶ್ಮಿತಾ ಜೈನ್