Advertisement

ಗುಲಾಬಿ ತಲೆ ಬಾತು

02:50 PM Mar 31, 2019 | mahesh |

ಬೇಟೆಯಾವುದರಲ್ಲಿ ಈ ಹಕ್ಕಿಗೆ ವಿಶೇಷ ಗುಣವಿದೆ. ಚಿಕ್ಕ ಕ್ರಿಮಿಗಳನ್ನು ನೀರಿನಲ್ಲಿ ಮುಳುಗಿ ಮೇಲೆಳುವ ಇಲ್ಲವೇ -ಕೆಲವೊಮ್ಮೆ ನೀರಿನ ಮೇಲೈಯಲ್ಲಿ ಈಜಿ ನೀರನ್ನು ಕದಡಿದಂತೆ ಮಾಡಿ, ಅದರ ಅಡಿಯಲ್ಲಿರುವ ಕ್ರಿಮಿಗಳನ್ನು ಮೇಲ್ಭಾಗಕ್ಕೆ ಬರುವಂತೆ ಮಾಡಿ ತಿಂದು ಬಿಡುತ್ತದೆ.

Advertisement

ಇದು ಭಾರತದ ತುಂಬೆಲ್ಲಾ ಕಾಣುವ ಬಾತುಕೋಳಿ. ಇದು ಸಾಕು ಬಾತು ಕೋಳಿಯಷ್ಟೇ ದೊಡ್ಡದಿರುತ್ತದೆ. ಗಂಡು ಪಕ್ಷಿಯು ಅಚ್ಚ ಗುಲಾಬಿ ಬಣ್ಣದಿಂದ ಕೂಡಿರುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ ಗಂಡು ಹಕ್ಕಿಯ ತಲೆಯ ಮೇಲೆ ಚಿಕ್ಕ ಜುಟ್ಟು ಇರುವುದು ಕಾಣುತ್ತದೆ. ಸಿಳ್ಳೆ ಬಾತುವಿನಂತೆ ಕುತ್ತಿಗೆ ಇದೆ. ಹೆಣ್ಣು ಬಾತು ಗಂಡಿಗಿಂತ ತಿಳಿ ಗುಲಾಬಿ ಬಣ್ಣದಿಂದ ಕೂಡಿರುತ್ತದೆ. ಇದರ ಚುಂಚು ಸಹ ಅದೇ ಬಣ್ಣದ್ದು. ಇದು ಭಾರತದ ಪ್ರಾದೇಶಿಕ ಹಕ್ಕಿ. ಬಿಹಾರ, ಅಸ್ಸಾಂ, ಮಣಿಪುರ ಒರಿಸ್ಸಾ, ಪಂಜಾಬ್‌ನಲ್ಲಿ ಈ ಹಕ್ಕಿಯ ಇರು ನೆಲೆ ಇದೆ. ಅದರಂತೆ ದಕ್ಷಿಣ ಭಾರತದ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳುನಾಡುಗಳಲ್ಲೂ ಈ ಹಕ್ಕಿಯನ್ನು ಕಾಣಬಹುದು.

ಗುಲಾಬಿ ತಲೆ ಬಾತುವಿನ ಬಣ್ಣ ಆಧರಿಸಿ 3 ಉಪಜಾತಿಯನ್ನು ಗುರುತಿಸಲಾಗಿದೆ. ಇಂಗ್ಲಿಷ್‌ನಲ್ಲಿ ಡ‌ಕ್‌, ಪೋಕಾರ್ಡ್‌, ಸ್ವಾಮ್‌, ಗೋನ್ಸ್‌ ಎಂದು ಈ ಪಕ್ಷಿಯನ್ನು ಗುರುತಿಸುತ್ತಾರೆ. ಈ ಹಕ್ಕಿ ನೀರಲ್ಲಿ ತೇಲುವ ರೀತಿ, ಹೊಂಚುಹಾಕಿ ಬೇಟೆಯಾಡುವ ಕ್ರಮ, ಮುಳುಗಿ ಆಟವಾಡುವ ರೀತಿಯನ್ನು ಆಧರಿಸಿ ಈ ರೀತಿ ಕರೆಯಲಾಗಿದೆ. ಬಾತುಗಳು ಸಾಮಾನ್ಯವಾಗಿ ಒಂದೇ ರೀತಿ ಇದ್ದರೂ, ಅವುಗಳ ಆಕಾರ ಬಣ್ಣ, ನೀರಿನಲ್ಲಿ ಆಟವಾಡುವ ಪರಿ ಸ್ವಲ್ಪ ಭಿನ್ನವೇ. ಇದು ಬೇಟೆಯಾಡುವ ರೀತಿ ಭಿನ್ನ. ನೀರಲ್ಲಿ ಹೊಂಚು ಹಾಕುತ್ತಾ ಸುಮ್ಮನೆ ತೇಲುತ್ತಾ ಇರುತ್ತದೆ. ತನ್ನ ಸಮೀಪ ಬರುವ ಚಿಕ್ಕ ಜಲಚರಗಳನ್ನು ತಕ್ಷಣ ಮುಳುಗಿ ಹಿಡಿಯುವ ರೀತಿ ಥ್ರಿಲ್ಲಿಂಗ್‌.

