Advertisement
ಈ ಸಂದರ್ಭದಲ್ಲಿ ಅಧ್ಯಕ್ಷ ಮಂಜುನಾಥ ಸಿಂಗ್ ಮಾತನಾಡಿ ಪ್ರಸ್ತುತ ವರ್ಷದಲ್ಲಿ ಪುರಸಭೆಯ ಸ್ವಂತ ಆದಾಯವನ್ನು ಹೆಚ್ಚಾಗಿ ನಿರೀಕ್ಷೆ ಮಾಡಲಾಗಿದ್ದು, ಆಸ್ತಿತೆರಿಗೆ 120 ಲಕ್ಷ, ನೀರು ನೀರಿನ ಕರ 55 ಲಕ್ಷ, ಮಳಿಗೆ ಬಾಡಿಗೆ 36 ಲಕ್ಷ, ಉದ್ದಿಮೆ ಪರವಾನಿಗೆ ಶುಲ್ಕ ಮತ್ತು ಸಂತೆ ಶುಲ್ಕ ವಸೂಲಿ ಹಕ್ಕು ಹರಾಜು ತಲಾ 25 ಲಕ್ಷ, ಕುರಿ ಮತ್ತು ಕೋಳಿ ಮಾಂಸದ ಮಾರಾಟ ಪರವಾನಿಗೆ 35 ಲಕ್ಷ, ಕಟ್ಟಡದ ಪರವಾನಿಗೆ ಶುಲ್ಕ 7 ಲಕ್ಷ, ಅಭಿವೃದ್ಧಿ ಶುಲ್ಕ 6.75 ಲಕ್ಷ, ಇತರೆ ಆದಾಯ 33.85 ಲಕ್ಷ,ರಾಜ್ಯ ಹಣಕಾಸು ಆಯೋಗದ ಅನುದಾನ 26 ಲಕ್ಷ, ಕೇಂದ್ರ ಸರ್ಕಾರದ ಅನುದಾನ 15ನೇ ಹಣಕಾಸು ಯೋಜನೆ 132 ಲಕ್ಷ, ಸ್ವಚ್ಛಭಾರತ್ ಯೋಜನೆಯಡಿ 50 ಲಕ್ಷ,ರಾಜ್ಯ ಹಣಕಾಸು ಆಯೋಗದ ಬರಪರಿಹಾರ 15 ಲಕ್ಷ, ವಿದ್ಯುಚ್ಛಕ್ತಿ ಅನುದಾನ 178 ಲಕ್ಷ ನಿರೀಕ್ಷಿಸಲಾಗಿದೆ. ವೇತನ ಪಾವತಿಗೆ 122 ಲಕ್ಷ, ರಸ್ತೆ, ಚರಂಡಿ ನಿರ್ಮಾಣಕ್ಕೆ 300 ಲಕ್ಷ, ಕಲ್ವರ್ಟ್ ಮತ್ತು ಕಿರು ಸೇತುವೆ ನಿರ್ಮಾಣಕ್ಕೆ 100 ಲಕ್ಷ, ಬೀದಿದೀಪ ನಿರ್ಮಾಣ ಮತ್ತು ಘನ ತ್ಯಾಜ್ಯ ವಸ್ತು ವಿಲೇವಾರಿ 120 ಲಕ್ಷ, ನೀರು ಸರಬರಾಜಿಗೆ 80 ಲಕ್ಷ, ಬೀದಿದೀಪ ನಿರ್ವಹಣೆಗೆ 31.25 ಲಕ್ಷ,ರಸ್ತೆ, ಚರಂಡಿ ದುರಸ್ತಿ ಮತ್ತು ನಿರ್ವಹಣೆಗೆ 4.50 ಲಕ್ಷ, ನೈರ್ಮಲ್ಯ ನಿರ್ವಹಣೆಗೆ 87 ಲಕ್ಷ, ಬಡತನ ನಿರ್ಮೂಲನೆಗೆ 24.10%ರಡಿಯಲ್ಲಿ ಎಸ್ ಎಫ್ ಸಿ ಅನುದಾನದಲ್ಲಿ 158 ಲಕ್ಷ ಮತ್ತು ಮುನೀಸಿಪಲ್ ಫಂಡ್ ನಿಂದ 2.65% ಹಾಗೂ 07:25 ರಡಿಯಲ್ಲಿ ಎಸ್ ಎಫ್ ಸಿ ಅನುದಾನ 1.90 ಲಕ್ಷ, ಮುನ್ಸಿಪಲ್ ಪಂಡಿನ 0.80 ಲಕ್ಷ, 5%ರಡಿಯಲ್ಲಿ ಎಸ್ ಎಫ್ ಸಿ ಅನುದಾನ 1.30 ಲಕ್ಷ ಅಂದಾಜಿಸಲಾಗಿದೆ. ಕ್ಷೇಮಾಭಿವೃದ್ಧಿ ಮತ್ತು ಕೆಎಂಆರ್ ಪಿ ಯೋಜನೆ ನೌಕರರ ವೇತನ ಪಾವತಿಗೆ 40 ಲಕ್ಷ, ಡೇ ನಲ್ಮ್ ಯೋಜನೆ, ವಿವಿಧ ಕಾರ್ಯಕ್ರಮಗಳಿಗೆ 10 ಲಕ್ಷ ವೆಚ್ಚವನ್ನು ಅಂದಾಜಿಸಲಾಗಿದೆ ಎಂದರು.
Advertisement
ಪುರಸಭೆಗೆ 51.23 ಲಕ್ಷ ರೂಗಳ ಉಳಿತಾಯ ಬಜೆಟ್
03:49 PM Mar 23, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.