ಪಿರಿಯಾಪಟ್ಟಣ : ಉಕ್ರೇನ್ ನಿಂದ ಮರಳಿದ ಪಿರಿಯಾಪಟ್ಟಣದ ವಿದ್ಯಾರ್ಥಿಗಳ ಮನೆಗೆ ತಹಸೀಲ್ದಾರ್ ಚಂದ್ರಮೌಳಿ ಭೇಟಿ ನೀಡಿ ಕುಶಲೋಪರಿ ವಿಚಾರಣೆ ಮಾಡಿದರು.
ಪಟ್ಟಣದ ಮಹದೇಶ್ವರ ರಸ್ತೆಯ ನಿವಾಸಿ ಮಾಜಿ ಸೈನಿಕ ಶಶಿಧರ್ ಮತ್ತು ಗಾಯಿತ್ರಿ ದಂಪತಿಗಳ ಪುತ್ರಿ ಎಸ್.ಕೇಶನಂದಿನಿ ಉಕ್ರೇನ್ ನಿಂದ ಮರಳಿದ ವಿದ್ಯಾರ್ಥಿನಿಯಾಗಿದ್ದಾರೆ. ಉಕ್ರೇನ್ನಲ್ಲಿ ವಿ.ಎನ್.ಕ್ರಾಸ್ ಖಾರ್ಕಿವ್ ಇನ್ ಕಾಬು ನ್ಯಾಷಿನಲ್ ಮೆಡಿಕಲ್ ನಲ್ಲಿ ಎಂಬಿಬಿಎಸ್ ದ್ವಿತೀಯ ವರ್ಷ ವ್ಯಾಸಂಗ ಮಾಡುತ್ತಿದ್ದ ಈಕೆ ಫೆ.24 ರಂದು ಭಾರತಕ್ಕೆ ಮರಳಿದ್ದಾರೆ. ರಾಯಭಾರಿ ಕಚೇರಿ ನೀಡಿದ್ದ ಎರಡನೇ ಸೂಚನೆಯನ್ನು ಮನೆಯಲ್ಲಿ ತಿಳಿಸುತ್ತಿದ್ದಂತೆ ತಂದೆ ಶಶಿಧರ್ ಭಾರತಕ್ಕೆ ಮರಳುವಂತೆ ಸೂಚಿಸಿದ್ಧಾರೆ. ಪೋಷಕರ ಸೂಚನೆಯಂತೆ ಫೆ.24ರಂದು ಭಾರತಕ್ಕೆ ಮರಳಿದ್ದು ಅಂದೆ ಯುದ್ಧ ಆರಂಭವಾಗಿದೆ.
ರಾಯಭಾರಿ ಕಚೇರಿ ಸೂಚನೆಯಂತೆ ನಾನು ಭಾರತಕ್ಕೆ ಮರಳಿದೆ ಆದರೆ ಈ ವೇಳೆಗಾಗಲೆ ವಿಮಾನ ಟಿಕೆಟ್ ಗಳು ದುಬಾರಿಯಾಗಿದ್ದವು ಅನೇಕರು ಇದನ್ನು ಭರಿಸಲಾಗದೆ ಅಲ್ಲೆ ಉಳಿದರು.
