ಬೆಂಗಳೂರು: ಪ್ರೊ ಕಬಡ್ಡಿ 8ನೇ ಆವೃತ್ತಿಯ ಸೋಮ ವಾರದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ ತಂಡ 31-28 ಅಂಕಗಳಿಂದ ಜೈಪುರ ಪಿಂಕ್ ಪ್ಯಾಂಥರ್ ತಂಡವನ್ನು ಮಣಿಸಿದೆ.
ಇದರೊಂದಿಗೆ ಬೆಂಗಾಲ್ ಗೆಲುವಿನ ಸಂಖ್ಯೆ 3ಕ್ಕೇರಿದೆ, ಇತ್ತ ಸೋಲುಗಳ ಸಂಖ್ಯೆಯೂ ಸರಿಯಾಗಿ 3. ಇನ್ನು ಜೈಪುರ ತಂಡ ಆಡಿದ 5 ಪಂದ್ಯಗಳಲ್ಲಿ 2 ಗೆಲುವು, 3 ಸೋಲನುಭವಿಸಿದೆ.
ಈ ರೋಚಕ ಪಂದ್ಯದಲ್ಲಿ ಬೆಂಗಾಲ್ ಪರ ನಾಯಕ ಮಣಿಂದರ್ ಸಿಂಗ್ ಅತ್ಯುತ್ತಮ ದಾಳಿ ನಡೆಸಿದರು. ಅವರು 19 ಬಾರಿ ದಾಳಿ ನಡೆಸಿ 12 ಅಂಕ ಗಳಿಸಿದರು. ರಕ್ಷಣೆ ವೇಳೆ ಇನ್ನೊಂದು ಅಂಕ ಗಳಿಸಿದರು. ಆಲ್‌ರೌಂಡರ್ ಮೊಹಮ್ಮದ್ ಅತ್ಯುತ್ತಮ ಪ್ರದರ್ಶನ ನೀಡಿದ ಇನ್ನೊಬ್ಬ ಆಟಗಾರ. ಅವರು 16 ದಾಳಿ ಯತ್ನದಲ್ಲಿ 7 ಅಂಕ ಗಳಿಸಿದರು. ಮೂರು ಬಾರಿ ಎದುರಾಳಿಯನ್ನು ಕೋಟೆಯೊಳಗೆ ಕೆಡವಿಕೊಳ್ಳಲು ಯತ್ನಿಸಿ 2 ಬಾರಿ ಯಶಸ್ವಿಯಾದರು.V
ಇದನ್ನೂ ಓದಿ:ವೇತನ ಮಟ್ಟ: ಬೆಂಗಳೂರಿಗೆ ಅಗ್ರ ಸ್ಥಾನ; ರ್‍ಯಾಂಡ್‌ಸ್ಟಡ್‌ನ ಸ್ಯಾಲರಿ ಟ್ರೆಂಡ್ ವರದಿ ಪ್ರಕಟ
ಮೊದಲಾರ್ದದಲ್ಲೇ 4 ಅಂಕ ಮುನ್ನಡೆ ಸಾಧಿಸಿದ ಬೆಂಗಾಲ್ ದ್ವಿತೀಯಾರ್ದದಲ್ಲೂ ಎದುರಾಳಿಗೆ ಅಂಕ ಮುನ್ನಡೆ ಸಾಧಿಸಲು ಅವಕಾಶವನ್ನು ನೀಡದೆ ಅಂತಿಮವಾಗಿ 3 ಅಂಕಗಳ ಅಂತರದಿಂದ ಮೇಲುಗೈ ಸಾಧಿಸಿತು. ಜೈಪುರದ ಪರ ಅರ್ಜುನ್ ದೇಶ್ವಾಲ್ ಅಮೋಘ ಆಟವಾಡಿದರು. ಅವರು 21 ಬಾರಿ ದಾಳಿ ನಡೆಸಿ 16 ಅಂಕ ಗಳಿಸಿದರು. ಇವರನ್ನು ಹೊರತುಪಡಿಸಿದರೆ, ದೀಪಕ್ ಹೂಡ, ನವೀನ್ ಮಿಂಚಿದರು.
ದಿನದ ಮತ್ತೊಂದು ರೋಚಕ ಪಂದ್ಯದಲ್ಲಿ ಕನ್ನಡಿಗ ಪ್ರಶಾಂತ್ ಕುಮಾರ್ ರೈ ಸಾರಥ್ಯದ ಪಾಟ್ನಾ ಪೈರೇಟ್ಸ್ ತಂಡ ತೆಲುಗು ಟೈಟಾನ್ಸ್ ವಿರುದ್ಧ ಒಂದು ಅಂಕದಿಂದ ಗೆದ್ದು ಬಂದಿತು. ಗೆಲುವಿನ ಅಂತರ 31-30.
ಪಾಟ್ನಾ ಪರ ಪ್ರಶಾಂತ್ ರೈ (5), ಮೋನು ಗೋಯತ್ (7) ಅಂಕದೊಂದಿಗೆ ರೈಡಿಂಗ್‌ನಲ್ಲಿ ಮಿಂಚಿದರು.