Advertisement

ಪೈಪ್‌ಲೈನ್‌ ಕಾಮಗಾರಿ ಮೇಲ್ದರ್ಜೆಗೆ

03:17 PM Jun 11, 2018 | Team Udayavani |

ಚಿತ್ರದುರ್ಗ: ಚಿತ್ರದುರ್ಗ ಮತ್ತು ಹಿರಿಯೂರು ನಗರಗಳಿಗೆ ಕುಡಿಯುವ ನೀರು ಪೂರೈಕೆ ಮೂಲದ ಹಿರಿಯೂರಿನ ವಾಣಿವಿಲಾಸ ಸಾಗರದ ಪೈಪ್‌ಲೈನ್‌ ಕಾಮಗಾರಿಯನ್ನು ಮೇಲ್ದರ್ಜೆಗೇರಿಸಲಾಗಿದೆ. ಅಕ್ಟೋಬರ್‌ ತಿಂಗಳಿನಲ್ಲಿ ಕಾಮಗಾರಿಗೆ ಚಾಲನೆ ದೊರೆಯಲಿದೆ.

Advertisement

ಚಿತ್ರದುರ್ಗ ನಗರದ ಜನತೆಗೆ ನೀರು ಸರಬರಾಜು ಮಾಡಲು 1972-73ನೇ ಸಾಲಿನಲ್ಲಿ ಮೊದಲ ಹಂತದ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿತ್ತು. ಸುಮಾರು 45 ವರ್ಷಗಳ ಹಳೆ ಯೋಜನೆ ಇದಾಗಿದ್ದು, 9.08 ಎಂಎಲ್‌ಡಿ ಸಾಮರ್ಥ್ಯ ಇತ್ತು. ಗರಿಷ್ಠ ನೀರು ಸರಬರಾಜು ಪ್ರಮಾಣ 5-6 ಎಂಎಲ್‌ ಡಿ ಸಾಮರ್ಥ್ಯವಾಗಿದೆ.

ಹಿರಿಯೂರಿನಿಂದ ಚಿತ್ರದುರ್ಗದವರೆಗೆ 34 ಕಿಮೀ ಉದ್ದದ ಏರುಕೊಳವೆ ಮಾರ್ಗದಲ್ಲಿ ನೀರು ಪೂರೈಕೆ
ಮಾಡಲಾಗುತ್ತಿತ್ತು. 9 ಎಂಎಲ್‌ಡಿ ಸಾಮರ್ಥಯದ ಜಲಶುದ್ಧೀಕರಣ ಘಟಕಕ್ಕೆ ಕಾಯಕಲ್ಪ ನೀಡಲಾಗುತ್ತಿದೆ. ಮೂಲ ಜಲ ಶುದ್ಧೀಕರಣ ಘಟಕ ಮತ್ತು ಬುರುಜನರೊಪ್ಪ ಪಂಪ್‌ಹೌಸ್‌ ಗಳು ಮೇಲ್ದರ್ಜೆಗೇರಲಿವೆ. ಬುರುಜನರೊಪ್ಪ ಐಪಿಎಸ್‌ನಲ್ಲಿ ಹೊಸದಾಗಿ ಸಂಪ್‌ ಮತ್ತು ಪಂಪ್‌ಹೌಸ್‌ ನಿರ್ಮಾಣ, ಚಿತ್ರದುರ್ಗ ನಗರದ ನಾಮಕಲ್‌ ಗ್ಯಾರೇಜ್‌ ಹತ್ತತಿರದ ಗುಡ್ಡದ ಮೇಲೆ 5 ಲಕ್ಷ ಲೀಟರ್‌ ಸಾಮರ್ಥ್ಯದ ನೆಲಮಟ್ಟದ ಜಲ ಸಂಗ್ರಹಾಗಾರ ನಿರ್ಮಾಣ ಮಾಡಲು ಅರಣ್ಯ ಇಲಾಖೆಯಿಂದ 0.31 ಹೆಕ್ಟೇರ್‌ ಜಮೀನು ಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ. 34.66 ಕಿಮೀ ಮಾರ್ಗದಲ್ಲಿ 400 ಮಿಮೀ ವ್ಯಾಸದ ಡಿಐ ಏರು ಕೊಳವೆ ಅಳವಡಿಕೆ ಕಾರ್ಯದಲ್ಲಿ 25 ಕಿಮೀಯಷ್ಟು ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ.

