Advertisement

ಈಕೆಯನ್ನು ತಾಪಸಿ ಎನ್ನು !

06:00 AM Jun 15, 2018 | Team Udayavani |

ಪಿಂಕ್‌ ಜೋಡಿ ಮತ್ತೂಮ್ಮೆ ಮೋಡಿ ಮಾಡಲು ಬರಲಿದೆ. ಹಾಗೆಂದು ಇದು ರೋಮ್ಯಾಂಟಿಕ್‌ ಜೋಡಿಯಲ್ಲ. ಎರಡು ವರ್ಷದ ಹಿಂದೆ ಬಂದ ಅಮಿತಾಭ್‌ ಬಚ್ಚನ್‌ ಮತ್ತು ತಾಪಸಿ ಪನ್ನು ನಟಿಸಿದ್ದ ಪಿಂಕ್‌ ಚಿತ್ರ ಭಾರೀ ಸಂಚಲನ ಮೂಡಿಸಿತ್ತು. 

Advertisement

ಲೈಂಗಿಕ ಶೋಷಣೆಯ ಕುರಿತಾದ ಕತೆಯನ್ನೊಳಗೊಂಡಿರುವ ಚಿತ್ರದಲ್ಲಿ ಅಮಿತಾಭ್‌ ಬಚ್ಚನ್‌ ವಕೀಲರಾಗಿ ಕಾಣಿಸಿಕೊಂಡಿದ್ದರು. ಮೂವರು ನಾಯಕಿಯರ ಪೈಕಿ ತಾಪಸಿ ಪನ್ನು ಸಖತ್‌ ಮಿಂಚಿದ್ದರು. ಇದೀಗ ಮತ್ತೂಮ್ಮೆ ತಾಪಸಿ ಪನ್ನುಗೆ ಅಮಿತಾಭ್‌ ಬಚ್ಚನ್‌ ಜತೆಗೆ ನಟಿಸುವ ಯೋಗ ಕೂಡಿ ಬಂದಿದೆ. ಸುಜೋಯ್‌ ಘೋಷ್‌ ನಿರ್ದೇಶಿಸಲಿರುವ ಈ ಚಿತ್ರವೂ ಪಿಂಕ್‌ನಂಥ ವಾಸ್ತವಕ್ಕೆ ಹತ್ತಿರವಾಗಿರುವ ಕಥಾವಸ್ತುವನ್ನು ಹೊಂದಿರುವುದರಿಂದ ಪಿಂಕ್‌ ಮ್ಯಾಜಿಕ್‌ ಮರುಸೃಷ್ಟಿಯಾಗಲಿದೆ ಎಂಬ ವಿಶ್ವಾಸದಲ್ಲಿದ್ದಾಳೆ ತಾಪಸಿ. ಪಿಂಕ್‌ ಬಳಿಕ ಅಮಿತಾಭ್‌ ಬಚ್ಚನ್‌-ತಾಪಸಿ ಪನ್ನು ಹಿಟ್‌ ಜೋಡಿಯೆಂದೇ ಬಾಲಿವುಡ್‌ನ‌ಲ್ಲಿ ಅರಿಯಲ್ಪಡುತ್ತಿದೆ. 

ಯಾರಾದರೂ ಈ ಮಾತನ್ನು ಹೇಳಿದಾಗ ತಾಪಸಿಗೆ ಬಹಳ ಖುಷಿಯಾಗುತ್ತದಂತೆ. ಉಳಿದವರೆಲ್ಲ ಬಿಗ್‌ಬಿ ಜತೆಗೆ ಕನಿಷ್ಠ ಒಂದು ದೃಶ್ಯದಲ್ಲಿ ಕಾಣಿಸಿಕೊಳ್ಳಲು ಅದೃಷ್ಟ ಸಿಕ್ಕಿದರೆ ಸಾಕು ಎಂದು ಕಾದು ಕುಳಿತಿರುವಾಗ ತನಗೆ ಎರಡೆರಡು ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿರುವುದು ಮಹಾಭಾಗ್ಯ ಎಂದೇ ತಾಪಸಿ ಭಾವಿಸಿದ್ದಾಳೆ. ಹಾಗೆ ನೋಡಿದರೆ ಸದ್ಯಕ್ಕೆ ಬಾಲಿವುಡ್‌ನ‌ ಅತ್ಯಂತ ಬ್ಯುಸಿ ನಟಿಯೂ ಅವಳೇ. ಸದ್ಯಕ್ಕೆ ತಾಪಸಿಯ ಕೈಯಲ್ಲಿ ನಾಲ್ಕು ಚಿತ್ರಗಳಿವೆ. ಪ್ರತಿಯೊಂದು ಭಿನ್ನವಾದ ಮತ್ತು ಬಾಲಿವುಡ್‌ನ‌ವರ ಭಾಷೆಯಲ್ಲಿ ಹೇಳುವುದಾದರೆ ರಿಯಲಿಸ್ಟಿಕ್‌ ಕತೆಯನ್ನು ಹೊಂದಿದ್ದು, ಇವೆಲ್ಲ ನಟಿಯಾಗಿ ತಾಪಸಿಯನ್ನು ಎತ್ತರಕ್ಕೇರಿಸುವ ಸಾಧ್ಯತೆಯಿದೆ.

ಪಿಂಕ್‌ ಬಳಿಕ ತಾಪಸಿಗೆ ಈ ಮಾದರಿಯ ಪಾತ್ರಗಳೇ ಸಿಗುತ್ತಿವೆ. ಆದರೆ, ಒಂದೇ ರೀತಿಯ ಪಾತ್ರಕ್ಕೆ ಬ್ರಾಂಡ್‌ ಆಗಲು ಇಷ್ಟವಿಲ್ಲದಿರುವುದರಿಂದ ಅವಳು ಹಲವು ಚಿತ್ರಗಳನ್ನು ತಿರಸ್ಕರಿಸಿದ್ದಾಳಂತೆ. ಎಲ್ಲ ಚಿತ್ರಗಳು ಪಿಂಕ್‌ ಆಗಲು ಸಾಧ್ಯವಿಲ್ಲ ಎನ್ನುವುದನ್ನು ಅವಳು ಅರಿತುಕೊಂಡಿದ್ದಾಳೆ. ಹೀಗಾಗಿ, ಚಿತ್ರಗಳ ಆಯ್ಕೆಯಲ್ಲಿ ಬಹಳ ಚೂಸಿಯಾಗಿದ್ದಾಳೆ. 

Advertisement

Udayavani is now on Telegram. Click here to join our channel and stay updated with the latest news.

Next