ಬೇಕಾಗುವ ಸಾಮಗ್ರಿಗಳು
ಖೋಯಾ- 100 ಗ್ರಾಂ
ಬಾದಾಮ್- 60 ಗ್ರಾಂ
ಪಿಸ್ತಾ -6ಂ ಗ್ರಾಂ
ಸಕ್ಕರೆ – 60 ಗ್ರಾಂ
ಏಲಕ್ಕಿ – 3
ತುಪ್ಪ
ಬಾದಾಮ್
ಪೌಡರ್ – 2 ಚಮಚ
ಮಾಡುವ ವಿಧಾನ:
ಒಂದು ಪಾನ್ ತೆಗೆದುಕೊಂಡು ಅದನ್ನು ಸ್ವಲ್ಪ ಬಿಸಿ ಮಾಡಿಕೊಳ್ಳಿ. ನಂತರ ಅದಕ್ಕೆ ಬಾದಾಮಿ ಮತ್ತು ಪಿಸ್ತಾ ಹಾಕಿ ಹುರಿದುಕೊಳ್ಳಿ. ಜತೆಗೆ ಇನ್ನೊಂದು ಪಾತ್ರೆಗೆ ತುಪ್ಪ ಹಚ್ಚಿಕೊಳ್ಳಿ. ನಂತರ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಬಾದಾಮ್, ಪಿಸ್ತಾ ಮತ್ತು ಏಲಕ್ಕಿ ಹಾಕಿ ಚೆನ್ನಾಗಿ ತರಿತರಿಯಾಗಿ ಸಿಗವಂತೆ ಮಾಡಿಕೊಳ್ಳಿ.
ಮೊದಲೇ ತೆಗೆದುಕೊಂಡ ಪಾನ್‌ನಲ್ಲಿ ಖೋಯಾ ಮತ್ತು ಸಕ್ಕರೆ ಹಾಕಿ. ಸ್ವಲ್ಪ ಉರಿ ಇಟ್ಟು ಅದು ಕರಗಿ ಹಿಟ್ಟಿನ ಮಾದರಿಯಾಗುವವರೆಗೆ ಕುದಿಸಿ. ನಂತರ ಅದಕ್ಕೆ ಬಾದಾಮ್, ಬರ್ಫಿ ಪುಡಿಯನ್ನು ಅದರ ಮೇಲೆ ಹಾಕಿ ಕಲಸಿ. ಅನಂತರ ಮೊದಲೇ ತುಪ್ಪ ಹಚ್ಚಿಟ್ಟ ಪಾತ್ರೆಗೆ 2 ಇಂಚು ಲೇಯರ್‌ನಲ್ಲಿ ಬರ್ಫಿ ಮಿಕ್ಸರ್ ಹಾಕಿಕೊಳ್ಳಿ . ಅದರ ಮೇಲೆ ಚಾಕು ವಿನಿಂದ ಸಮತಟ್ಟು ಮಾಡಿಕೊಳ್ಳಿ. ನಂತರ ಅದರ ಮೇಲೆ ಬಾದಾಮಿ, ಪಿಸ್ತಾ ಪುಡಿಯನ್ನು ಹಾಕಿ. ಬಿಸಿ ಆರಿದ ನಂತರ ಅದನ್ನು ಬೇಕಾದ ಆಕೃತಿಗೆ ಕತ್ತರಿಸಿ. ಈಗ ಪಿಸ್ತಾ ಬಾದಾಮ್ ಬರ್ಫಿ ತಿನ್ನಲು ಸಿದ್ಧ.
- ರಂಜಿನಿ ಮಿತ್ತಡ್ಕ