ಚಿತ್ರದುರ್ಗ ನಗರದಲ್ಲಿನ ಹಾಲಿ 5 ಟ್ಯಾಂಕ್‌ ಮತ್ತು 2 ಹೊಸ ಟ್ಯಾಂಕ್‌ಗಳಿಗೆ 8.5 ಕಿಮೀ ಉದ್ದದ ಕೊಳವೆಗಳ ಪೈಕಿ 7.8 ಕಿಮೀ ಉದ್ದದ ಕೊಳವೆಗಳನ್ನು ಅಳವಡಿಸಲಾಗಿದೆ. ಫೀಡರ್‌ ಕೊಳವೆ ಮಾರ್ಗಗಳ ಬದಲಾವಣೆ ಮಾಡಿ 9.3 ಕಿಮೀ ಉದ್ದದ ಪೈಪ್‌ ಅಳವಡಿಕೆ ಮಾಡಲಾಗುತ್ತದೆ. ಆಯುರ್ವೇದಿಕ್ ಕಾಲೇಜು ಹತ್ತಿರದ ಆದಿಶಕ್ತಿ ನಗರದಲ್ಲಿ 10 ಲಕ್ಷ ಲೀಟರ್‌ ಸಾಮರ್ಥ್ಯದ ಎರಡು ಮೇಲ್ಮಟ್ಟದ ಜಲಸಂಗ್ರಹಾಗಾರ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ.

Advertisement

ಯೋಜನೆಗೆ 47.65 ಕೋಟಿ ರೂ. ಗಳನ್ನು ವೆಚ್ಚ ಮಾಡಲಾಗುತ್ತಿದೆ. ಇದರಲ್ಲಿ 2.80 ಕೋಟಿ ರೂ. ವೆಚ್ಚದಲ್ಲಿ 320 ಎಚ್‌ಪಿ ಸಾಮರ್ಥ್ಯದ 2 ಸೆಂಟ್ರಿ ಪ್ಯೂಗಲ್‌ ಪಂಪ್‌ ಸೆಟ್‌, 2.83 ಕೋಟಿ ರೂ. ವೆಚ್ಚದಲ್ಲಿ 300 ಎಚ್‌ಪಿ ಸಾಮರ್ಥ್ಯದ ಸೆಂಟ್ರಿಪ್ಯೂಗಲ್‌ ಪಂಪ್‌ಸೆಟ್‌ ಬದಲಾವಣೆ ಮಾಡಲಾಗುತ್ತಿದೆ. 30.90 ಕೋಟಿ ರೂ. ವೆಚ್ಚದಲ್ಲಿ 400 ಮಿಮೀ ವ್ಯಾಸದ ಡಿಐ ಏರುಕೊಳವೆ ಮಾರ್ಗವನ್ನು 30 ಕಿಮೀ ತನಕ ಅಳವಡಿಕೆ ಮಾಡಲಾಗುತ್ತದೆ. 

61 ಲಕ್ಷ ರೂ. ವೆಚ್ಚದಲ್ಲಿ 9.08 ಎಂಎಲ್‌ ಡಿ ಸಾಮರ್ಥ್ಯದ ಜಲ ಶುದ್ಧೀಕರಣ ಘಟಕಕ್ಕೆ ಕಾಯಕಲ್ಪ ನೀಡಲಾಗುತ್ತಿದೆ. 4.40 ಕೋಟಿ ರೂ. ವೆಚ್ಚದಲ್ಲಿ 7 ಜಲಸಂಗ್ರಹಾಗಾರಗಳಿಗೆ 10 ಕಿಮೀ ಫೀಡರ್‌ ಕೊಳವೆಮಾರ್ಗಗಳ ಬದಲಾವಣೆ ಮಾಡಲಾಗುತ್ತಿದ್ದು, ಭೂಸ್ವಾ ಧೀನ ವೆಚ್ಚವೂ ಇದರಲ್ಲಿ ಸೇರಿದೆ.