ಇದು ಭಾರತಕ್ಕೆ ವಲಸೆ ಬರುವ ಬಾತುಗಳಲ್ಲೇ ಅಪರೂಪವಾದದ್ದು. ಒಂದು ಸಲ ಬಂದರೆ ಇಲ್ಲೆ ಇರುನೆಲೆ ಮಾಡಿಕೊಂಡು ಮರಿಮಾಡುವುದು ರೂಢಿ. ಚಳಿಗಾಲ ಕಳೆಯಲು ಬಂದ ಕೆಲವು ಬಾತುಗಳು ಇಲ್ಲಿನ ಕೆರೆ, ಕೆಸರಿನ ಜಲಸಸ್ಯ -ಹುಲ್ಲು ಆಶ್ರಯ ಇರುವ ಜಾಗ, ಗಜನೀ ಪ್ರದೇಶ, ಅಣೆಕಟ್ಟು ಹಿನ್ನೀರಿನ ಪ್ರದೇಶ, ಚಿಕ್ಕ ಸಸ್ಯ ಮತ್ತು ಹುಲ್ಲು ಕವಳೆ, ಭತ್ತ ,ಜೋಳ ,ನವಣೆ ಇತ್ಯಾದಿ ಹೊಲದ ಸಮೀಪ ಇರು ನೆಲೆ ನಿರ್ಮಿಸಿಕೊಳ್ಳುತ್ತವೆ. ಅಧಿಕ ನೀರು ಮತ್ತು ತೇಲುವ ಸಸ್ಯ ಇರುವಲ್ಲಿ ಇದು ತಾತ್ಕಾಲಿಕ ಇರುನೆಲೆ ಮಾಡಿಕೊಂಡಿರುತ್ತದೆ.

ಬೇಟೆಯಾವುದರಲ್ಲಿ ಈ ಹಕ್ಕಿಗಿರುವ ವಿಶೇಷ ಗುಣದ ಬಗ್ಗೆ ಇಲ್ಲಿ ಹೇಳಲೇಬೇಕು. ಚಿಕ್ಕ ಕ್ರಿಮಿಗಳನ್ನು ನೀರಿನಲ್ಲಿ ಮುಳುಗಿ ಮೇಲೆಳುವ ಇಲ್ಲವೇ -ಕೆಲವೊಮ್ಮೆ ನೀರಿನ ಮೇಲೈಯಲ್ಲಿ ಈಜಿ ನೀರನ್ನು ಕದಡಿದಂತೆ ಮಾಡಿ, ಅದರ ಅಡಿಯಲ್ಲಿರುವ ಕ್ರಿಮಿಗಳನ್ನು ಮೇಲ್ಭಾಗಕ್ಕೆ ಬರುವಂತೆ ಮಾಡಿ ತಿಂದು ಬಿಡುತ್ತದೆ. ಈ ಹಕ್ಕಿಗೆ ನೀರಿನಲ್ಲಿ ಅತಿ ಹೆಚ್ಚು ಮುಳುಗುವ ಸಾಮರ್ಥ್ಯವಿದೆ.

Advertisement

ಮೇ ನಿಂದ ಜೂನ್‌ ಅವಧಿಯಲ್ಲಿ ಇದು ಮರಿಮಾಡುವುದು. ದೊಡ್ಡ ಹುಲ್ಲಿರುವ ಪ್ರದೇಶದಲ್ಲಿ ಇದು ಗೂಡನ್ನು ನಿರ್ಮಿಸುತ್ತದೆ. ಹೆಚ್ಚಾಗಿ ನೀರು, ಭತ್ತ ಗದ್ದೆ ಇಂಥ ಕಡೆಯಲ್ಲೇ ಇರುನೆಲೆಗಳಿರುವುದರಿಂದ,

ಜಲಸಸ್ಯ, ಹುಲ್ಲನ್ನು ಉಪಯೋಗಿಸಿ ಗೂಡನ್ನು ನಿರ್ಮಿಸುತ್ತದೆ. ತಿಳಿಯಾದ ಬಿಳಿ ಬಣ್ಣದ 6-7 ಮೊಟ್ಟೆ ಇಡುತ್ತದೆ. ಕೆಲವೊಮ್ಮ ಜೋಡಿಯಾಗಿ ಇಲ್ಲವೇ 30ರ ಗುಂಪಿನಲ್ಲೂ ಕಾಣುವುದು ಉಂಟು. ಬಹಳ ಹಿಂದೆ ಕೊಲ್ಕತ್ತಾದ ಪೇಟೆಯಲ್ಲಿ ಈ ಹಕ್ಕಿಯನ್ನು ಮಾರುತ್ತಿದ್ದರು. ಈಗ ಬೇಟೆಯಾಡುವುದನ್ನೇ ನಿಷೇಧಿಸಿರುವುದರಿಂದ ಮಾರಾಟ ನಿಂತಿದ್ದು, ಸಂತತಿ ವೃದ್ಧಿಸಲು ನೆರವಾಗಿದೆ.