ನಾವು ಹೊರಡುವ ಮುನ್ನೆವೆ ಬ್ರಿಟನ್, ಈಜಿಪ್ಟ್ ನ ದೇಶಗಳ ಪ್ರಜೆಗಳು ನಮಗೂ ಮೊದಲೆ ದೇಶ ತೊರೆದಿದ್ದರು, ನನ್ನ ಅನೇಕ ಸ್ನೇಹಿತರು ಭಾರತ ಸರಕಾರದ ಸಹಾಯದಿಂದ ಮನೆಗೆ ಮರಳಿದ್ದಾರೆ, ಅನೇಕರು ಅಲ್ಲಿ ಬಾಂಬ್, ಗುಂಡಗಳ ಸದ್ದುಕೇಳಿ ನಾವು ಮರಳುವಿದಲ್ಲ, ನಾವು ಬದುಕು ಬರುವ ಭರವಸೆಯೆ ಇಲ್ಲ ಎಂದೆಲ್ಲಾ ಮೆಸೇಜ್ ಮಾಡಿದ್ದರು, ಆದರೆ ಸರಕಾರದ ಸಹಾಯದಿಂದ ಎಲ್ಲರೂ ವಾಪಸ್ಸಾಗಿದ್ದಾರೆ. ಮುಂದಿನ ನಮ್ಮ ಭವಿಷ್ಯದ ಬಗ್ಗೆ ನಮಗೆ ಆತಂಕ ತಲೆದೋರಿದ್ದು ಭಾರತದ ಪ್ರದಾನಿಗಳು ನಮ್ಮ ವಿದ್ಯಾಭ್ಯಾಸದ ಭವಿಷ್ಯದ ಬಗ್ಗೆ ಸೂಕ್ತ ನೆರವ ಕಲ್ಪಿಸಬೇಕು, ಹಾಗು ಮುಂದಿನ ದಿನಗಳಲ್ಲಿ ಭಾರತದ ಸರಕಾರ ಇಲ್ಲಿಯೆ ಮೆಡಿಕಲ್ ಕಾಲೇಜು ವಿದ್ಯಾಭ್ಯಾಸ ಬಡಹಾಗು ಮದ್ಯಮವರ್ಗದ ವಿದ್ಯಾರ್ಥಿಗಳ ಕೈಗೆಟುಕುವಂತೆ ಮಾಡಬೇಕು ಎಂದು ಮನವಿ ಕೇಶನಂದಿನ ಸರಕಾರಕ್ಕೆ ಮನವಿ ಮಾಡಿದ್ದಾರೆ.
ತಂದೆ ಶಶಿಧರ್ ಕೂಡ ಭಾರತದಲ್ಲಿ ಮೆಡಿಕಲ್ ಓದಿಸುವುದು ತುಂಬಾ ವೆಚ್ಚದಾಯಕವಾಗಿದ್ದು ಇನ್ನು ಸರಕಾರ ಕಡಿತಗೊಳಿಸಬೇಕು, ನಮ್ಮ ದೇಶದ ಸಂಪತ್ತು ಉಳಿಯುವುದರ ಜೊತೆಗೆ ನಮ್ಮ ಪ್ರತಿಭೆಗಳು ಇಲ್ಲಿಯೆ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸದಂತಾಗುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಮುಂಡರಗಿ: ಅಕ್ರಮ ಸಾಗುವಳಿ ಭೂಮಿಯ ತೆರವು ವಿರೋಧಿಸಿ ವಿಷ ಸೇವಿಸಿದ್ದ ಮಹಿಳೆ ಸಾವು
ಪಟ್ಟಣ ಕವಾಡಗೇರಿ ಬೀದಿ ನಿವಾಸಿ ಕುಶಾಲ್ ನಟರಾಜ್ ಕೂಡ ಉಕ್ರೇನ್ನಿಂದ ವಾಪಸ್ಸಾಗಿದ್ದು ಇವರನ್ನು ಕೂಡ ತಹಸೀಲ್ದಾರ್ ಚಂದ್ರಮೌಳಿ ಭೇಟಿ ನೀಡಿ ಮಾತನಾಡಿಸಿ ಉಭಯಕುಶಲೋಪರಿ ವಿಚಾರಿಸಿದ್ದರು. ಈ ವಿದ್ಯಾರ್ಥಿಗಳು ಸ್ವದೇಶಕ್ಕೆ ಮರಳಿರುವ ಬಗ್ಗೆ ಜಿಲ್ಲಾ ಜಿಲ್ಲಾಧಿಕಾರಿಗಳಿ ಮಾಹಿತಿ ನೀಡುವುದಾಗಿ ತಿಳಿಸಿದ್ಧಾರೆ.