10 ಲಕ್ಷ ಲೀಟರ್‌ ಸಾಮರ್ಥ್ಯದ ಎರಡು ಟ್ಯಾಂಕ್‌ ನಿರ್ಮಿಸಲು 2.78 ಕೋಟಿ ರೂ. ವ್ಯಯಿಸಲಾಗುತ್ತದೆ. 1.45 ಕೋಟಿ ರೂ.ಗಳಲ್ಲಿ ಕಾಮನಬಾವಿ ಮತ್ತು ಬುರುಜನಹಟ್ಟಿಯಲ್ಲಿ ನೆಲಮಟ್ಟದ ಜಲ ಸಂಗ್ರಹಾಗಾರದಲ್ಲಿನ ಟ್ಯಾಂಕ್‌ಗಳ ಪುನಶ್ಚೇತನ ಮಾಡಲಾಗುವುದು. 94 ಲಕ್ಷ ರೂ.ಗಳಲ್ಲಿ ವೆಚ್ಚದಲ್ಲಿ ಸರ್ಚ್‌ ಪ್ರೊಟೆಕ್ಷನ್‌ ಡಿವೈಸ್‌ ಅಳವಡಿಸಲಾಗುತ್ತದೆ.

ಅಟಲ್‌ ನಗರ ಪರಿವರ್ತನಾ ಪುನರುಜ್ಜೀವನ ಅಭಿಯಾನ (ಅಮೃತ್‌) ಯೋಜನೆಯಡಿ 47.65 ಕೋಟಿ ರೂ.
ಗಳ ವೆಚ್ಚದಲ್ಲಿ ಕುಡಿಯುವ ನೀರು ಪೂರೈಕೆ ಪೈಪ್‌ಲೈನ್‌ ಕಾಮಗಾರಿಯನ್ನು ಮೇಲ್ದರ್ಜೆಗೇರಿಸಲಾಗಿದೆ. ಈ
ಅನುದಾನದಲ್ಲಿ ಶೇ. 50ರಷ್ಟು ಕೇಂದ್ರ ಸರ್ಕಾರದ ಪಾಲು, ಶೇ. 20ರಷ್ಟು ರಾಜ್ಯ ಸರ್ಕಾರದ ಪಾಲು. ಇನ್ನುಳಿದ ಶೇ. 30ರಷ್ಟು ಪಾಲನ್ನು ನಗರಸಭೆ ಭರಿಸಬೇಕಿದೆ. ನೀರು ಸರಬರಾಜು ಮಾಡುವ ಪೈಪ್‌ ಲೈನ್‌ ಕಾಮಗಾರಿ ಮೇಲ್ದರ್ಜೆಗೇರಿಸಲಾಗಿದೆ. ಇದರಿಂದ ನೀರು ಪೂರೈಕೆ ಅಡೆತಡೆಗಳು ನಿವಾರಣೆಯಾಗಬಹುದು ಎಂಬ ನಿರೀಕ್ಷೆ ಹೊಂದಲಾಗಿದೆ

ಹಿರಿಯೂರು-ಚಿತ್ರದುರ್ಗ ಮಧ್ಯೆ ಪೈಪ್‌ಲೈನ್‌ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಶೀಘ್ರದಲ್ಲೇ ಪೂರ್ಣಗೊಳಿಸಿ ನಿರಂತರವಾಗಿ ನೀರು ಪೂರೈಕೆ ಮಾಡಲಾಗುತ್ತದೆ.
 ಹನುಮಂತಪ್ಪ, ಇಇ, ಕ.ನ.ನೀ. ಸ ಮತ್ತು ಒಳ ಚರಂಡಿ ಮಂಡಳಿ ವಿಭಾಗ

„ಹರಿಯಬ್ಬೆ ಹೆಂಜಾರಪ್ಪ

Advertisement

Udayavani is now on Telegram. Click here to join our channel and stay updated with the latest news.

Next