ಬಾತು ಎಂದರೆ ತಪ್ಪಾಗಲಾರದು. ಇವು ಂದೆ ಭಾರತ, ಮೈನಾವರ, ಬಂಗ್ಲಾದೇಶದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಇದ್ದವು. 41 ರಿಂದ 43 ಸೆಂ.ು ಆಕಾರದಲ್ಲೂ ಕಂಡಿವೆ. ಗಂಡು-ಉದ್ದ ಚುಂಚು, ಉದ್ದ ಕುತ್ತಿಗೆ, ಬಾರೀಕಾದ ಕುತ್ತಿಗೆ ಮತ್ತು ಚುಂಚು ಇರುವುದರಿಂದ ಇತರ ಬಾತಿಗಿಂದ ಇದು ಭಿನ್ನ ಎಂದು ಸುಲಭವಾಗಿ ಗುರುತಿಸಬಹುದಾಗಿದೆ. ಇದರಂತೆ ಹೆಣ್ಣು ಹಕ್ಕಿ ಸ್ವಲಪ ತಿಳಿ ಗುಲಾಬಿ ಚುಂಚು ತಲೆ, ಕುತ್ತಿಗೆ ಇರುವುದರಿಂದ ಸುಲಭವಾಗಿ ಇದನ್ನು ಇರುನೆಲೆಯುಲ್ಲಿ ಗುರುತಿಸಹುದಾಗಿದೆ. ಇದು ಈಗ ಇಲ್ಲ .-ಅಳಿದಿವೆ ಎಂದು ಅನೇಕರ ಅಭಿಪ್ರಾಯ ಇದೆ. ಮಾಂಸಕ್ಕಾಗಿ ಅತಿ ಬೇಟೆಯಾಡುವುದು. ಗೂಡು ಕಟ್ಟುವ ಇರುನೆಲೆ ಮತ್ತು ಅದರ ಆಹಾರವಾದ ಜಲಸಸ್ಯಗಳ ನಾಷ -ನೀರಿನ ಆಶ್ರಯದ ಕೊರೆತೆುಂದ ಇದರ ಸಂತತಿ ಪೂರ್ಣ ಅಳಿದಿದೆ. ಹಾಗಾಗಿ ಇನ್ನಾದರೂ ಅಳಿನ ಅಂಚಿನಲ್ಲಿರುವ ಅನೇಕ ನಿರುಪದ್ರ ಬಾತನ್ನು ಉಳಿಸುವ ಕಾರ್ಯ ಆಗಬೇಕಿದೆ.ಬಾತುಕೋಳಿಯ ಹೆನ್ಣು ಹಕ್ಕಿಯನ್ನು ಕನ್ನಡದಲ್ಲಿ ಹೇಟೆ ಎಂದು ಗಂಡನ್ನು ಹುಂಜ ಎಂದು ಸಾಮಾನ್ಯವಾಗಿ ಕೋಳಿ ಮತ್ತು ಬಾತುಕೋಳಿಯ ಕುರಿತು ಹೆಳುವಾಗ ಕರೆಯುತ್ತೇವೆ. ಇದರ ಆಹಾರ ಹೆಚ್ಚಾಗಿ ಜಲಸಸ್ಯ ಮತ್ತು ಅದರ ಕಾಳು ಧಾನ್ಯದ ಕಾಳುಗಳು -ಕೆಲವೊಮ್ಮೆ ಚಿಕ್ಕ ನೀರಿನ ಕ್ರಿುಗಳನ್ನು ತಿನ್ನುವುದು. ಇದರ ಕುತ್ತಿಗೆಯಲ್ಲಿ ದೇಹದ ಕಪ್ಪು ಭಾಗ ಕುತ್ತಿಗೆಯ ಮುಂಬಾದ ಅಡಿಯವರೆಗೂ ಚಾಚಿದೆ. ಹೆಣ್ಣು ಹಕ್ಕಿಯಲ್ಲಿ ಈ ಬಣ್ಣ ತಿಳಿ ಕಂದು ಇರುವುದು. ಇದರ ರೆಕ್ಕೆಯ ಅಮಚಿನಲ್ಲಿ ಬಿಳಿ ರೇಖೆ ಇರುವುದು. ಪಿಂಕ್‌, ಕಪ್ಪು-ತಿಳಿಕಂದು ರೆಕ್ಕೆಯ ಅಂಚಿನಲ್ಲಿ ಬಿಳಿ ಬಣ್ಣ ಗುಲಾಬಿ ಬಾತಿನ ಲಕ್ಷಣ. ದೂರದಿಂದ ನೋಡಿ¨ರೂ ಕಾಣುವಂತಿರುವುದು. ರೆಕ್ಕೆ ಅಡಿಭಾಗದ ಮಸಕು ಬಿಬಣ್ಣ ಹಾರುವಾಗ ಕಾಣುವುದು. ಕಡಿಮೆ ನೀರಿರುವ ಗಜನೀ ಪ್ರದೇಶದ ಭಾಗವನ್ನು ಇದು ಮರಿಮಾಡಲು ಬಳಸುವುದು. ನೀರಿನ ಹೊಂಡ- ನದಿ ತೀರ, ನದಿಯ ಮುಖಜ ಪ್ರದೇಶದಲ್ಲಿ ದೊಡ್ಡ ಜೊಂಡು ಹುಲ್ಲು ಬೆಳೆದಿರುವಲ್ಲಿ

