Advertisement
ಯಾವೆಲ್ಲ ಊರುಗಳು?ಶೇಡಿಮನೆಯಿಂದ ಆರಂಭವಾಗುವ ಈ ರಸ್ತೆಯೂ ಕೊಂಜಾಡಿಗೆ ಸಂಚರಿಸುವ ಪ್ರಮುಖ ರಸ್ತೆಯಾಗಿದ್ದರೂ, ಆರ್ಡಿ, ಅಮಾಸೆಬೈಲು, ಮಾಂಡಿ ಮೂರುಕೈ, ಮಾಯಾ ಬಜಾರ್, ಹೆಬ್ರಿ, ಸಿದ್ದಾಪುರ ಮತ್ತಿತರ ಪ್ರಮುಖ ಊರುಗಳಿಗೆ ಸಂಪರ್ಕ ಕೊಂಡಿ ಇದಾಗಿದೆ. ಹೆಂಗವಳ್ಳಿ, ತೊಂಭತ್ತುವಿಗೂ ಈ ರಸ್ತೆಯ ಮೂಲಕ ಸಂಚರಿಸಬಹುದು.
ಈ ಹಿಂದೆ ಈ ಮಾರ್ಗವಾಗಿ ಸರಕಾರಿ ಬಸ್‌ವೊಂದು ಸಂಚರಿಸುತ್ತಿತ್ತು. ಪ್ರತಿ ದಿನ ಬೆಳಗ್ಗೆ 10.30ಕ್ಕೆ ಮಾಂಡಿ ಮೂರುಕೈ, ಶೇಡಿಮನೆ, ಕೊಂಜಾಡಿ ಆಗಿ ಹೆಬ್ರಿಗೆ ತೆರಳುತ್ತಿತ್ತು. ಆದರೆ ಕಳೆದ 2 ವರ್ಷಗಳಿಂದ ಈ ಹದಗೆಟ್ಟ ರಸ್ತೆಯಿಂದಾಗಿ ಆ ಬಸ್ ಕೂಡ ಸ್ಥಗಿತಗೊಂಡಿದೆ. ಇದರಿಂದ ಜನರಿಗೆ ತುಂಬಾ ತೊಂದರೆಯಾಗುತ್ತಿದೆ.
Related Articles
ಹದಗೆಟ್ಟ ರಸ್ತೆಯಿಂದಾಗಿ ಈಗ ಈ ಭಾಗದ ಹೆಚ್ಚಿನ ಜನರು ಶೇಡಿಮನೆ- ಕೊಂಜಾಡಿ ರಸ್ತೆಯಲ್ಲಿ ಬರುವುದನ್ನೇ ನಿಲ್ಲಿಸಿ ಬಿಟ್ಟಿದ್ದಾರೆ. ಸುತ್ತು ಬಳಸಿ ಪ್ರಯಾಣಿಸುತ್ತಿದ್ದಾರೆ. ಇದು ಗೋಳಿಯಂಗಡಿ ಅಥವಾ ಶೇಡಿಮನೆಯಿಂದ ಅಮಾಸೆಬೈಲುವಿಗೆ ಹತ್ತಿರದ ಮಾರ್ಗವಾಗಿದ್ದರೂ, ರಸ್ತೆ ಸರಿ ಇಲ್ಲದ ಕಾರಣ ಮಾಂಡಿ ಮೂರುಕೈ, ಆರ್ಡಿಯಾಗಿ ಸಂಚರಿಸಬೇಕಾದ ಅನಿವಾರ್ಯತೆ ಜನರದ್ದಾಗಿದೆ. ಕೇವಲ 3-4 ಕಿ.ಮೀ. ಅಂತರವಿರುವ ಈ ರಸ್ತೆಯ ದುಸ್ಥಿತಿಯಿಂದಾಗಿ 7-8 ಕಿ.ಮೀ. ಕ್ರಮಿಸುವಂತಾಗಿದೆ.
Advertisement
ದುರಸ್ತಿಗೆ ಪ್ರಯತ್ನಶೇಡಿಮನೆ – ಕೊಂಜಾಡಿ ರಸ್ತೆ ದುರಸ್ತಿಗೆ ಕಳೆದ ವರ್ಷ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರು 50 ಲಕ್ಷ ರೂ. ಅನುದಾನಕ್ಕೆ ಬೇಡಿಕೆ ಸಲ್ಲಿಸಿದ್ದರು. ಆದರೆ ನಬಾರ್ಡ್ ಅನುದಾನ ಬಿಡುಗಡೆಯಾಗಿಲ್ಲದ ಕಾರಣ ವಿಳಂಬವಾಗಿದೆ. ಮತ್ತೆ ರಸ್ತೆ ದುರಸ್ತಿಗೆ ಪ್ರಯತ್ನಿಸಲಾಗುವುದು.
-ಸುಪ್ರೀತಾ ಉದಯ ಕುಲಾಲ್, ಜಿ.ಪಂ. ಸದಸ್ಯರು ಹಲವು ವರ್ಷಗಳೇ ಕಳೆದಿವೆ
ಈ ರಸ್ತೆ ರಿಪೇರಿಯಾಗಿ ಹಲವು ವರ್ಷಗಳೇ ಕಳೆದಿವೆ. ಪ್ರತಿ ಮಳೆಗಾಲದಲ್ಲೂ ನಾವು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದೇವೆ. ಕೆಲ ವರ್ಷಗಳ ಹಿಂದೆ ತೇಪೆ ಹಾಕಿದ್ದು, ಬಿಟ್ಟರೆ ಈ ರಸ್ತೆಯ ಅಭಿವೃದ್ಧಿ ಬಗ್ಗೆ ಯಾರೂ ಕೂಡ ಗಮನವೇ ಹರಿಸಿಲ್ಲ. ಈ ಬಾರಿಯಾದರೂ ಮಳೆಗಾಲಕ್ಕೆ ಮುಂಚೆ ರಸ್ತೆ ಅಭಿವೃದ್ಧಿಯಾಗಿ ಈ ಭಾಗದ ಅನೇಕ ಮನೆಗಳಿಗೆ ಅನುಕೂಲವಾಗಲಿ. – ಗಣಪತಿ ಆರ್ಡಿ, ಸ್ಥಳೀಯರು – ಪ್ರಶಾಂತ್ ಪಾದೆ