Advertisement

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

01:39 PM Dec 27, 2024 | Team Udayavani |

ಫ್ಲೋರಿಡಾ: ಅಮೆರಿಕದ ಫ್ಲೋರಿಡಾದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಪಿಜ್ಜಾ ಡೆಲಿವರಿ ಕೊಡಲು ಬಂದ ಮಹಿಳೆಯೊಬ್ಬಳು ತನಗೆ ಸರಿಯಾದ ಟಿಪ್ಸ್ ನೀಡಿಲ್ಲ ಎಂಬ ಕಾರಣಕ್ಕೆ ಗರ್ಭಿಣಿ ಮಹಿಳೆಯ ಮೇಲೆ ಹದಿನಾಲ್ಕು ಬಾರಿ ಚಾಕುವಿನಿಂದ ಇರಿದ ಘಟನೆ ನಡೆದಿದ್ದು ಘಟನೆಗೆ ಸಂಬಂಧಿಸಿ ಪಿಜ್ಜಾ ಡೆಲಿವರಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದು, ಇನ್ನೋರ್ವ ಆರೋಪಿಯ ಪತ್ತೆಗೆ ಹುಡುಕಾಟ ನಡೆಸುತ್ತಿದ್ದಾರೆ.

Advertisement

ಬಂಧಿತ ಮಹಿಳೆಯನ್ನು ಬ್ರಿಯಾನ್ನಾ ಅಲ್ವೆಲೋ(22) ಎಂದು ಗುರುತಿಸಲಾಗಿದೆ.

ಏನಿದು ಘಟನೆ:
ಕಳೆದ ಭಾನುವಾರ(ಡಿ.22) ಫ್ಲೋರಿಡಾದ ಹೋಟೆಲ್ ಒಂದರಲ್ಲಿ ನಡೆದಿದ್ದು, ಮಹಿಳೆಯೊಬ್ಬರು ತನ್ನ ಪತಿ, ಹಾಗೂ ಐದು ವರ್ಷದ ಮಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಹೋಟೆಲ್ ಗೆ ಬಂದಿದ್ದರು ಈ ವೇಳೆ ಪಿಜ್ಜಾ ಆರ್ಡರ್ ಮಾಡಿದ್ದಾರೆ, ಆರ್ಡರ್ ಮಾಡಿದ ಕೆಲ ಹೊತ್ತಿನಲ್ಲೇ ಪಿಜ್ಜಾ ಡೆಲಿವರಿ ಮಹಿಳೆ ಹೋಟೆಲ್ ಗೆ ಬಂದು ಪಿಜ್ಜಾ ಡೆಲಿವರಿ ಮಾಡಿದ್ದಾಳೆ ಈ ವೇಳೆ ಹೋಟೆಲ್ ನಲ್ಲಿ ತಂಗಿದ್ದ ಮಹಿಳೆ ಡೆಲಿವರಿ ಮಹಿಳೆಗೆ ಟಿಪ್ಸ್ ಎಂದು ಸಣ್ಣ ಮೊತ್ತ ನೀಡಿದ್ದಾರೆ ಇದು ಆಕೆಗೆ ಕಡಿಮೆ ಆಯಿತೆಂದು ಹೆಚ್ಚು ಕೊಡುವಂತೆ ಕೇಳಿಕೊಂಡಿದ್ದಾಳೆ ಆದರೆ ಮಹಿಳೆ ಕೊಡಲು ಒಪ್ಪಲಿಲ್ಲ, ಇದರಿಂದ ಕೋಪಗೊಂಡ ಡೆಲಿವರಿ ಮಹಿಳೆ ಸಿಟ್ಟಿನಿಂದ ಅಲ್ಲಿಂದ ಹೊರಡುತ್ತಾಳೆ ರಾತ್ರಿ ಸುಮಾರು ಹತ್ತು ಗಂಟೆಯ ಸುಮಾರಿಗೆ ತನ್ನ ಮುಸುಕುಧಾರಿ ಸಹಚರನೊಂದಿಗೆ ಮಹಿಳೆ ಇರುವ ಹೋಟೆಲ್ ಗೆ ಚಾಕು ಸಹಿತ ಬಂದು ಹೋಟೆಲ್ ಬೆಲ್ ಒತ್ತಿ ಮಹಿಳೆ ಬಾಗಿಲು ತೆರೆಯುತ್ತಿದ್ದಂತೆ ಚಾಕುವಿನಿಂದ ಗರ್ಭಿಣಿ ಮಹಿಳೆಗೆ ಮನಬಂದಂತೆ ಚುಚ್ಚಿ ಸ್ಥಳದಿಂದ ಪರಾರಿಯಾಗುತ್ತಾರೆ, ದಾಳಿಯ ಸಂದರ್ಭದಲ್ಲಿ, ಗರ್ಭಿಣಿ ಮಹಿಳೆ ತನ್ನ ಐದು ವರ್ಷದ ಮಗಳನ್ನು ದಾಳಿಕೋರರಿಂದ ರಕ್ಷಿಸಲು ಯತ್ನಿಸುತ್ತಾಳೆ ಆದರೆ ದಾಳಿಕೋರರು ಆಕೆಯ ಬೆನ್ನಿನ ಮೇಲೂ ಹಲ್ಲೆ ನಡೆಸಿದ್ದಾರೆ. ಬಳಿಕ ಸಹಾಯಕ್ಕಾಗಿ ಕರೆ ಮಾಡಲು ಪ್ರಯತ್ನಿಸಿದ್ದಾಳೆ ಆದರೆ ಆರೋಪಿ ಅಲ್ವೆಲೋ ಮಹಿಳೆಯ ಕೈಯಿಂದ ಫೋನ್ ಅನ್ನು ಕಿತ್ತುಕೊಂಡು ಪರಾರಿಯಾಗುತ್ತಾಳೆ.

ಇದಾದ ಬಳಿಕ ಪತಿ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಸ್ಥಳಕ್ಕೆ ಬಂದ ಪೊಲೀಸರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಗರ್ಭಿಣಿ ಮಹಿಳೆಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದ್ದಾರೆ ಸದ್ಯ ಮಹಿಳೆಯ ಅರೋಗ್ಯ ಸ್ಥಿತಿ ಸ್ಥಿರವಾಗಿದ್ದು ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧಾರದಲ್ಲಿ ಪ್ರಮುಖ ಆರೋಪಿ ಬ್ರಿಯಾನ್ನಾ ಅಲ್ವೆಲೋ ನನ್ನು ಬಂಧಿಸಿದ್ದು, ಸಹಚರ ತಲೆಮರೆಸಿಕೊಂಡಿದ್ದು ಆತನ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿದ ಪಿಜ್ಜಾ ಮಾಲೀಕ ಘಟನೆಯ ಕುರಿತು ನಾವು ಕ್ಷಮೆ ಕೇಳುತ್ತೇವೆ, ಯಾವುದೇ ವಿಚಾರಣೆ ಇದ್ದರು ನಮ್ಮಿಂದ ಸಂಪೂರ್ಣ ಸಹಕಾರವಿದೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ, ಗ್ರಾಹಕರು ಹಾಗೂ ತಂಡದ ಸದಸ್ಯರ ಯೋಗಕ್ಷೇಮ ನಮ್ಮ ಜವಾಬ್ದಾರಿ ಎಂದು ಹೇಳಿದ್ದಾರೆ.

Advertisement

ಇದನ್ನೂ ಓದಿ: Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…

Advertisement

Udayavani is now on Telegram. Click here to join our channel and stay updated with the latest news.

Next