-ಈಗ ಇದರ ಸಂತತಿ ಇಲ್ಲದಿರುವುದಕ್ಕೆ ಇದು ಕಾರಣವಾಗಿದೆ. ಈಗ ಇದರ ಬೇಟೆ ಮತ್ತು ಮಾರಾಟ ನಿಷೇಧಿಸಲಾಗಿದೆ. ಇದು ಸಮಾನ್ಯವಾಗಿ ತೇಲುತ್ತಲೇ ತನ್ನ ಆಹಾರ ದೊರಕಿಸುವುದು ಜಿಗಿದು ಮುಳುಕು ಹಾಕಿ ಆಹಾರ ಸಂಗ್ರಸುವುದು ಕಡಿಮೆ. ಜಲ ಸಸ್ಯ ಮತ್ತು ಮೃದ್ವಂಗಿ ಡಿದು ತಿಂದಿರುವುದು ವರದಿಯಾಗಿದೆ. ಕಾಡುಕೋಳಿಗಳ ಜೊತೆ ಮಾರುವಾಗ ಇವು ಕಲ್ಕತ್ತಾದ ಪೇಟೆಯಲ್ಲಿ ಕಾಣುತ್ತಿದ್ದವು. ಈಗ ಅಲ್ಲೂ ಕಾಣುತ್ತಿಲ್ಲ ಹಾಗಾಗಿ ಇವು ಅಳಿದಿವೆ ಎಂದು ವರದದಿಯಾಗಿದೆ. ಇವುಗಳ ಇನ್ನೆರಡು ತಳಿ ಸಹ ಕಾಣುತ್ತಿಲ್ಲ. ಹಾಗಾಗಿ ಈ ಗುಲಾಬಿ ತಲೆ ಬಾತು ಅಳಿದಿವೆ ಎಂದು ಭಾಸಲಾಗಿದೆ. ಇದನ್ನು ಹೋಲುವ ಕೆಂಪು ತಲೆ ಬಾತು ಈಗ ಉಳಿದಿದೆ ಆದರೆ ಇದರ ಕುತ್ತಿಗೆ ದಪ್ಪ ಮತ್ತು ಸ್ವಲ್ಪ ಚಿಕ್ಕದು. ಗುಲಾಬಿ ತಲೆ ಬಾತು ಈಗ ದಾಖಲೆಯಲ್ಲಿ ಮಾತ್ರ ಇದೆ. ಇದು ಜೀವ ಸರಪಳಿುಂದ ಮಾಯವಾಗಿದೆ ಎಂಬ ಬೇಸರ ಎಲ್ಲಾ ಪಕ್ಷಿ ಪ್ರಿಯರಿಗೆ ಇದೆ. ಹಾಗಾಗಿ ಇನ್ನು ಅಳಿನ ಅಂಚಿನಲ್ಲಿರುವ ಇತರ ಪಕ್ಷಿ ಮತ್ತು ಜಲ ಹಕ್ಕಿ ಹಾಗು ಬಾತುಕೋಳಿಗಳ ಪ್ರಬೇಧವಾದ ಪೋಕಾರ್ಡ, ಚಲೆ/ì, ಸರಳೆ ಇತ್ಯಾದಿ ಬಾತುಗಳನ್ನಾದರೂ ಉಳಿಸೋಣ. ಅವುಗಳ ಇರುನೆಲೆ ಕಾಪಾಡೋಣ.

ಪಿ. ವಿ. ಭಟ್‌ ಮೂರೂರು

Advertisement

Udayavani is now on Telegram. Click here to join our channel and stay updated with the latest news.

Next