Advertisement

ಪೈಪ್‌ಲೈನ್‌ ಅಡುಗೆ ಅನಿಲ ಸಂಪರ್ಕ ಶೀಘ್ರ: ಸಿದ್ದೇಶ್ವರ

05:45 PM Nov 27, 2020 | Suhan S |

ದಾವಣಗೆರೆ: ಜನವರಿಯಲ್ಲಿ ದಾವಣಗೆರೆ ನಗರದಲ್ಲಿ ಮನೆ ಮನೆಗೆ ಪೈಪ್‌ಲೈನ್‌ ಮೂಲಕ ಅಡುಗೆ ಅನಿಲ ಸಂಪರ್ಕ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದರು.

Advertisement

ಕೇಂದ್ರ ಸರ್ಕಾರದ ಪೆಟ್ರೋಲಿಯಂ ಮತ್ತು ನ್ಯಾಚುರಲ್‌ ಗ್ಯಾಸ್‌ ರೆಗ್ಯುಲೇಟರಿ ಬೋರ್ಡ್‌ವತಿಯಿಂದ ದಾವಣಗೆರೆ ಮತ್ತು ಚಿತ್ರದುರ್ಗ ನಗರಗಳಲ್ಲಿರುವ ಮನೆಗಳಿಗೆ ಪೈಪ್‌ ಮೂಲಕ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷಿ ಯೋಜನೆಯ ಕುರಿತು ಗುರುವಾರ ಯೂನಿಸಾನ್‌ ಕಂಪನಿ ಅಧಿಕಾರಿಗಳೊಂದಿಗೆ ಅವರು ಸಭೆ ನಡೆಸಿದರು.

ಯೂನಿಸಾನ್‌ ಕಂಪನಿ ಅಡಿಷನಲ್‌ ಮ್ಯಾನೇಜರ್‌ ಸುದೀಪ್‌ ಶರ್ಮಾ ಮಾತನಾಡಿ,2018 ರಲ್ಲಿ ಯೋಜನೆಗೆ ಭೂಮಿಪೂಜೆ ನೆರವೇರಿಸಲಾಗಿತ್ತು. ಕೇಂದ್ರ ಸರ್ಕಾರದಪೆಟ್ರೋಲಿಯಂ ಸಚಿವಾಲಯ ನಡೆಸಿದಹರಾಜು ಪ್ರಕ್ರಿಯೆಯಲ್ಲಿ ದೇಶದ ಒಟ್ಟು 86 ಭೌಗೋಳಿಕ ಪ್ರದೇಶಗಳನ್ನು ವಿವಿಧ ಕಂಪನಿಗಳಿಗೆ ಹಂಚಿಕೆ ಮಾಡಲಾಗಿದೆ. ಯೂನಿಸಾನ್‌ ಕಂಪನಿಚಿತ್ರದುರ್ಗ ಮತ್ತು ದಾವಣಗೆರೆ ಭೌಗೋಳಿಕ ಪ್ರದೇಶಗಳನ್ನು ಹಂಚಿಕೆ ಮಾಡಲಾಗಿದೆ. ಮುಂಬರುವ ಏಳೆಂಟು ವರ್ಷಗಳಲ್ಲಿ ದಾವಣಗೆರೆಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಸುಮಾರು 1.10 ಲಕ್ಷ ಮನೆಗಳಿಗೆ ಪೈಪ್ಡ್ ಗ್ಯಾಸ್‌ ಸಂಪರ್ಕ ಕಲ್ಪಿಸುವ ಉದ್ದೇಶವಿದೆ ಎಂದು ಮಾಹಿತಿ ನೀಡಿದರು.

