Advertisement
ಕಳೆದ ಮೇ ತಿಂಗಳ ಆರಂಭದಲ್ಲಿ ಮಾನ್ಸೂನ್ ಮಳೆ ಆರಂಭಕ್ಕೂ ಮೊದಲು ಅಂದರೆ ಭರಣಿ ಮಳೆಗೆ ತಾಲ್ಲೂಕಿನಾದ್ಯಂತ ಸುಮಾರು 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳವನ್ನು ಬಿತ್ತನೆ ಮಾಡಲಾಗಿದೆ. ಮುಸುಕಿನ ಜೋಳಕ್ಕೆ ಆರಂಭದಲ್ಲಿ ಮಳೆಯ ಕೊರತೆ ಕಾಡುತ್ತಿದರುವುದು ಮಾತ್ರವಲ್ಲದೆ ಸೈನಿಕ ಹುಳುವಿನ ಕಾಟ ಹೆಚ್ಚಾಗಿರುವುದು ರೈತರನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಜೋಳ ಬಿತ್ತನೆ ಮಾಡಿ ಈಗಾಗಲೇ 50ರಿಂದ 60 ದಿನಗಳು ಕಳೆದಿರುವ ಮುಸುಕಿನ ಜೋಳ ಫಸಲು ಕಚ್ಚುವ ಹಂತದಲ್ಲಿರುವಾಗ ಸೈನಿಕಹುಳುವಿನ ದಾಳಿಗೆ ಸಿಲುಕಿರುವುದು ರೈತರನ್ನು ಚಿಂತೆಗೀಡು ಮಾಡಿದೆ. ಈಗಾಗಲೇ ಮುಸುಕಿನ ಜೋಳ ತೆನೆ ಮೂಡುವ ಹಂತದಲ್ಲಿದ್ದು, ಈಹಂತದಲ್ಲಿ ಸೈನಿಕ ಹುಳುಗಳು ಬೆಳೆಗೆ ಲಗ್ಗೆಇಟ್ಟಿವೆ. ಹಗಲಿನಲ್ಲಿ ಸುಳಿ ಹಾಗೂ ಬುಡದ ಮಣ್ಣಿನ ಒಳಭಾಗ ಸೇರಿಕೊಳ್ಳುವ ಹುಳುಗಳು, ರಾತ್ರಿವೇಳೆ ಹೊರಬಂದು ಗರಿಗಳನ್ನು ತಿನ್ನುತ್ತಿವೆ. ಜೊತೆಗೆ ಗರಿಗಳ ಮೇಲೆ ಹಿಕ್ಕೆ ವಿಸರ್ಜಿಸಿ ರೈತರ ನಿದ್ರೆ ಗೆಡಿಸಿವೆ.
Related Articles
Advertisement
ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದ ಮುಸುಕಿನ ಜೋಳ ಮಳೆಯ ತೀವ್ರ ಕೊರತೆಯಿಂದ ಒಣಗಿ ಹೋಗಿರುವುದು, ರೈತರಿಗೆ ಆರ್ಥಿಕವಾಗಿ ಸಂಕಷ್ಟ ಎದುರಿಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ರೋಗಬಾಧೆ ತಡೆ, ಬೆಳೆ ಪರಿಹಾರಕ್ಕೆ ಕ್ರಮವಹಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಹೇಳೀಕೆಗಳು:1. ರೈತ ಬೆಳೆದ ಬೆಳೆಗೆ ಕೃಷಿ ಅಧಿಕಾರಿಗಳ ಶಿಫಾರಸು ಹಾಗೂ ಮಾರ್ಗದರ್ಶನ ಅತ್ಯಗತ್ಯ. ಇಲಾಖೆಯ ಅಧಿಕಾರಿಗಳು ಬಿತ್ತನೆಯಿಂದ ಫಸಲಿನ ಹಂತದವರೆಗೂ ರೈತರೊಂದಿಗೆ ಸಂಪರ್ಕದಲ್ಲಿದ್ದು, ಆಗಾಗ್ಗೆ ಜಮೀನಿಗೆ ಭೇಟಿ ನೀಡಿ ಬೆಳೆ ವೀಕ್ಷಿಸಿ ಮಾಹಿತಿ ನೀಡಿದರೆ ಹೆಚ್ಚಿನ ಅನುಕೂಲವಾಗಲಿದೆ. ಜೊತೆಗೆ ರೋಗಬಾಧೆ ನಿಯಂತ್ರಣಕ್ಕೆ ಸೂಕ್ತ ಸಲಹೆ ನೀಡಬೇಕಿದೆ.
– ಹೆಚ್.ಬಿ.ಶಿವರುದ್ರ ಹಿಟ್ನೆಹೆಬ್ಬಾಗಿಲು ರೈತ., 2.ಪಿರಿಯಾಪಟ್ಟಣ ತಾಲ್ಲೂಕಿನಾದ್ಯಂತ ಬಿತ್ತನೆಗೊಂಡಿರುವ ಮುಸುಕಿನಜೋಳದ ಬೆಳೆ ಈಬಾರಿ ನಿರೀಕ್ಷೆಗೂ ಮೀರಿ ಬೆಳೆದಿದ್ದರೂ ಕೀಟಬಾಧೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ರೈತರು ಆತಂಕಕ್ಕೆ ಬದಲು ರೈತ ಸಂಪರ್ಕ ಕೇಂದ್ರಕ್ಕೆ ಆಗಮಿಸಿ ಲಭ್ಯವಿರುವ ಇಮಾಮೆಕ್ಸನ್ ಬೆಂಜವೇಟ್ ಎಂಬ ಕೀಟನಾಶಕ ಹಾಗೂ ಅಧಿಕಾರಿಗಳ ಸಲಹೆ ಅನುಸರಿಸಿ ಬೆಳೆಗೆ ಕೀಟನಾಶಕ ಸಿಂಪಡಿಸಿದರೆ ಹುಳುಗಳ ಕಾಟಕ್ಕೆಮುಕ್ತಿನೀಡಬಹುದು.
– ಡಾ.ವೈ.ಪ್ರಸಾದ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ., – ಪಿ.ಎನ್.ದೇವೇಗೌಡ ಪಿರಿಯಾಪಟ್ಟಣ