Advertisement

ಪ್ರೊ ಕಬಡ್ಡಿ: ಮತ್ತೆ ಗೆಲುವಿನ ಹಳಿ ಏರಿತು ಬೆಂಗಳೂರು ಬುಲ್ಸ್‌

11:39 PM Nov 09, 2022 | Team Udayavani |

ಪುಣೆ: ಬೆಂಗಳೂರು ಬುಲ್ಸ್‌ ಮತ್ತೆ ಗೆಲುವಿನ ಹಳಿ ಏರಿದೆ. ಸತತ 2 ಸೋಲಿನಿಂದ ಕಂಗೆಟ್ಟಿದ್ದ ಬುಲ್ಸ್‌ ಬುಧವಾರದ ನಿಕಟ ಹೋರಾಟದಲ್ಲಿ ಹರ್ಯಾಣ ಸ್ಟೀಲರ್ ಗೆ 36-33 ಅಂಕಗಳ ಸೋಲುಣಿಸಿ ಸೇಡು ತೀರಿಸಿಕೊಂಡಿತು. ಹಿಂದಿನ ಪಂದ್ಯದಲ್ಲಿ ಅದು ಹರ್ಯಾಣ ವಿರುದ್ಧ 27-29 ಅಂತರದಿಂದ ಎಡವಿತ್ತು.

Advertisement

ಬುಲ್ಸ್‌ ಪರ ರೈಡರ್‌ ನೀರಜ್‌ ನರ್ವಾಲ್‌ ಉತ್ತಮ ಪ್ರದರ್ಶನವಿತ್ತರು. ಅವರದು ಗರಿಷ್ಠ 9 ಅಂಕಗಳ ಸಾಧನೆ. ನಾಯಕ ಮಹೇಂದರ್‌ ಸಿಂಗ್‌ 5 ಅಂಕ, ರೈಡರ್‌ಗಳಾದ ವಿಕಾಸ್‌ ಕಂಡೋಲ ಮತ್ತು ಭರತ್‌ ತಲಾ 4 ಅಂಕ ಗಳಿಸಿ ಕೊಟ್ಟರು. ರೈಡರ್‌ ಮನ್‌ಜಿತ್‌ ಹರ್ಯಾಣ ಪರ ಮಿಂಚಿದ ಪ್ರಮುಖ ಆಟಗಾರ. ಅವರು 8 ಅಂಕ ಗಳಿಸಿದರು.
ಇದು 12 ಪಂದ್ಯಗಳಲ್ಲಿ ಬುಲ್ಸ್‌ ಸಾಧಿಸಿದ 7ನೇ ಗೆಲುವು. ಹರ್ಯಾಣ 12 ಮುಖಾಮುಖೀಗಳಲ್ಲಿ 6ನೇ ಸೋಲುಂಡಿತು.

ಪುನೇರಿಗೆ ಒಂದಂಕದ ಗೆಲುವು
ರೋಚಕವಾಗಿ ಸಾಗಿದ ದ್ವಿತೀಯ ಪಂದ್ಯದಲ್ಲಿ ಪುನೇರಿ ಪಲ್ಟಾನ್ಸ್‌ ಕೇವಲ ಒಂದಂಕದಿಂದ ತಲೈವಾಸ್‌ಗೆ ಆಘಾತವಿಕ್ಕಿತು. ಅಂತರ 35-34. ಈ ಪಂದ್ಯದಲ್ಲಿ ಮಿಂಚಿದ್ದು ತಲೈವಾಸ್‌ ರೈಡರ್‌ ನರೇಂದರ್‌ (10 ಅಂಕ). ಹೀಗಾಗಿ ಆರಂಭದಲ್ಲಿ ಮುನ್ನಡೆ ಸಾಧ್ಯವಾಯಿತು. ಆದರೆ ಕೊನೆಯಲ್ಲಿ ಪುನೇರಿ ತಿರುಗಿ ಬಿತ್ತು. ರೈಡರ್‌ ಅಸ್ಲಾಮ್‌ ಇನಾಮಾªರ್‌ (6 ಅಂಕ), ನಾಯಕ ಫ‌ಜಲ್‌ ಅಟ್ರಾಚಲಿ (5 ಅಂಕ) ಉತ್ತಮ ಪ್ರದರ್ಶನ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next