ಈಗಾಗಲೇ ಚಿತ್ರದುರ್ಗ ನಗರದಲ್ಲಿ ಮನೆ ಮನೆಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸುವಕಾಮಗಾರಿ ಪ್ರಾರಂಭಿಸಲಾಗಿದೆ. ದಾವಣಗೆರೆಯ ಎಸ್‌.ಎಸ್‌. ಬಡಾವಣೆ ಮತ್ತು ವಿನಾಯಕಬಡಾವಣೆಯಲ್ಲಿ ಜನವರಿಯಲ್ಲಿ ಕಾಮಗಾರಿ ಪ್ರಾರಂಭ ಮಾಡಲಾಗುವುದು. ಈಗಾಗಲೇ ಸರ್ವೆ ಕಾರ್ಯ ನಡೆಸಿದ್ದು, ಸುಮಾರು 16 ಕಿಮೀ ಪೈಪ್‌ಲೈನ್‌ ಕಾಮಗಾರಿ ನಡೆಸುವಉದ್ದೇಶವಿದೆ. ಕಾಮಗಾರಿಯ ಸಂಪೂರ್ಣ ವಿವರವನ್ನು ದಾವಣಗೆರೆ ಮಹಾನಗರ ಪಾಲಿಕೆಗೆಸಲ್ಲಿಸಲಾಗಿದೆ. ಪೈಪ್‌ ಲೈನ್‌ ಅಳವಡಿಸಿದ ನಂತರ ರಸ್ತೆ ದುರಸ್ತಿ ಸೇರಿದಂತೆ ಇತರೆ ಡ್ಯಾಮೇಜ್‌ ಚಾರ್ಜ್‌ಗಳ ಡಿಮ್ಯಾಂಡ್‌ ನೋಟ್‌ ಅನ್ನುಪಾಲಿಕೆಯವರು ನೀಡಿದ ನಂತರ ಕಾಮಗಾರಿ ಪ್ರಾರಂಭಿಸುವುದಾಗಿ ತಿಳಿಸಿದರು.

ಗೇಲ್‌ ಕಂಪನಿಯ ನ್ಯಾಚುರಲ್‌ ಗ್ಯಾಸ್‌ ಪೈಪ್‌ ಲೈನ್‌ ಪ್ಲಾಂಟ್‌ ಚಿತ್ರದುರ್ಗದಲ್ಲಿದೆ. ಅಲ್ಲಿಂದಸುಮಾರು 60 ಕಿಮೀ ಉದ್ದದ ಪೈಪ್‌ಲೈನ್‌ ಮಾಡಿದಾವಣಗೆರೆ ನಗರದ ಸಮೀಪ 1 ಎಕರೆ ಜಾಗದಲ್ಲಿ ಗ್ಯಾಸ್‌ ರಿಸೀವಿಂಗ್‌ ಸ್ಟೇಷನ್‌ ನಿರ್ಮಾಣ ಮಾಡಲಾಗುವುದು ಎಂದರು. ಗ್ಯಾಸ್‌ ರಿಸಿವಿಂಗ್‌ ಸ್ಟೇಷನ್‌ ನಿರ್ಮಾಣ ಮಾಡಲು ಒಂದು ಎಕರೆ ಜಮೀನಿನ ಹುಡುಕಾಟ  ದಲ್ಲಿರುವುದಾಗಿ ಸಂಸದರ ಗಮನ ಸಳೆದರು.

Advertisement

ತಕ್ಷಣ ಜಿಲ್ಲಾಧಿಕಾರಿಯವರೊಂದಿಗೆ ದೂರವಾಣಿ ಮುಖಾಂತರ ಮಾತನಾಡಿದ ಸಂಸದರು, ಯೂನಿಸಾನ್‌ ಕಂಪನಿಯವರ ಜೊತೆ ಮಾತನಾಡಿನಗರದ ಸಮೀಪ ಕಂಪನಿಯ ಬೇಡಿಕೆ ಅನುಸಾರ ಜಮೀನು ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.

ಜಮೀನು ಲಭ್ಯತೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಹೆದ್ದಾರಿ ಪಕ್ಕದಲ್ಲಿ ಪೈಪ್‌ಲೈನ್‌ ಅಳವಡಿಸಲು ಅನುಮತಿ ನೀಡಿದ ತಕ್ಷಣ ಚಿತ್ರದುರ್ಗದಿಂದ ದಾವಣಗೆರೆ ನಗರಕ್ಕೆ ಕಾಮಗಾರಿ ಪ್ರಾರಂಭಿಸುವುದಾಗಿ ಸುದೀಪ್‌ ಶರ್ಮಾ ತಿಳಿಸಿದರು. ಜನವರಿಯಲ್ಲಿ ಬಡಾವಣೆಗಳಲ್ಲಿ ಕೆಲಸ ಪ್ರಾರಂಭವಾದ ತಕ್ಷಣ ಉಳಿದ ವಾರ್ಡುಗಳಿಗೆಅನುಮತಿ ಕೋರಿ ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿದರೆ ಅನುಮತಿ ನೀಡುವುದಾಗಿಮಹಾನಗರ ಪಾಲಿಕೆಯ ಆಯುಕ್ತ ವಿಶ್ವನಾಥ ಮುದ್ದಜ್ಜಿ ಹೇಳಿದರು. ಯೂನಿಸಾನ್‌ ಕಂಪನಿ ಸಂಪರ್ಕಾಧಿಕಾರಿ ಸುನೀಲ್‌ ಪೂಜಾರಿ, ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next