Advertisement

“ಪಿಂಕಿ ಎಲ್ಲಿ?’ಚಿತ್ರಕ್ಕೆ ಅಂತಾರಾಷ್ಟ್ರೀಯ ಮನ್ನಣೆ

04:20 PM Jul 02, 2021 | Team Udayavani |

ಕೆಲ ತಿಂಗಳ ಹಿಂದಷ್ಟೇ ನ್ಯೂಯಾರ್ಕ್‌ನ ಇಂಡಿಯನ್‌ ಫಿಲಂ ಫೆಸ್ಟಿವಲ್‌ನಲ್ಲಿ “ಪಿಂಕಿ ಎಲ್ಲಿ?’ (ವೇರ್‌ ಈಸ್‌ ಪಿಂಕಿ?) ಚಿತ್ರ ಅತ್ಯುತ್ತಮ ಚಿತ್ರಕಥೆ ಮತ್ತು ಅತ್ಯುತ್ತಮ ನಟನೆ ವಿಭಾಗದಲ್ಲಿ ಎರಡು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತ್ತು. ಇದೀಗ “ಪಿಂಕಿ ಎಲ್ಲಿ?’ ಚಿತ್ರ ಅಂಥದ್ದೇ ಮತ್ತೂಂದು ಪ್ರತಿಷ್ಠಿತ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಮತ್ತೂಂದು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

Advertisement

ಹೌದು, ಕೆನಡಾದಲ್ಲಿ ನಡೆದ “ಒಟ್ಟಾವಾ ಇಂಡಿಯನ್‌ ಫಿಲಂ ಫೆಸ್ಟಿವಲ್‌ ಅವಾರ್ಡ್ಸ್‌’ನಲ್ಲಿ ಪ್ರದರ್ಶನಗೊಂಡ “ಪಿಂಕಿ ಎಲ್ಲಿ?’ ಚಿತ್ರ ತೀರ್ಪುಗಾರರ ವಿಶೇಷ ಮನ್ನಣೆಗೆ ಪಾತ್ರವಾಗಿದ್ದು, ಎರಡು ಪ್ರಶಸ್ತಿಗಳನ್ನು ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಚಿತ್ರದ ಅತ್ಯುತ್ತಮ ಚಿತ್ರಕಥೆಗಾಗಿ ಪೃಥ್ವಿ ಕೋಣನೂರು ಒಂದು ಪ್ರಶಸ್ತಿ ಪಡೆದುಕೊಂಡರೆ, ತೀರ್ಪುಗಾರರ ವಿಶೇಷ ಪ್ರಶಸ್ತಿ ನಟಿ ಅಕ್ಷತಾ ಪಾಂಡವಪುರ ಅವರ ಪಾಲಾಗಿದೆ.

ಇನ್ನು ತಮ್ಮ ಚಿತ್ರಕ್ಕೆ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮನ್ನಣೆ ಸಿಗುತ್ತಿರುವುದರ ಬಗ್ಗೆ ಮಾತನಾಡುವ ನಿರ್ಮಾಪಕ ಕೃಷ್ಣೇಗೌಡ, “ಭಾರತದಲ್ಲಿ ಈಗಾಗಲೇಕೋಲ್ಕತಾ, ಮುಂಬೈ, ಕೇರಳ, ಜೈಪುರ್‌, ಪನೋರಮ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್‌ಗೆ ನಮ್ಮ ಸಿನಿಮಾ ಆಯ್ಕೆಯಾಗಿತ್ತು. ಈಗ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಪಡೆದು ಕೊಳ್ಳುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಅದರಲ್ಲೂ “ಒಟ್ಟಾವಾ’ದಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಪಡೆದ ಮೊದಲ ಕನ್ನಡ ಸಿನಿಮಾ ನಮ್ಮದು ಎಂಬ ಹೆಮ್ಮೆ ಇದೆ’ ಎನ್ನುತ್ತಾರೆ.

ಇನ್ನು ಪೃಥ್ವಿಕೋಣನೂರು “ಪಿಂಕಿ ಎಲ್ಲಿ?’ ಚಿತ್ರವನ್ನು ನಿರ್ದೇಶಿಸಿದ್ದು, ಕೃಷ್ಣೇಗೌಡ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅಕ್ಷತಾ ಪಾಂಡವಪುರ ಮತ್ತು ದೀಪಕ್‌ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. “ಪಿಂಕಿ ಎಲ್ಲಿ?’ ನೈಜ ಘಟನೆಯನ್ನು ಆಧಾರಿತ ಚಿತ್ರವಾಗಿದ್ದು, 8 ತಿಂಗಳ ಮಗುವೊಂದುಕಳೆದು ಹೋದಾಗ ಆ ಮಗುವಿನ ಸುತ್ತ ಬರುವ ಪಾತ್ರಗಳ ತಲ್ಲಣಗಳ ಸುತ್ತ ಚಿತ್ರ ನಡೆಯುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next