ಪಿರಿಯಾಪಟ್ಟಣ: ಸಮಾಜ ಸುಧಾರಕರ, ಮಹನೀಯರ, ದಾರ್ಶನಿಕರ ಆದರ್ಶಗಳು ಹಾಗೂ ಅವರು ನೀಡಿದ ಸಂದೇಶಗಳನ್ನು ಸಮಾಜಕ್ಕೆ ತಿಳಿಸುವ ಉದ್ದೇಶದಿಂದ ಸರ್ಕಾರ ಜಯಂತೋತ್ಸವ ಕಾರ್ಯಕ್ರಮಗಳನ್ನು ಆವರಿಸಲಾಗುತ್ತಿದೆ ಎಂದು ತಹಶೀಲ್ದಾರ್ ಕೆ.ಚಂದ್ರಮೌಳಿ ತಿಳಿಸಿದರು.
ಪಟ್ಟಣದ ಉಪ್ಪಾರ ಬೀದಿಯ ಮಹರ್ಷಿ ಶ್ರೀ ಭಗೀರಥ ವೃತ್ತದಲ್ಲಿ ನಡೆದ ಶ್ರೀ ಭಗೀರಥ ಜಯಂತೋತ್ಸ ಕಾರ್ಯಕ್ರಮದಲ್ಲಿ ಭಗೀರಥರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಮಾನವ ಜನಾಂಗದ ಉದ್ದಾರಕ್ಕಾಗಿ ಕಾಲಕಾಲಕ್ಕೆ ಅಗತ್ಯ ಮಾರ್ಗದರ್ಶನ ಮಾಡುತ್ತಾ ಸಮಾಜವನ್ನು ಸಂಸ್ಕೃತಿ ಸಂಪನ್ನ ರಾಷ್ಟ್ರವನ್ನಾಗಿ ಮಾಡುವಲ್ಲಿ ಮಹನೀಯರ ಕೊಡುಗೆ ಅಪಾರವಾಗಿದೆ. ಈ ಪೈಕಿ ಮಹರ್ಷಿ ಭಗೀರಥರು ಅಗ್ರಗಣ್ಯರು ತನ್ನ ಪೂರ್ವಿಕರಿಗೆ ಸಧ್ಗತಿ ನೀಡಲು ಹಾಗೂ ಮಾನವ ಕುಲದ ಉದ್ದಾರಕ್ಕಾಗಿ ದೇವ ಗಂಗೆಯನ್ನು ಧರೆಗೆ ತಂದರು. ಯಾವುದೇ ಸಾಧನೆಗೆ ಶ್ರಮ ಅತ್ಯಗತ್ಯ, ತಮ್ಮ ಅಚಲ ಪರಿಶ್ರಮದಿಂದ ದೇವಲೋಕದ ಗಂಗೆಯನ್ನು ಭೂಮಿಗೆ ಕೆರ ತಂದು ತಮ್ಮ ಪೂರ್ವಜರಿಗೆ ಮುಕ್ತಿ ದೊರಕಿಸಿಕೊಟ್ಟು, ನಾಡನ್ನು ಸುಜನ ಮತ್ತು ಸುಫಲವನ್ನಾಗಿ ಮಾಡಿದರು. ಸ್ವಾರ್ಥಕ್ಕಾಗಿ ಬದುಕುವ ಬದಲು ಸರ್ವರ ಒಳಿತಿಗಾಗಿ ಬದುಕಬೇಕು ಎಂಬುದು ದಾರ್ಶನಿಕರ, ಸಮಾಜ ಸುಧಾರಕರ ಮೂಲ ಉದ್ದೇಶ ಅದಕ್ಕಾಗಿ ಅವರು ಜಾತಿ ಧರ್ಮದ ಸಂಕೋಲೆಯನ್ನು ಮೀರಿ ಸಮಾಜದ ಬದಲಾವಣೆಗೆ ತಮ್ಮನ್ನು ಅರ್ಪಿಸಿಕೊಂಡರು ಇಂಥವರ ಆದರ್ಶ ಗುಣಗಳು ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದರು.
