Advertisement
ಮೋದಿ ಸಾಬರಮತಿ ಆಶ್ರಮದಲ್ಲಿ ಮಹಾತ್ಮನಿಗೆ ಪುಷ್ಪನಮನ ಸಲ್ಲಿಸಲಿದ್ದಾರೆ. ಅನಂತರ 20 ಸಾವಿರ ಗ್ರಾಮಗಳ ಮುಖ್ಯಸ್ಥರ ಸಮ್ಮುಖ ಭಾರತವನ್ನು ಬಯಲು ಶೌಚ ಮುಕ್ತ ದೇಶವೆಂದು ಘೋಷಿಸುವರು.
ಇದರ ಜತೆಗೆ ಒಂದೇ ಬಾರಿಗೆ ಬಳಕೆಯಾಗುವ ಪ್ಲಾಸ್ಟಿಕ್‌ಗೆ ನಿಷೇಧ ಹೇರುವ ಕುರಿತೂ ಪ್ರಧಾನಿ ಮೋದಿ ಘೋಷಿಸುವ ಸಾಧ್ಯತೆಯಿದೆ. 2022ರೊಳಗಾಗಿ ಒಂದೇ ಬಾರಿಗೆ ಬಳಸುವ ಪ್ಲಾಸ್ಟಿಕ್‌ಗೆ ಸಂಪೂರ್ಣವಾಗಿ ನಿಷೇಧ ಹೇರಲು ಸರಕಾರ ಚಿಂತನೆ ನಡೆಸಿದೆ.