Advertisement

ಮೈಬಣ್ಣವನ್ನು ಕಾಂತಿಯುತವಾಗಿಸುವ “ಗುಲಾಬಿ’

01:13 AM Jan 28, 2020 | Sriram |

ಚರ್ಮದ ಮೈಬಣ್ಣವನ್ನು ಕಾಂತಿಯುತವಾಗಿಸಲು ಗುಲಾಬಿ ದಳಗಳು ಪ್ರಮುಖ ಪಾತ್ರ ವಹಿಸುತ್ತವೆ. ಚರ್ಮದ ಕಾಂತಿಯುತಕ್ಕೆ, ಸನ್‌ ಟ್ಯಾನ್‌, ಮೊಡವೆಗಳನ್ನು ಹೋಗಲಾಡಿಸಲು, ಕಪ್ಪು ಕಲೆಗಳನ್ನು ಹೋಗಲಾಡಿಸಲು ಗುಲಾಬಿ ಹೂವಿನ ದಳಗಳು ಪ್ರಮುಖ ಸ್ಥಾನ ಪಡೆದುಕೊಳ್ಳುತ್ತವೆ.

Advertisement

ಗುಲಾಬಿ ಸೌಂದರ್ಯ ಸ್ನಾನ
ಒಂದು ಕಪ್‌ ಗುಲಾಬಿ ದಳಗಳನ್ನು ಪುಡಿಮಾಡಿ ಮಿಶ್ರಣ ಮಾಡಿ ಮತ್ತು 2 ಕಪ್‌ ಬೆಚ್ಚಗಿನ ನೀರಿನಲ್ಲಿ 10 ನಿಮಿಷ ನೆನೆಸಿಡಿ. ಈಗ ಗುಲಾಬಿ ದಳಗಳನ್ನು ಸಂಪೂರ್ಣವಾಗಿ ಹಿಚುಕಿ ಈ ನೀರನ್ನು ಮಾತ್ರ ಉಳಿಸಿಕೊಳ್ಳಿ. ಈ ಗುಲಾಬಿ ನೆನೆಸಿದ ನೀರು ಮತ್ತು 2 ಚಮಚ ನಿಂಬೆ ರಸವನ್ನು ಸ್ನಾನದ ನೀರಿಗೆ ಸೇರಿಸಿ ಸ್ನಾನ ಮಾಡಿ. ಈ ಸ್ನಾನವು ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಲು ಮತ್ತು ಕಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಇದು ದಿನವಿಡೀ ತಾಜಾ ಮತ್ತು ಪರಿಮಳಯುಕ್ತವಾಗಿಸುತ್ತದೆ. ನಿಯಮಿತ ಬಳಕೆಯು ಚರ್ಮವನ್ನು ರೇಷ್ಮೆಯಂತಹ ಮೃದುವಾಗಿಸುತ್ತದೆ.

ಫೇಸ್‌ ಮಾಸ್ಕ್
ಗುಲಾಬಿ ದಳಗಳನ್ನು ನೀರಿನಲ್ಲಿ ಪುಡಿ ಮಾಡಿ ಅಥವಾ ಮಿಶ್ರಣ ಮಾಡಿ ಸುಮಾರು 1 ಟೀಸ್ಪೂನ್‌ ಶ್ರೀಗಂಧದ ಪುಡಿ, ಒಂದು ಚಿಟಿಕೆ ಹಸಿ ಅರಿಶಿನ ಮತ್ತು 1 ಟೀಸ್ಪೂನ್‌ ನಿಂಬೆ ರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಪೇಸ್ಟನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ 15 ನಿಮಿಷಗಳ ಕಾಲ ಬಿಡಿ. ತಂಪಾದ ನೀರಿನಿಂದ ತೊಳೆಯಿರಿ. ಮೊಡವೆಗಳನ್ನು ಹೊಗಲಾಡಿಸಲು ಚರ್ಮದ ಹೊಳಪಿಗೆ ಈ ಪೇಸ್ಟ್‌ ಉತ್ತಮವಾಗಿದೆ

ಜೇನು ತುಪ್ಪ ಸೇರಿಸಿ
8-10 ಗುಲಾಬಿ ದಳಗಳನ್ನು 4-5 ಟೀಸ್ಪೂನ್‌ ಬೆಚ್ಚಗಿನ ನೀರಿನಲ್ಲಿ 30 ನಿಮಿಷಗಳ ಕಾಲ ನೆನೆಸಿಡಿ. ದಳಗಳನ್ನು ನೀರಿನಲ್ಲಿ ಬೆರೆಸಿ ಅನಂತರ 2 ಚಮಚ ಜೇನುತುಪ್ಪ ಸೇರಿಸಿ. ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ. 20 ನಿಮಿಷಗಳ ಕಾಲ ಬಿಡಿ, ತದನಂತರ ತಂಪಾದ ನೀರಿನಿಂದ ತೊಳೆಯಿರಿ.

ದಳಗಳ ಸðಬ್‌
ಗುಲಾಬಿ ದಳಗಳನ್ನು ಸ್ವಲ್ಪ ಬೆಚ್ಚಗಿನ ನೀರಿನಲ್ಲಿ 30 ನಿಮಿಷಗಳ ಕಾಲ ನೆನೆಸಿಡಿ. ಅನಂತರ ದಳಗಳನ್ನು ಪುಡಿಮಾಡಿ ಓಟ್ಸ್‌ನೊಂದಿಗೆ ಮಿಶ್ರಣ ಮಾಡಿ. ಇದನ್ನು ಮುಖ ಮತ್ತು ಕುತ್ತಿಗೆಗೆ ನಿಧಾನವಾಗಿ ಸðಬ್‌ ಮಾಡಿ. ತಣ್ಣೀರಿನಿಂದ ತೊಳೆಯಿರಿ. ಇದರಿಂದ ನಿಮ್ಮ ಮುಖ ಕಾಂತಿಯುತವಾಗಿ ಕಂಗೊಳಿಸುತ್ತದೆ.

Advertisement

– ಪೂರ್ಣಿಮಾ ಪೆರ್ಣಂಕಿಲ

Advertisement

Udayavani is now on Telegram. Click here to join our channel and stay updated with the latest news.

Next