ಉಪ್ಪಾರ ನೌಕಕರ ಮತ್ತು ವೃತ್ತಿಪರರ ಸಂಘದ ಗೌರವಾಧ್ಯಕ್ಷ ಪಿ.ಎಲ್.ರಾಮಣ್ಣ ಮಾತನಾಡಿ ರಾಜ್ಯದಲ್ಲಿ 45 ಲಕ್ಷಕ್ಕೂ ಹೆಚ್ಚು ಉಪ್ಪಾರ ಸಮಾಜಕ್ಕೆ ಸಂವಿಧಾನ ಬಧ್ದವಾಗಿ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ, ತಾಲ್ಲೂಕು ಮಟ್ಟದಲ್ಲಿ ಶೈಕ್ಷಣಿಕವಾಗಿ, ಧಾರ್ಮಿಕವಾಗಿ ಜಾಗೃತವಾಗಲು ವಿದ್ಯಾರ್ಥಿ ನಿಲಯಗಳಾಗಲಿ, ಭಗೀರಥ ಭವನವಾಗಲಿ ಇಲ್ಲ ಹಾಗಾಗಿ ಕೂಡಲೇ ಸರ್ಕಾರ ಈ ಸಮುದಾಯಕ್ಕೆ ವಿಷೇಶ ಪ್ಯಾಕೇಜದ ಘೋಷಣೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಉಪ್ಪಾರ ಸಂಘದ ಕಾರ್ಯಧ್ಯಕ್ಷ ಪಿ.ಎಸ್.ವಿಷಕಂಠಯ್ಯ, ತಾಲ್ಲೂಕು ಉಪ್ಪಾರ ಸಂಘದ ಅಧ್ಯಕ್ಷ ಜಯಶಂಕರ್, ತಾಲ್ಲೂಕು ಉಪ್ಪಾರ ನೌಕರರ ಹಾಗೂ ವೃತ್ತಿಪರರ ಸಂಘದ ಅಧ್ಯಕ್ಷ ಪಿ.ಆರ್.ಮಂಜುನಾಥ್, ಕಾರ್ಯದರ್ಶಿ ಪಿ.ಟಿ.ಲಕ್ಷ್ಮಿನಾರಾಯಣ, ಉಪ್ಪಾರ ಹಿತಾರಕ್ಷಣಾ ವೇದಿಕೆ ಅಧ್ಯಕ್ಷ ಕಿರನಲ್ಲಿ ಯೋಗೀಶ್, ತಾಲ್ಲೂಕು ಉಪ್ಪಾರ ಯುವ ವೇದಿಕೆ ಅಧ್ಯಕ್ಷ ಹೆಚ್.ಜೆ.ಪ್ರವೀಣ್, ಪರಸಭಾ ಮಾಜಿ ಉಪಾಧ್ಯಕ್ಷ ಪಿ.ಕೆ.ಸುರೇಶ್, ಮುಖಂಡರಾದ ಎಂ.ಮಂಜು, ಶಿವು, ಪಿ.ಎನ್.ಸೋಮಶೇಖರ್, ಪಿ.ಎನ್.ದೇವೇಗೌಡ, ನಂಜುಂಡಸ್ವಾಮಿ, ಶಿವಶಂಕರ್, ಮಾಕೋಡು ಬಸವರಾಜ್, ನಾಗಣ್ಣ, ಸುಬ್ರಾಯಿ, ವಿಶ್ವನಾಥ್, ಎಲೆಮಂಜು, ಲಕ್ಷ್ಮಣ, ಬಿ.ಎನ್.ಹರೀಶ್, ಎಂ.ಜೆ.ಸ್ವಾಮಿ, ಸ್ವಾಮಿ, ನಾರಾಯಣ, ಶಿವಣ್ಣ, ಚಂದ್ರ, ರಮೇಶ್, ಸುರೇಶ್ ಗ್ರಾಮದ ಯಜಮಾನದರು ಸೇರಿದಂತೆ ಮತ್ತಿತರರು ಉಪಸ್ಥಿತಿದ್ದರು.